ಮಲೆನಾಡಿನಲ್ಲಿ ಮಳೆಯಿಂದ 409 ಅಂಗನವಾಡಿ ಕಟ್ಟಡ , 204 ಸರ್ಕಾರಿ ಶಾಲೆ ಕಟ್ಟಡ ,24 ಕಾಲೇಜ್ ಕಟ್ಟಡಗಳಿಗೆ ಹಾನಿ ಆಗಿದೆ.ಹಾನಿಗೆ ಒಳಾಗಿರುವ ಶಾಲೆಗಳಲ್ಲಿ ಈ ಶಾಲೆಯೂ ಒಂದಾಗಿದ್ದು ಮಳೆಯಿಂದ ಶಾಲೆಯ ಮಾಲಿಗೆ ಸೋರುತ್ತಿದೆ. ಹಾಗಾಗಿ, ಸ್ಥಳಿಯರು ಸರ್ಕಾರ ಹಾಗೂ ಅಧಿಕಾರಿಗಳಿಗೆ ಈ ಶಾಲೆಯನ್ನ ಉಳಿಸಿ ಕೊಡುವಂತೆ ಮನವಿ ಮಾಡುತ್ತಿದ್ದಾರೆ. ಇದು ಎಲ್ಲಾ ಸರ್ಕಾರಿ ಶಾಲೆಯಂತಲ್ಲ. ಹಳ್ಳಿಗರ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವ ಶಾಲೆ. ಪುನೀತ್ ರಾಜ್ಕುಮಾರ್ ನೆನಪಿನ ಶಾಲೆ. ಹಾಗಾಗಿ, ಸರ್ಕಾರ ಈ ಶಾಲೆಗೆ ಇರುವ ಸಮಸ್ಯೆ ಮೇಲ್ಛಾವಣಿ ಸಮಸ್ಯೆ ಜೊತೆ ಶೌಚಾಲಯದ ಸಮಸ್ಯೆಯನ್ನ ನೀಗಿಸಿ ಶಾಲೆಯನ್ನ ಉಳಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.