ಮಂತ್ರಾಲಯದ ಮಠದ ತೀರ್ಪು ಕೇಳಿ ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದೆ ಎಂದ ಸುಬುಧೇಂದ್ರತೀರ್ಥ ಸ್ವಾಮೀಜಿ. ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ಮಠದ ಪರವಾಗಿ ಬಂದಿದೆ. ಮೂವರ ಯತಿಗಳ ಪೂಜೆಗೆ ಕೋರ್ಟ್ ಅವಕಾಶ ನೀಡಿದೆ. ಹೀಗಾಗಿ ಪೂರ್ವ ಪದ್ಮನಾಭ ತೀರ್ಥರು ಸೇರಿದಂತೆ ಮೂವರು ಯತಿವರ್ಯರಾದ ಕವೀಂದ್ರತೀರ್ಥ, ವಾಗೀಶತೀರ್ಥ, ಪದ್ಮನಾಭ ತೀರ್ಥರ ವೃಂದಾವನಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದ ಶ್ರೀಗಳು.