ಸನ್ನಿ ಸಾವಿಗೆ ಕಣ್ಣೀರಿಟ್ಟ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕುಟುಂಬ
First Published | Jul 13, 2021, 7:00 PM ISTಸಾಕು ಪ್ರಾಣಿಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಮಾಲೀಕ ಮತ್ತು ಸಾಕು ಪ್ರಾಣಿಯ ನಡುವೆ ಅವಿನಾಭಾವ ಸಂಬಂಧ ಬೆಳೆದಿರುತ್ತದೆ. ನಾಯಿ- ಬೆಕ್ಕುಗಳನ್ನು ಸಾಕುವವರಿಗೆ ಆ ಪ್ರಾಣಿಗಳೇ ಸರ್ವಸ್ವವೂ ಆಗಿರುತ್ತವೆ. ಅದರಲ್ಲೂ ಶ್ವಾನ ಮನುಷ್ಯನ ಅತಿ ನಿಯತ್ತಿನ ಪ್ರಾಣಿ. ಓರ್ವ ಕುಟುಂಬ ಸದಸ್ಯನಂತೆ ಶ್ವಾನವನ್ನು ಕಾಣುತ್ತಾರೆ. ಅದರಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕುಟುಂಬದ ಸದಸ್ಯನಂತಿದ್ದ ಮುದ್ದಿನ ನಾಯಿ ಮೃತಪಟ್ಟಿದೆ. ಇದಕ್ಕೆ ಬೊಮ್ಮಾಯಿ ಕಣ್ಣೀರಾಗಿದ್ದಾರೆ.