ನಿಂಬೆ ಚುಚ್ಕೊಳ್ಳಿ, ನಿತ್ಯಾನಂದ ಜಪ ಪಠಿಸಿ: ಕೊರೋನಾಗೆ 'ಕೈಲಾಸ'ದೊಡೆಯನ ಟಿಪ್ಸ್!

First Published | Mar 18, 2020, 4:07 PM IST

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ತಮ್ಮ ತ್ರಿಶೂಲ ಹಾಗೂ ಶಿರೋಭೂಷಣ ಸಮೇತ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಕೊರೊನಾ ವೈರಸ್‌ ಎಂಬ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಈ ಮನುಕುಲವನ್ನು ಅದರ ಕರಾಳ ನಾಲಿಗೆಯಿಂದ ಕಾಪಾಡೋಡಲು ಕಾಣಿಸಿಕೊಂಡಿದ್ದಾರೆ. ಅವರು ನೀಡಿರುವ ಟಿಪ್ಸ್ ಏನು?

ನಿತ್ಯಾನಂದ ಗುರೂಜಿಗಳು ತಮ್ಮ ತ್ರಿಶೂಲ ಹಾಗೂ ಶಿರೋಭೂಷಣ ಸಮೇತ ಮತ್ತೆ ಪ್ರತ್ಯಕ್ಷರಾಗಿದ್ದಾರೆ.
ಈ ಬಾರಿ ಅವರು ಕಾಣಿಸಿಕೊಂಡಿರೋದು, ಕೊರೊನಾ ವೈರಸ್‌ ಎಂಬ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಈ ಮನುಕುಲವನ್ನು ಅದರ ಕರಾಳ ನಾಲಿಗೆಯಿಂದ ಕಾಪಾಡಲು.
Tap to resize

ನಿತ್ಯಾ ಟಿಪ್ಸಿನಲ್ಲಿ ಕೊರೋನಾ ತಡೆಯಲು ಸಾಂಪ್ರದಾಯಿಕ ಲಸಿಕೆಯೂ ಇದೆ.
ಬೆಂಕಿ ಕೆಂಡದ ಮೇಲೆ ನಡೆಯಬೇಕಂತೆ. ನಿತ್ಯಾ ಮಂತ್ರವನ್ನು ಸಾವಿರ ಸಲ ಪಠಿಸಬೇಕಂತೆ.
ಹಿನ್ನೆಲೆಯಲ್ಲಿ ಸಂಸ್ಕೃತ ಶ್ಲೋಕಗಳು ಪ್ಲೇ ಆಗ್ತಿರಬೇಕಂತೆ. ಆಗ ಕೆಂಡದ ಮೇಲೆ ನಡೆಯೋದು ಸುಲಭವಂತೆ!
ಮೈಗೆ ನಿಂಬೆಹಣ್ಣು ಚುಚ್ಚಿಕೊಳ್ಳಬೇಕಂತೆ.
ಒಂದು ನಿಂಬೆಹಣ್ಣು ಕಚ್ಚಿಕೊಂಡು ಓಡಾಡಬೇಡಿ. ಕನಿಷ್ಠ ಹನ್ನೊಂದು ನಿಂಬೆಹಣ್ಣುಗಳನ್ನು ಮೈಗೆ ಚುಚ್ಚಿಕೊಳ್ಳಬೇಕಂತೆ!
ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಂತೆ. ಗಂಡಸರಾಗಲಿ, ಹೆಂಗಸರಾಗಲಿ ಈ ಇಪ್ಪತ್ತೆಂಟು ದಿನಗಳ ಕಾಲ ಯಾರೊಂದಿಗೂ ಸೆಕ್ಸ್‌ ಮಾಡಬಾರದಂತೆ.
ಇನ್ನು ಈ ಕೊರೊನಾ ಮಾರಿ- ಮಾರಿಯಮ್ಮನಿಗೆ ಸಂಬಂಧಿಸಿದ್ದು. ಮಾರಿಯಮ್ಮನನ್ನು ಆರಾಧಿಸಿದರೆ ಅದು ಹತ್ತಿರ ಸುಳಿಯುವುದಿಲ್ಲ. ಹೀಗಾಗಿ ನಿತ್ಯಾನಂದರು ಒಂದು ಮಂತ್ರವನ್ನು ನಮಗೆ ನೀಡಿದ್ದಾರೆ. ಅದು ಹೀಗಿದೆ- ಓಂ ಹ್ರೀಂ ಶ್ರೀಂ ಇಂದ್ರಕ್ಷೀಂ ಶ್ರೀಂ ಪೇಂ ಸ್ವಾಹಾ. ಇದನ್ನು ಜಪಿಸುತ್ತಾ ಇರಬೇಕಂತೆ.
ಮಾರಿಯಮ್ಮನಿಗೆ ನೈವೇದ್ಯವಾಗಿ ಕಬ್ಬಿನ ಹಾಲು, ಬೆಲ್ಲದ ನೀರಿನ ಪಾನಕ, ಹೆಚ್ಚಿದ ಸೌತೆಕಾಯಿ ಹೋಳು, ತೆಂಗಿನ ನೀರು, ಎಳನೀರು, ಮಜ್ಜಿಗೆ ಅರ್ಪಿಸಬೇಕಂತೆ.
ಓಂ ನಿತ್ಯಾನಂದಂ ಪರಮಶಿವಂ ಅಂದರೆ ನಿತ್ಯಾನಂದನೇ ಪರಮಶಿವ ಅಂತ ಜಪಿಸಬೇಕು.
ಪ್ರತಿದಿನ ಕನಿಷ್ಠ ಸಾವಿರ ಬಾರಿ ಅಥವಾ ಎಷ್ಟು ಸಾಧ್ಯವೋ ಅಷ್ಟು, ನೆನಪಿಗೆ ಬಂದಾಗಲೆಲ್ಲಾ ನಿತ್ಯಾನಂದನನನ್ನು ಜಪಿಸಬೇಕು.
ದಿನಕ್ಕೆರಡು ಬಾರಿ ಸ್ನಾನ ಮಾಡಬೇಕು. ನೆಲದ ಮೇಲೆ ಮಲಗಬೇಕು. ಹತ್ತಿಯ ಬೆಡ್‌ಶೀಟ್‌ ಬಳಸಬೇಕು. ಉಣ್ಣೆಯದ್ದು ಬಳಸಬಹುದು. ಹಾಸಿಗೆಯಲ್ಲಿ ಮಲಗಲೇಬಾರದು. ಇದೆಲ್ಲ ನಿತ್ಯಾ ಮಹಾವ್ರತದ ರೂಲುಗಳು.
ಎಲ್ಲ ಮಾಡಬಹುದು. ಆದರೆ ಕೆಂಡದ ಮೇಲೆ ನಡೆಯೋದೇ ಸ್ವಲ್ಪ ರಿಸ್ಕಿ!

Latest Videos

click me!