ಡಿಕೆಶಿ ಮನೆಗೆ ಬಂತು 2.8 ಕೋಟಿ ರೂ ಬೆಲೆಯ ಲೆಕ್ಸಸ್ ಕಾರು, ಅಧಿಕಾರ ಬದಲಾವಣೆ ಸೂಚನೆಯೇ?

Chethan Kumar   | ANI
Published : Feb 11, 2026, 01:31 PM IST

ಡಿಕೆ ಶಿವಕುಮಾರ್ ಮನೆಗೆ ಬಂತು 2.8 ಕೋಟಿ ಬೆಲೆಯ ಲೆಕ್ಸಸ್ ಕಾರು, ಅಧಿಕಾರ ಬದಲಾವಣೆ ಸೂಚನೆಯೇ? ಇತ್ತೀಚಿನ ಕೆಲ ವರ್ಷಗಳಲ್ಲಿ ಸಿಎಂ ಹೊಸ ಕಾರು ಖರೀದಿಸುವುದು, ಬಳಕೆ ಮಾಡುವುದು ಸಾಮಾನ್ಯವಾಗಿದೆ. ಈ ಎಲ್ಲಾ ಬೆಳವಣಿಗೆ ರಾಜ್ಯದಲ್ಲಿ ಅಧಿಕಾರ ಬದಲಾವಣೆಗಳ ಸೂಚನೆಯೇ?

PREV
16
ಹೊಚ್ಚ ಹೊಸ ಲೆಕ್ಸಸ್ ಕಾರು ಖರೀದಿಸಿದ ಡಿಕೆಶಿ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜಕಾರಣಿ ಮಾತ್ರವಲ್ಲ ಯಶಸ್ವಿ ಉದ್ಯಮಿ ಕೂಡ ಹೌದು. ಡಿಕೆ ಶಿವಕುಮಾರ್ ಬಳಿ ಹಲವು ಕಾರುಗಳಿವೆ. ಈ ಪಟ್ಟಿಗೆ ಮತ್ತೊಂದು ಸೇರಿಕೊಂಡಿದೆ. ಈ ಬಾರಿ ಡಿಕೆ ಶಿವಕುಮಾರ್ ಬರೋಬ್ಬರಿ 2.8 ಕೋಟಿ ರೂಪಾಯಿ ಬೆಲೆಯ ಲೆಕ್ಸಸ್ LM 350h ಕಾರು ಖರೀದಿಸಿದ್ದಾರೆ.

26
2.8 ಕೋಟಿ ರೂ ಬೆಲೆಯ ಕಾರು

ಡಿಕೆ ಶಿವಕುಮಾರ್ ಖರೀದಿಸಿದ ಲೆಕ್ಸಸ್ LM 350h ಕಾರಿನ ಬೆಲೆ 2.8 ಕೋಟಿ ರೂಪಾಯಿ. ಇದು 7 ಸೀಟಿನ ಕಾರಾಗಿದ್ದು, ಅತ್ಯಂತ ಐಷಾರಾಮಿ ಹಾಗೂ ದೀರ್ಘ ಪ್ರಯಾಣಕ್ಕೆ ಹೇಳಿ ಮಾಡಿಸಿದ ಕಾರು. ಬಿಳಿ ಬಣ್ಣದ ಲೆಕ್ಸಸ್ LM 350h ಕಾರು ಇಂದು ಡಿಕೆ ಶಿವಕುಮಾರ್ ಅವರ ಸದಾಶಿವನಗರದ ಮನೆಗೆ ಡೆಲಿವರಿಯಾಗಿದೆ.

36
ಹೊಸ ಕಾರನ್ನು ಬರಮಾಡಿಕೊಂಡ ಡಿಕೆ ಶಿವಕುಮಾರ್ ಪತ್ನಿ

ಡಿಕೆ ಶಿವಕುಮಾರ್ ಅವರ ಹೊಸ ಲೆಕ್ಸಸ್ LM 350h ಕಾರನ್ನು ಡಿಕೆಶಿ ಪತ್ನಿ ಬರಮಾಡಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಹೊಸ ಬ್ರಾಂಡ್ ನ್ಯೂ ಕಾರಿಗೆ ಫ್ಯಾನ್ಸಿ ನಂಬರ್ ಪಡೆದುಕೊಂಡಿದ್ದಾರೆ. ಖರೀದಿಸಿದ ಲೆಕ್ಸಸ್ ಕಾರಿಗೆ KA 03 NZ 6666 ನಂಬರ್ ಪಡೆದುಕೊಂಡಿದ್ದಾರೆ ಡಿಕೆ ಶಿವಕುಮಾರ್.

46
ಅಧಿಕಾರ ಬದಲಾವಣೆ ಸೂಚನೆ ನೀಡಿದ್ರಾ?

ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಕೆಲ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಅಧಿಕಾರಕ್ಕೇರುತ್ತಿದ್ದಂತೆ ಹೊಸ ಕಾರು ಖರೀದಿಸಿದ್ದಾರೆ. ಈ ಪೈಕಿ ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಮಂಡಿ ನೋವಿನ ಕಾರಣ ಟೋಯೋಟಾ ವೆಲ್‌ಫೈರ್ ಕಾರಿನಲ್ಲಿ ಪ್ರಯಾಣ ಆರಂಭಿಸಿದ್ದರು. ರಾಜ್ಯದಲ್ಲಿ ಸಿಎಂ ಹಾಗೂ ಹೊಸ ಕಾರು ಪ್ರಯಾಣದ ನಡೆಗೆ ಹೋಲಿಸಿದರೆ, ಸದ್ಯ ಡಿಕೆ ಶಿವಕುಮಾರ್ ಕೂಡ ಐಷಾರಾಮಿ 7 ಸೀಟರ್ ಲೆಕ್ಸಸ್ ಕಾರು ಖರೀದಿಸಿದ ಹಿಂದೆ ಅಧಿಕಾರ ಬದಲಾವಣೆಯ ಸೂಚನೆ ಇದೆಯಾ ಅನ್ನೋ ಚರ್ಚೆಗಳು ಶುರುವಾಗಿದೆ.

56
ಹೊಸ ವರ್ಷದಲ್ಲಿ ಹೊಸ ಪರ್ವ

ಡಿಕೆ ಶಿವಕುಮಾರ್ ರಾಜ್ಯ ಪ್ರವಾಸ, ಜನ ಸಂಪರ್ಕ ಸೇರಿದಂತೆ ಪ್ರಯಾಣಕ್ಕೆ ಹೊಸ ಕಾರು ಖರೀದಿಸಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಹಿಂದೆ ಅಧಿಕಾರ ಬದಲಾವಣೆ ಸೂಚನೆಯೂ ಅಡಗಿದೆ ಅನ್ನೋ ಚರ್ಚಗಳು ಶುರುವಾಗಿದೆ.

66
ಗರಿಷ್ಠ ಸುರಕ್ಷತೆಯ ಕಾರು

ಡಿಕೆ ಶಿವಕುಮಾರ್ ಖರೀದಿಸಿದ ಹೊಚ್ಚ ಹೊಸ LM 350h ಕಾರು 2025ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿದೆ. 2.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ. 4 ಸಿಲಿಂಡರ್ ಕಾರು, 247 BHP ಹಾಗೂ 239 Nm ಟಾರ್ಕ್ ಸಾಮರ್ಥ್ಯ ಹೊಂದಿದೆ. ಏರ್‌ಬ್ಯಾಗ್ ಸೇರಿದಂತೆ ಬಹುತೇಕ ಎಲ್ಲಾ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ.

ಗರಿಷ್ಠ ಸುರಕ್ಷತೆಯ ಕಾರು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories