Hampi Utsav 2025: ಹಂಪಿ ಉತ್ಸವದಲ್ಲಿ ಎತ್ತುಗಳ ಪ್ರದರ್ಶನ; ಹಳ್ಳಿಕಾರ ತಳಿ ಚಾಂಪಿಯನ್!

Published : Feb 28, 2025, 10:41 PM ISTUpdated : Mar 01, 2025, 03:27 PM IST

ಹಂಪಿ ಉತ್ಸವ ಜನೋತ್ಸವವಾಗಬೇಕು. ಹಂಪಿ ಉತ್ಸವದಲ್ಲಿ ಗ್ರಾಮೀಣ ಭಾಗದಲ್ಲಿನ ಜನರು ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕೆನ್ನು ನಿಟ್ಟಿನಲ್ಲಿ  ಎತ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಎತ್ತಿಗೆ ಪೂಜೆ ಸಲ್ಲಿಸಿ, ಹಣೆಗೆ ಮುತ್ತಿಕ್ಕುವ ಮೂಲಕ  ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಉದ್ಘಾಟನೆ ಮಾಡಿದರು. ವರದಿ:ನರಸಿಂಹ ಮೂರ್ತಿ ಕುಲಕರ್ಣಿ

PREV
16
Hampi Utsav 2025: ಹಂಪಿ ಉತ್ಸವದಲ್ಲಿ ಎತ್ತುಗಳ ಪ್ರದರ್ಶನ; ಹಳ್ಳಿಕಾರ ತಳಿ ಚಾಂಪಿಯನ್!

ಹಂಪಿ ಉತ್ಸವ ಜನೋತ್ಸವವಾಗಬೇಕು. ಹಂಪಿ ಉತ್ಸವದಲ್ಲಿ ಗ್ರಾಮೀಣ ಭಾಗದಲ್ಲಿನ ಜನರು ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕೆನ್ನು ನಿಟ್ಟಿನಲ್ಲಿ  ಎತ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಎತ್ತಿಗೆ ಪೂಜೆ ಸಲ್ಲಿಸಿ, ಹಣೆಗೆ ಮುತ್ತಿಕ್ಕುವ ಮೂಲಕ  ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಉದ್ಘಾಟನೆ ಮಾಡಿದರು.

ಈ ವೇಳೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಅವರು ಉತ್ತಮ ಎತ್ತುಗಳಿಗೆ ಬಹುಮಾನವಿದ್ದು, ವಿಶೇಷವಾಗಿ ಈ ಬಾರಿ ಭಾಗವಹಿಸಿದ ಎಲ್ಲಾ ಜೋಡು ಎತ್ತುಗಳಿಗೆ ವೈಯಕ್ತಿಕವಾಗಿ ಪ್ರೋತ್ಸಾಹಧನ ಮತ್ತು ಚಾಂಪಿಯನ್ ಆಫ್ ಚಾಂಪಿಯನ್ ವಿಜೇತ ಜೋಡಿ ಎತ್ತುಗಳಿಗೆ 50 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದರು
 

26

ಪ್ರದರ್ಶನದಲ್ಲಿ 25 ಜೋಡಿ‌ ಭಾಗಿ

ಸ್ಪರ್ಧೆಯಲ್ಲಿ 25 ಕ್ಕೂ ಹೆಚ್ಚು ಜೋಡಿ ಎತ್ತುಗಳು ಭಾಗವಹಿಸಿದ್ದವು. ಓಂಗೋಲ್, ಅಮೃತ್‍ಮಹಲ್, ಕಿಲಾರಿ ಜಾತಿ ಜೋಡಿ ಎತ್ತುಗಳು ಸೇರಿದಂತೆ   ಹಳ್ಳಿಕಾರ ತಳಿ ಎತ್ತುಗಳಿದ್ದವು.

ಪ್ರದರ್ಶನದಲ್ಲಿ ಎತ್ತುಗಳ ಮೂಲತಳಿ, ದೇಹದಾರ್ಢ್ಯತೆ, ಚುರುಕುತನ, ಅವುಗಳ ಚರ್ಮ ಸ್ಪರ್ಶಿಸುವ ಮೂಲಕ ವಯಸ್ಸು, ಹಲ್ಲು ಸೇರಿದಂತೆ ಸಮರ್ಥನೆಗೆ ಒಳಪಡಿಸಿದ ಬಳಿಕ ತೀರ್ಪುಗಾರರು ಅವುಗಳ ಚಲನವಲನಗಳ ಪರಿಶೀಲಿಸಿ ಬಹುಮಾನ ಘೋಷಿಸಿದರು.
 

36

ಹಳ್ಳಿಕಾರ್ ತಳಿಗೆ ಪ್ರಥಮ ಬಹುಮಾನ

ಹೊಸಪೇಟೆ ರೈತ ಸುಲೇಮಾನ್ ಅವರ ಹಳ್ಳಿಕಾರ ತಳಿಗೆ ಸೇರಿದ ಜೋಡೆತ್ತುಗಳು ಪ್ರಥಮ ಸ್ಥಾನ ಪಡೆದುಕೊಂಡು, ರೂ.10,000 ಹಾಗೂ ಪ್ರಮಾಣ ಪತ್ರ ಪಡೆದು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡವು. ಕಮಲಾಪುರ ಪಟ್ಟಣದ 19 ನೇ ವಾರ್ಡ್ ನ ರೈತ ಕೆ.ಸಿದ್ದಪ್ಪ ಅವರ ಎತ್ತುಗಳು ರೂ.7,500 ಹಾಗೂ ಪ್ರಮಾಣ ಪತ್ರ ಒಳಗೊಂಡು ದ್ವಿತೀಯ ಸ್ಥಾನ ಪಡೆದುಕೊಂಡವು.
 

46

ಇನ್ನೋರ್ವ ಕಮಲಾಪುರದ ರೈತ ಪೂಜಾರಿ ಜೋಗಯ್ಯ ಅವರ ಎತ್ತುಗಳು ತೃತೀಯ ಸ್ಥಾನ ಪಡೆದು, ರೂ.5000 ಹಾಗೂ ಪ್ರಮಾಣ ಪತ್ರ ಗಿಟ್ಟಿಸಿಕೊಂಡವು.
ತೀರ್ಪುಗಾರರಾಗಿ ಶಿವಮೊಗ್ಗ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಡಾ.ಸತೀಶ್ ಮತ್ತು ಡಾ.ವೀರಣ್ಣನವರ್ ಅವರು ಭಾಗವಹಿಸಿದ್ದರು. 
 

56

ಪ್ರತಿ ಜೋಡೆತ್ತುಗಳಿಗೆ ವೈಯಕ್ತಿಕ 10 ಸಾವಿರ ರೂ. ಬಹುಮಾನ:

ಹಂಪಿ ಉತ್ಸವದ ಎತ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದ ಎಲ್ಲಾ ಜೋಡು ಎತ್ತುಗಳಿಗೆ ವಯಕ್ತಿಕವಾಗಿ ತಲಾ 10 ಸಾವಿರ ರೂ. ದಂತೆ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಹಾಗೂ ಶಾಸಕ ಹೆಚ್.ಆರ್.ಗವಿಯಪ್ಪ ಅವರು ವೈಯಕ್ತಿಕವಾಗಿ 2.50 ಲಕ್ಷ ರೂ. ನೀಡಿದರು.
 

66

ಮಲ್ನಾಡ್ ಗಿಡ್ಡ (ಡಿಂಗ್ರಿ) ಪ್ರಮುಖ ಆಕರ್ಷಣೆ:

ಎತ್ತುಗಳ ಪ್ರದರ್ಶನದಲ್ಲಿ ಅಂದಾಜು 4 ಅಡಿ ಎತ್ತರದ 2 ವರ್ಷ ಪ್ರಾಯದ ಮಲ್ನಾಡ್ ಗಿಡ್ಡ ಅಲಿಯಾಸ್ ಡಿಂಗ್ರಿ ಎಂಬ ವಿಶೇಷ ತಳಿಯ ಹೋರಿಯು ಪ್ರಮುಖ ಆಕರ್ಷಣೆಯಾಗಿತ್ತು.

click me!

Recommended Stories