ವಿಜಯಪುರ ಅಧಿಕಾರಿ ಮನೆಯಲ್ಲಿ ಕೋಟಿ ಕೋಟಿ ಆಸ್ತಿ ಪತ್ತೆ! ಕೈ ಇಟ್ಟಲ್ಲೆಲ್ಲಾ ಕಂತೆ ಕಂತೆ ನೋಟು!

Published : May 15, 2025, 02:09 PM IST

ವಿಜಯಪುರ ಜಿಲ್ಲೆಯ ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತರ್ಲೆ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಕೋಟಿಗಟ್ಟಲೆ ಅಕ್ರಮ ಆಸ್ತಿ ಪತ್ತೆಯಾಗಿದೆ. ಚಿನ್ನ, ಬೆಳ್ಳಿ, ನಗದು ಹಣ ಸೇರಿದಂತೆ ಐಷಾರಾಮಿ ವಸ್ತುಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಕೋಟಿ ಮೌಲ್ಯದ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿರುವ ಮಾಹಿತಿಯೂ ಲಭ್ಯವಾಗಿದೆ.

PREV
15
ವಿಜಯಪುರ ಅಧಿಕಾರಿ ಮನೆಯಲ್ಲಿ ಕೋಟಿ ಕೋಟಿ ಆಸ್ತಿ ಪತ್ತೆ! ಕೈ ಇಟ್ಟಲ್ಲೆಲ್ಲಾ ಕಂತೆ ಕಂತೆ ನೋಟು!

ವಿಜಯಪುರ ಜಿಲ್ಲೆಯ ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತರ್ಲೆ ಅವರ ಮನೆ ಮೇಲೆ ಲೋಕಾಯುಕ್ತರು ಇಂದು ನಡೆಸಿದ್ದಾರೆ. ಈ ವೇಳೆ ಲೋಕಾಯುಜ್ತ ಸಿಬ್ಬಂದಿ ಕೈ ಇಟ್ಟಲ್ಲೆಲ್ಲಾ ಕಂತೆ ಕಂತೆ ನೋಟು ಪತ್ತೆಯಾಗಿವೆ. ಈ ಗರಿ-ಗರಿ ನೋಟಿಗೆ ಮಾತ್ರ ದಾಖಲೆಗಳು ಪತ್ತೆಯಾಗಿಲ್ಲ.

25

ರೇಣುಕಾ ಸಾತರ್ಲೆ ಅವರ ಮನೆಯಲ್ಲಿ ಭಾರಿ ಅಕ್ರಮ ಆಸ್ತಿಗಳ ಭಂಡಾರ ಬಯಲಾಗಿದೆ. ಚಿನ್ನ, ಬೆಳ್ಳಿ, ನಗದು ಹಣ, ಐಷಾರಾಮಿ ವಸ್ತುಗಳ ರಾಶಿ ಪತ್ತೆಯಾಗಿದ್ದು, ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

35

ರಾಶಿ-ರಾಶಿ ಐಷಾರಾಮಿ ವಸ್ತುಗಳು!
ಚಿನ್ನಾಭರಣ: 250 ಗ್ರಾಂ ಚಿನ್ನ, ಲಾಕರ್‌ನಲ್ಲಿ ಇರುವುದನ್ನು ಬಿಟ್ಟು
ಬೆಳ್ಳಿ: ಸುಮಾರು 2 ಕೆ.ಜಿ ಬೆಳ್ಳಿ ಪತ್ತೆ.
ನಗದು ಹಣ: ದಾಖಲೆ ಇಲ್ಲದ ₹10 ಲಕ್ಷ ನಗದು ಪತ್ತೆ.
ವಾಚ್‌ಗಳು ಮತ್ತು ಸನ್‌ಗ್ಲಾಸ್‌ಗಳು: 20 ಸಾವಿರ ರೂ.ಗಳಿಂದ 50 ಸಾವಿರ ರೂ. ಬೆಲೆ ಬಾಳುವ 50ಕ್ಕೂ ಹೆಚ್ಚು ವಾಚ್ ಮತ್ತು ಸನ್‌ಗ್ಲಾಸ್‌ಗಳು ಪತ್ತೆ.

45

ಅಕ್ರಮ ಆಸ್ತಿ ಗಳಿಕೆ ಆರೋಪ: ಸುವರ್ಣ ನ್ಯೂಸ್ ನೀಡಿದ ವಿಶೇಷ ವರದಿಯು, ರೇಣುಕಾ ಸಾತರ್ಲೆ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಆರೋಪಗಳಿಗೆ ಸ್ಪಷ್ಟತೆ ನೀಡಿತ್ತು. ಇದೇ ವರದಿಯ ಆಧಾರದ ಮೇಲೆ ಲೋಕಾಯುಕ್ತರು ಇಂದು ವಿಜಯಪುರದ ಸಾತರ್ಲೆ ನಿವಾಸದ ಮೇಲೆ ದಾಳಿ ನಡೆಸಿದರು. ದಾಖಲೆಗಳ ಪರಿಶೀಲನೆ ವೇಳೆ ಭಾರೀ ಪ್ರಮಾಣದ ವಸ್ತುಗಳು ಪತ್ತೆಯಾಗಿವೆ.

55

ಹೊರ ರಾಜ್ಯದಲ್ಲಿ ಕೋಟಿ ಕೋಟಿ ಆಸ್ತಿ!
ಅಷ್ಟೇ ಅಲ್ಲದೆ, ಮಹಾರಾಷ್ಟ್ರದಲ್ಲಿ ಕೋಟಿ ಮೌಲ್ಯದ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿಕೊಂಡಿದ್ದಾರೆ. ವಿಜಯಪುರ ನಗರದೊಳಗೆ ಬಿಲ್ಡಿಂಗ್ ಹಾಗೂ ಮನೆಗಳು ರೇಣುಕಾ ಹೆಸರಿನಲ್ಲಿ ಅಥವಾ ಸಂಬಂಧಿತರ ಹೆಸರಿನಲ್ಲಿ ಖರೀದಿಸಿರುವ ಮಾಹಿತಿ ಇದೀಗ ತನಿಖಾಧಿಕಾರಿಗಳ ಕೈಗೆ ಸಿಕ್ಕಿದೆ ಎಂದು ಮೂಲಗಳು ತಿಳಿಸುತ್ತಿವೆ.

Read more Photos on
click me!

Recommended Stories