ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ರೇಡ್‌, ಕೋಟಿ ಕೋಟಿ ಸಂಪತ್ತು ಪತ್ತೆ!

First Published | Dec 5, 2023, 10:02 AM IST

ರಾಜ್ಯದ ಹಲವು ಕಡೆ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಚಳಿ ಬಿಡಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಧಿಕಾರಿಗಳು  ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆ, ಅಕ್ರಮ ಹಣ ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 13 ಅಧಿಕಾರಿಗಳಿಗೆ ಸೇರಿದ 63 ಕಡೆ ದಾಳಿ ನಡೆದಿದ್ದು, ಅಧಿಕಾರಿಗಳ ಪಟ್ಟಿ ಇಲ್ಲಿದೆ.

ಸುಧಾಕರ್ ರೆಡ್ಡಿ S/o ಚಿಕ್ಕನಾರಾಯಣ ರೆಡ್ಡಿ.  ಇಇ(ಎಲೆಕ್ಟ್ರಿಕ್) ಬೆಸ್ಕಾಂ, ಕೆಆರ್ ಸರ್ಕಲ್, ವಿಜಿಲೆನ್ಸ್, ಬೆಂಗಳೂರು:
ಬೆಸ್ಕಾಂ ಜಾಗೃತ ದಳದ ಅಧಿಕಾರಿ ಸುಧಾಕರ್ ರೆಡ್ಡಿ ಬೆಂಗಳೂರಿನ ಮನೆ, ಚಿಂತಾಮಣಿಯ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಸುಧಾಕರ್‌ಗೆ ಸೇರಿದ ಐದು ಕಡೆ ದಾಳಿ ನಡೆದಿದ್ದು, ಬೆಳಗ್ಗೆ ಆರು ಗಂಟೆಯಿಂದಲೇ  ಮನೆಯಲ್ಲಿ  ಅಧಿಕಾರಿಗಳು ಶೋಧ ಕಾರ್ಯ  ನಡೆಸುತ್ತಿದ್ದಾರೆ. ಮೂವರು ಲೋಕಾಯುಕ್ತ ಅಧಿಕಾರಿಗಳಿಂದ ಸತತ ಪರಿಶೀಲನೆ ನಡೆಸುತ್ತಿದ್ದಾರೆ. ಕೆ.ಆರ್.ಸರ್ಕಲ್ ನಲ್ಲಿರುವ ಬೆಸ್ಕಾಂ‌ ಕಚೇರಿಯಲ್ಲಿ ‌ಕಳೆದ ಎರಡೂವರೆ ವರ್ಷಗಳಿಂದ ವಿಜಿಲೇನ್ಸ್ ಡಿಜಿಎಂ ಆಗಿ ಕೆಲಸ‌ ನಿರ್ವಹಣೆ ಮಾಡುತ್ತಿದ್ದ ರೆಡ್ಡಿ ಅಕ್ರಮ ಆಸ್ತಿ ಹಿನ್ನೆಲೆ ದಾಳಿ ನಡೆದಿದೆ. 

ಎಚ್ ಎಸ್ ಕೃಷ್ಣಮೂರ್ತಿ, ಕಣ್ಮಿಣಿಕೆ ಹಾಲು ಉತ್ಪಾದಕರ ಸಹಕಾರ ಸಂಘ, ಕುಂಬಳಗೋಡು, ಬೆಂಗಳೂರು ದಕ್ಷಿಣ:
ಕುಂಬಳಗೋಡು ಹಾಲು ಸಹಕಾರ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್ ಎಸ್ ಕೃಷ್ಣಮೂರ್ತಿ ಮನೆ ಮೇಲೆ ದಾಳಿ ನಡೆದಿದೆ.  ಕುಂಬಳಗೂಡು ಸೇರಿದಂತೆ 5 ಕಡೆ ಲೋಕಾ ದಾಳಿ ನಡೆದಿದೆ.

Tap to resize

3.ಡಾ.ಪ್ರಭುಲಿಂಗ್, DHO ಯಾದಗಿರಿ

ಯಾದಗಿರಿ DHO ಪ್ರಭುಲಿಂಗ ಮಾನಕರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಯಾದಗಿರಿಯಲ್ಲಿರುವ ಬಾಡಿಗೆ ಮನೆ ಮತ್ತು ಅವರದೇ ಕಲಬುರಗಿಯ ಕರುಣೇಶ್ವರ ನಗರದಲ್ಲಿನ ಮನೆ, ಗೊಬ್ಬೂರ ಬಳಿಯ ಫಾರ್ಮ ಹೌಸ್, ಯಾದಗಿರಿ ನಗರದ ಬಾಡಿಗೆ ಮನೆ  ಮೇಲೂ ದಾಳಿಯಾಗಿದೆ.  ದಾಳಿ ವೇಳೆಯಲ್ಲಿ 300 ಗ್ರಾಂ ಚಿನ್ನಾಭರಣ 3 ಲಕ್ಷ ನಗದು ಹಣ ಪತ್ತೆಯಾಗಿದೆ. ದಾಳಿ ವೇಳೆ ಕಲಬುರಗಿ ನಗರದ ವರ್ಧಾ ಲೇಔಟ್ ನಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಪ್ರಭುಲಿಂಗ್ ಮಾನಕರ್ ಇದ್ದರು.

ಬೀದರ  ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ  ನಿವೃತ್ತ ಕುಲಪತಿ HD ನಾರಾಯಣಸ್ವಾಮಿಯ ಬೆಂಗಳೂರಿನ ರಾಜೀವಗಾಂಧಿ ನಗರದಲ್ಲಿನ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅದೇ ರೀತಿ ನಿವೃತ್ತ ವಿಸಿ ನಾರಾಯಣಸ್ವಾಮಿ ಸಹಾಯಕರಾಗಿದ್ದ ಸುನೀಲ್ ಕುಮಾರ ಅವರ ಬೀದರ ಮನೆ ಹಾಗೂ ಕಾಂಪ್ಲೆಕ್ಷ ಮೇಲೆ ದಾಳಿ ನಡೆದಿದೆ. ಕಲಬುರಗಿ ಎಸ್ಪಿ ಕರ್ನೂಲ್ ನೇತೃತ್ವದಲ್ಲಿ ಮೂವರು ಡಿವೈಎಸ್ಪಿ, ಆರು ಜನ ಸರ್ಕಲ್ ಇನ್ಸ್ ಪೆಕ್ಟರ್ ಗಳು ಹಾಗೂ ಸಿಬ್ಬಂದಿಯಿಂದ ಒಟ್ಟು ನಾಲ್ಕು ಕಡೆ ದಾಳಿ ನಡೆದಿದ್ದು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಮಿಂಚಿನ ದಾಳಿ, ಆಸ್ತಿ ಪಾಸ್ತಿ ದಾಖಲೆ ಪರಿಶೀಲನೆ ನಡೆಯುತ್ತಿದೆ.

ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಚಂದ್ರಶೇಖರ ಜೊತೆಗೆ ಅರಣ್ಯ ಇಲಾಖೆಯ ಡಿಆರ್ ಎಫ್ ಓ ಮಾರುತಿ ಮನೆ ಮೇಲೆ ದಾಳಿ ನಡೆದಿದೆ. ಚಂದ್ರಶೇಖರ  ಬಳ್ಳಾರಿಯಲ್ಲಿ ಕೆಲಸ ಮಾಡ್ತಿದ್ರು ಮನೆ ಮಾತ್ರ ಹೊಸಪೇಟೆಯಲ್ಲಿದೆ. ಹೊಸಪೇಟೆಯ ಅನಂತಶಯನ‌ ಗುಡಿಯ ಶ್ರೀರಾಮ್ ನಗರದಲ್ಲಿ ಮನೆ ಇದೆ.  ಅರಣ್ಯ ಇಲಾಖೆಯ ಡಿಆರ್ ಎಫ್ ಓ  ಮಾರುತಿ ಗಂಗಾವತಿಯಲ್ಲಿ‌ ಕೆಲಸ ಮಾಡ್ತಿದ್ರು ಮನೆ ಕಂಪ್ಲಿಯಲ್ಲಿದೆ. 

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಚಂದ್ರಶೇಖರ ಬಳ್ಳಾರಿಯಲ್ಲಿ ರೂಂ ಮಾಡಿದ್ರು. ಬಳ್ಳಾರಿಯ ರೂಂನಲ್ಲಿಯೂ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೂಲತಃ ಕೊಪ್ಪಳದವರು ಬಳ್ಳಾರಿ ಹೊಸಪೇಟೆ ಮತ್ತು ಚಿತ್ರದುರ್ಗದಲ್ಲಿ ಕೆಲಸ ಮಾಡಿದ್ದಾರೆ. ಹಿರಿಯ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ ಇವರು ಅಪಾರ ಅಕ್ರಮ ಆಸ್ತಿ‌ ಮಾಡಿದ್ದಾರೆ ಎನ್ನಲಾಗಿದೆ. ಮರಳು ಗಣಿಗಾರಿಕೆಗೆ ಅನಧಿಕೃತ ಪರವಾನಿಗೆ ನೀಡ್ತಿದ್ದಾರೆ ಎನ್ನುವ ಆರೋಪವಿತ್ತು. ಇತ್ತೀಚೆಗೆ ಬಳ್ಳಾರಿಯಲ್ಲಿ ಮರಳಿನ ವಿಚಾರವಾಗಿ ಗಲಾಟೆ ನಡೆದಾಗ ಇವರ ಹೆಸರು ಬಲವಾಗಿ ಕೇಳಿ ಬಂದಿತ್ತು. ಹೀಗಾಗಿ ವರ್ಗಾವಣೆ ಮಾಡಿಸಿಕೊಳ್ಳಲು ಭಾರಿ ಪ್ರಯತ್ನ ಮಾಡಿದ್ರು.

ಶರಣಪ್ಪ, ಆಯುಕ್ತರು, ನಗರಸಭೆ, ಯಾದಗಿರಿ:
ಕೊಪ್ಪಳದ ಗಂಗಾವತಿಯಲ್ಲಿ ಸಹ ಲೋಕಾಯುಕ್ತ ದಾಳಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಪುರಸಭೆ ಪರಿಸರ ಅಭಿಯಂತರ  ಶರಣಪ್ಪ ಮನೆ ಮೇಲೆ ದಾಳಿ ನಡೆದಿದ್ದು, ಗಂಗಾವತಿ ನಗರದ ಶಿಕ್ಷಕರ ಕಾಲೋನಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆದಿದೆ. ಅಕ್ರಮ‌ ಆಸ್ತಿ ಸಂಪಾದನೆ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆದಿದೆ. ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ಸಲಿಂ ಪಾಷ  ನೇತೃತ್ವದಲ್ಲಿ ದಾಳಿ ನಡೆದಿದ್ದು, ಲೋಕಾಯುಕ್ತ ಅಧಿಕಾರಿಗಳು ಮನೆಯಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಕುಂಬಳಗೋಡು ಹಾಲು ಸಹಕಾರ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್ ಎಸ್ ಕೃಷ್ಣಮೂರ್ತಿ  ಕುಂಬಳಗೂಡು ನಿವಾಸ ಸೇರಿದಂತೆ 5 ಕಡೆ ಲೋಕಾ ದಾಳಿ ನಡೆದಿದೆ. 16 ಸಾವಿರ ಸಂಬಳ ಇದ್ರೂ ಕೋಟಿ ಕೋಟಿ ಸಂಪಾದನೆ ಮಾಡಿದ್ದು, ಪ್ರತಿನಿತ್ಯ ಸೊಸೈಟಿಗೆ ಎರಡು ಲಕ್ಷ ಆದಾಯ ಇದ್ದರು ಕೇವಲ ಹತ್ತು ಸಾವಿರ ತೋರಿಸಿರುವ ಆರೋಪ ಕೇಳಿಬಂದಿದೆ.  ಜೊತೆ ಡೈರಿಗೆ ಬರುವ ಹಾಲನ್ನ ರೈತರಿಂದ ಪ್ರತ್ಯೇಕವಾಗಿ ಖರೀದಿಸಿ ಅಪಾರ್ಟ್ಮೆಂಟ್ ಹಾಗೂ ಖಾಸಗಿ ಶಾಲೆಗಳಿಗೆ ಮಾರಾಟ ಮಾಡಿದ್ದಾನಂತೆ.

ಜಯನಗರ ಉಪವಿಭಾಗ ಇಇ ಬೆಸ್ಕಾಂ ಚೆನ್ನಕೇಶವ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಅಮೃತಹಳ್ಳಿ ಜಕ್ಕೂರು ಬಳಿ ಇರುವ ಮನೆಗೆ ಮೂರು ವಾಹನದಲ್ಲಿ ಬಂದಿರುವ 13 ಜನ ಅಧಿಕಾರಿಗಳಿಂದ ಪರಿಶೋಧನೆ ನಡೆಯುತ್ತಿದ್ದು, ದಾಳಿಯಲ್ಲಿ 6 ಲಕ್ಷ ನಗದು, 3ಕೆಜಿ ಚಿನ್ನ, 28 ಕೆಜಿ ಬೆಳ್ಳಿ, 25 ಲಕ್ಷ ಮೌಲ್ಯದ ಡೈಮಂಡ್ ಜುವೆಲರಿ, ಸೇರಿ   ಆಸ್ತಿ ಪತ್ರ  ಸೇರಿದಂತೆ ಒಟ್ಟು 1.5 ಕೋಟಿ ಮೌಲ್ಯದ ವಸ್ತುಗಳು ಪತ್ತೆಯಾಗಿದೆ.  ಯಲಹಂಕ ಬಳಿ ಕಮರ್ಷಿಯಲ್ ಕಟ್ಟಡ ನಿರ್ಮಿಸುತ್ತಿರುವ ಚೆನ್ನಕೇಶವ ಅವರಿಗೆ ಲೋಕಾಯುಕ್ತಾ ದಾಳಿ ವೇಳೆ ಶಾಕ್ ಗೆ ಒಳಗಾಗಿ ಬಿಪಿ ಹೆಚ್ಚಾಗಿ ಆರೋಗ್ಯ ಸಮಸ್ಯೆ ಎದುರಾಗಿದೆ. ಹೀಗಾಗಿ  ಮಾತ್ರೆಗಳನ್ನ ಅಧಿಕಾರಿಗಳು ತಂದುಕೊಟ್ಟಿದ್ದು, ಸುಧಾರಿಸಿಕೊಂಡು ಅಧಿಕಾರಿಗಳ ಪರಿಶೀಲನೆಗೆ ಸಹಕಾರ ನೀಡಿದ್ದಾರೆ. ಸಂಬಂಧಿಕರ ಮನೆ ಮೇಲೂ ದಾಳಿ ನಡೆದಿದ್ದು ಸುಮಾರು 1 ಕೋಟಿ ನಗದು ಸಿಕ್ಕಿದೆ ಎಂದು ವರದಿ ತಿಳಿಸಿದೆ.

ಕೆಆರ್‌ಐಡಿಎಲ್ ಸೂಪರಿಂಟೆಂಡೆಂಟ್ ಇಂಜಿನಿಯರ್‌  ತಿಮ್ಮರಾಜಪ್ಪ ಮನೆ ಮೇಲೆ ದಾಳಿ ನಡೆದಿದ್ದು ಬೆಳಗಾವಿಯ ಶಿವಬಸವನಗರದಲ್ಲಿ ತಿಮ್ಮರಾಜಪ್ಪ ಅವರ ನಿವಾಸವಿದೆ. ಬೆಳಗಾವಿ ಲೋಕಾಯುಕ್ತ ಡಿವೈಎಸ್‌ಸಿ ಭರತರೆಡ್ಡಿ ನೇತೃತ್ವದಲ್ಲಿ  ಪರಿಶೀಲನೆ ನಡೆಯುತ್ತಿದೆ. ಒಂದೂವರೆ ತಿಂಗಳ ಹಿಂದಷ್ಟೇ ಕೆಆರ್‌ಐಡಿಎಲ್ ಎಸ್‌ಇ ಆಗಿ ನಿಯೋಜನೆಗೊಂಡಿದ್ದ ತಿಮ್ಮರಾಜಪ್ಪ ಕೋಲಾರ ಮೂಲದವರು. ಹೀಗಾಗಿ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಮಾಹದೇವಪುರ ಹುಟ್ಟೂರಿನ ಮನೆ ಮೇಲೆ ಕೂಡ ದಾಳಿ ನಡೆದಿದೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಮಾಹದೇವಪುರ ಹುಟ್ಟೂರಿನ ಮನೆ ಮೇಲೆ ದಾಳಿ. ತಿಮ್ಮರಾಜಪ್ಪ ಅವರಿಗೆ ಸೇರಿದ ಕೋಲಾರ, ಬೆಂಗಳೂರು, ಬೆಳಗಾವಿಯಲ್ಲಿ ಎಂಟು ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಕೋಲಾರ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ  ದಾಳಿ ಇದೆ. 

ಚಿಕ್ಕಬಳ್ಳಾಪುರದಲ್ಲಿ ಕೂಡ ಲೋಕಾಯುಕ್ತ ದಾಳಿ ನಡೆದಿದೆ. ರಾಮನಗರ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮುನೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ ಹೀಗೆ ಒಟ್ಟು 6 ಕಡೆ ದಾಳಿ ನಡೆದಿದೆ. ಬೆಂಗಳೂರಿನ ಎರಡು ಕಡೆ ದಾಳಿ ನಡೆದಿದೆ.   ಫಾಲಿ ಹೌಸ್ ಗಳಲ್ಲಿ ಅಕ್ರಮ ಎಸಗಿರೋ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. 

ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವ ಸ್ವಾಮಿ  M S ಮನೆ ಮೇಲೆ ಲೋಕಾ ದಾಳಿ ನಡೆದಿದೆ.  ಮಹದೇವಗೆ ಸೇರಿದ 10 ಸ್ಥಳಗಳಲ್ಲಿ ಲೋಕಾ ಶೋಧ ನಡೆದಿಸಿದ್ದು ಮೈಸೂರು ನಗರದಲ್ಲೇ 7 ಕಡೆಗಳಲ್ಲಿ  ಶೋಧ. ನಂಜನಗೂಡು ಹಾಗೂ ಇತರ ಕಡೆ ಸೇರಿ ಒಟ್ಟು 10 ಕಡೆಗಳಲ್ಲಿ ಲೆಕ್ಕಪತ್ರ ತಪಾಸಣೆ ಮಾಡಲಾಗಿದೆ.  ಹೆಸರಿಗೆ ಮಾತ್ರ ಸರ್ಕಾರಿ ಕಾಲೇಜು ಉಪನ್ಯಾಸಕ. ಮಾಡೊದೆಲ್ಲ ಕಳ್ಳ ವ್ಯವಹಾರ.ವರ್ಗಾವಣೆ ದಂದೆ, ವಂಚನೆ ವಿಚಾರದಲ್ಲಿ ದೂರು ಬಂದ ಹಿನ್ನಲೆ ಮನೆ, ಕಚೇರಿ, ಶಾಲೆ, ವಾಣಿಜ್ಯ ಕಟ್ಟಡ‌ ಹಾಗೂ ಸಂಬಂಧಿಕರ ಮನೆಯಲ್ಲಿ ಶೋಧ. ಮಹದೇವಸ್ವಾಮಿಗೆ ಸೇರಿದ ಮೈಸೂರಿನ ಗುರುಕುಲ ವಿದ್ಯಾಸಂಸ್ಥೆ, ಮೂರಕ್ಕೂ ಹೆಚ್ಚು ಸ್ಟೀಲ್ ಅಂಗಡಿಗಳು ಹಾಗೂ ಕಚೇರಿ ಮೇಲೆ ಏಕ ಕಾಲದಲ್ಲಿ ದಾಳಿ. ವರ್ಗಾವಣೆ ವಿಚಾರವಾಗಿ ಈತನ ವಿರುದ್ಧ ಲೋಕಾಯುಕ್ತರಿಗೆ ದೂರು ಹೋಗಿತ್ತು.

Latest Videos

click me!