'ಪ್ರದೀಪ ನಾನು ಒಂದಾಗಬೇಕು, ಆಫೀಸ್‌ನಲ್ಲಿ ಅವನು ನನ್ನೇ ನೋಡಬೇಕು', ಚಿಕ್ಕತಿರುಪತಿ ಹುಂಡಿಯಲ್ಲಿ ಪ್ರೇಯಸಿಯ ಪತ್ರ!

Published : Mar 05, 2025, 12:11 PM ISTUpdated : Mar 05, 2025, 12:36 PM IST

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಪುರಾಣ ಪ್ರಸಿದ್ಧ ಚಿಕ್ಕತಿರುಪತಿ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು ಕಳೆದ ಮೂರು ತಿಂಗಳು ಹದಿನೈದು ದಿನಗಳಲ್ಲಿ 49,09,660 ರೂಪಾಯಿ ಹಾಗೂ  35ಗ್ರಾಂ ಬಂಗಾರ, 184ಗ್ರಾಂ ಬೆಳ್ಳಿ, ಹಾಗೂ ವಿದೇಶಿ ನೋಟುಗಳು ಸಂಗ್ರಹವಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸೆಲ್ವಮಣಿ ರವರು ಹೇಳಿದರು.

PREV
13
'ಪ್ರದೀಪ ನಾನು ಒಂದಾಗಬೇಕು, ಆಫೀಸ್‌ನಲ್ಲಿ ಅವನು ನನ್ನೇ ನೋಡಬೇಕು', ಚಿಕ್ಕತಿರುಪತಿ ಹುಂಡಿಯಲ್ಲಿ ಪ್ರೇಯಸಿಯ ಪತ್ರ!
ಹುಂಡಿ ಎಣಿಕೆ ಕಾರ್ಯ

ಇನ್ನು ದೇವಸ್ಥಾನದ ಅನ್ನದಾಸೋಹ ಆವರಣದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯವು ನಿನ್ನೆ ಬೆಳಿಗ್ಗೆ ಆರಂಭವಾಗಿ ಸಂಜೆವರೆಗೂ ನಡೆಯಿತು ಈ ಹುಂಡಿ ಎಣಿಕೆ ಕಾರ್ಯದಲ್ಲಿ  ತಾಲ್ಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಕೆನರಾ ಬ್ಯಾಂಕ್ ಸಿಬ್ಬಂದಿ ಭಾಗವಹಿಸಿದ್ದರು. 
 

23
ಯುವತಿಯೊಬ್ಬಳ ಪತ್ರ ಪತ್ತೆ

ದೇವರ ಹುಂಡಿಯ ಕಾಣಿಕೆ ಎಣಿಸುವಾಗ ಒಂದು ವಿಚಿತ್ರ ಪತ್ರ ಪತ್ತೆಯಾಗಿದೆ. ಪತ್ರದಲ್ಲಿ ಏನಿದೆ ಎಂದರೆ ವೆಂಕಟರಮಣ ವೇಪಟ ಸ್ವಾಮಿ ತಿರುಪತಿ ತಿಮ್ಮಪ್ಪ,ನಾ ನಿನ್ನ ಸನ್ನಿಧಿಗೆ ಬಂದು ತಲೆ ಮುಡಿ ಕೊಡುತ್ತೇನೆ ಎಂದು ಯುವತಿಯೊಬ್ಬಳು ಬೇಡಿಕೊಂಡಿದ್ದಾಳೆ.

33
ನಾನು ಪ್ರದೀಪ ಒಂದಾಗಬೇಕು!

.ದಯವಿಟ್ಟು ಪ್ರದೀಪ ನಾನು ಬೇಗ ಒಂದಾಗ ಬೇಕು ಅವನು ನನ್ನ ಬಿಟ್ಟು ಇರುವಂತೆ ಆಗಬಾರದು. ಆಫೀಸ್ ನಲ್ಲಿ ಎಲ್ಲರಕ್ಕಿಂತಹೊರಗಡೆ ಎಲ್ಲಾರಕ್ಕಿಂತ ನನ್ನ ಜಾಸ್ತಿ ಪ್ರೀತಿಸಬೇಕು.ಆದಷ್ಟು ಬೇಗ ನಾವಿಬ್ಬರೂ ಒಂದಾಗಬೇಕು ಆಫೀಸ್ ನಲ್ಲಿ ನನ್ನನ್ನೆ ನೋಡಬೇಕು ನನ್ನ ಜೊತೆ ಮಾತನಾಡಬೇಕು ಆದಷ್ಟು ಬೇಗ ನನಗೆ ಏನು ಅವನ ಮೇಲೆ ಪಿಲೀಂಗ್ ಇದಿಯೋ ಅವನಿಗೂ ಅದಕ್ಕಿಂತ 7% ಜಾಸ್ತಿ ಇರಬೇಕು ಎಂದು ಸಪ್ತಗಿರಿಯ ವಾಸ ಶ್ರೀನಿವಾಸನಲ್ಲಿ ಹರಕೆ ಹೊತ್ತು ಈ ಪತ್ರ ಬರೆದಿದ್ದಾರೆ.
 

Read more Photos on
click me!

Recommended Stories