ಟಿಕೆಟ್-ಟಿಕೆಟ್ ಎನ್ನುತ್ತಲೇ ಉಚಿತ ಮಾಸ್ಕ್ ವಿತರಿಸಿದ KSRTC ಕಂಡಕ್ಟರ್
First Published | Mar 14, 2020, 3:31 PM ISTಕೊರೋನಾ ವೈರಸ್‌ನಿಂದ ಬರುವಂಥ ಕೋವಿಡ್ 19 ಎಂಬ ಮಾರಾಣಾಂತಿಕ ಕಾಯಿಲೆ ಚೀನಾ ದೇಶ ಮಾತ್ರವಲ್ಲ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಈ ಕಾಯಿಲೆಗೆ ಯಾವುದೇ ಔಷಧಿ ಇಲ್ಲದ ಕಾರಣ ಸದ್ಯಕ್ಕೆ ಈ ಭಯಾನಕ ಕಾಯಿಲೆ ತಡೆಗಟ್ಟಲು ಇರುವ ಒಂದೇ ಒಂದು ಮಾರ್ಗ ಸ್ವಯಂ ರಕ್ಷಣೆ. ಅದು ಮಾಸ್ಕ್ ಹಾಗೂ ಸ್ಯಾನಿಟೈಜರ್ಸ್ ಬಳಸುವ ಮೂಲಕ ನಮ್ಮ ನಾವು ಕಾಪಾಡಿಕೊಳ್ಳಬೇಕು.ಆದ್ರೆ, ಮೆಡಿಕಲ್ ಸ್ಟೋರ್‌ನಲ್ಲಿ ಮಾಸ್ಕ್‌ಗಳು, ಸ್ಯಾನಿಟೈಜರ್ಸ್ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ KSRTC ಬಸ್ ಕಂಡಕ್ಟರ್ ಹಾಗೂ ಡ್ರೈವರ್ ಪ್ರಯಾಣಿಕರಿಗೆ ತಮ್ಮ ಸ್ವಂತ ಹಣದಲ್ಲಿ ಉಚಿತ ಮಾಸ್ಕ್ ವಿತರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಎಲ್ಲಿ? ಯಾರು ಆ ಬಸ್ ನಿರ್ವಾಹಕ ಮತ್ತು ಚಾಲಕ? ಅವರ ಫೋಟೋಗಳು ಇಲ್ಲಿವೆ ನೋಡಿ.