ಅತಿವೃಷ್ಠಿಯಿಂದ ಕಾಫಿನಾಡಿನ ಬಹುತೇಕ ಕಾಫಿ ಇಂದು ಮಣ್ಣುಪಾಲಾಗಿದ್ದು ಬೆಳೆಗಾರರು ಆತಂಕದಲ್ಲೇ ಬದುಕುವಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಸೇರಿದಂತೆ ಮಲೆನಾಡ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕಾಫಿ ಫಸಲು ಮಣ್ಣು ಪಾಲಾಗಿದೆ. ಕಳೆದೊಂದು ತಿಂಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕಾಫಿ ಬೆಳೆ ಹೇಳ ಹೆಸರಿಲ್ಲದಂತಾಗಿದೆ. ಪ್ರತಿ ತೋಟದ ಗಿಡದಡಿ ರಾಶಿ ರಾಶಿ ಕಾಫಿ ಬೀಜ ಬಿದ್ದಿರುವ ದ್ರಶ್ಯ ಕಂಡಬರುತ್ತಿದೆ. ಮಳೆ ಜೊತೆ ಬೀಸ್ತಿರೋ ರಣ ಗಾಳಿ ಕಾಫಿಯನ್ನ ಗಿಡದಿಂದ ಸಂಪೂರ್ಣ ನೆಲಕ್ಕುದುರಿಸಿದೆ. ಕಾಫಿ ಉಳಿದ್ರೆ ಬದುಕು ಉಳಿದಂತೆ ಎಂದು ಭಾವಿಸಿದ್ದ ಬೆಳೆಗಾರರಿಗೆ ಈ ಬಾರಿಯೂ ವರುಣದೇವ ಅನಾಹುತ ತಂದೊಡ್ಡಿ ಮತ್ತೆ ಚಿಂತಿಸುವಂತಾಗಿದೆ. ಅದರಲ್ಲೂ ಕಳೆದ ಹತ್ತು ದಿನಗಳಿಂದ ಚಿಕ್ಕಮಗಳೂರು ತಾಲೂಕ್ , ಮೂಡಿಗೆರೆ ತಾಲೂಕಿನ ಸುತ್ತಮುತ್ತ ಭಾರೀ ಮಳೆಯಾಗಿದ್ದು, ರೈತರು ತೋಟದ ಪರಿಸ್ಥಿತಿಯನ್ನ ಕಂಡು ಕಣ್ಣಿರಿಡುವಂತಾಗಿದೆ. ಗಿಡವನ್ನ ಮುಟ್ಟಿದರೆ ಕಾಫಿ ನೆಲಕ್ಕುದುರುವ ಸ್ಥಿತಿ ನಿರ್ಮಾಣವಾಗಿದೆ.