Veerendra Heggade Birthday: ಮಸಿ ಬಳಿಯುವ ಹುನ್ನಾರದ ನಡುವೆ ಸೂರ್ಯನಂತೆ ಬೆಳಗಿದ ಧರ್ಮಸ್ಥಳದ ಧರ್ಮರತ್ನಾಕರ!

Published : Nov 25, 2023, 04:33 PM IST

ಸತ್ಯ ಧರ್ಮದ ನೆಲೆವೀಡಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಶನಿವಾರ 75ನೇ ಜನ್ಮದಿನದ ಸಂಭ್ರಮ. ಧರ್ಮಸ್ಥಳದ ಅವರ ನಿವಾಸದಲ್ಲಿ ಶನಿವಾರ ಬಹಳ ಸರಳವಾಗಿ ಜನ್ಮದಿನ ಆಚರಿಸಿಕೊಂಡರು.

PREV
111
Veerendra Heggade Birthday: ಮಸಿ ಬಳಿಯುವ ಹುನ್ನಾರದ ನಡುವೆ ಸೂರ್ಯನಂತೆ ಬೆಳಗಿದ ಧರ್ಮಸ್ಥಳದ ಧರ್ಮರತ್ನಾಕರ!

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಶನಿವಾರ ತಮ್ಮ 75ನೇ ಜನ್ಮದಿನವನ್ನು ಆಚರಿಸಿಕೊಂಡರು. 

211

ಧರ್ಮಸ್ಥಳದ ಬೀಡಿನಲ್ಲಿರುವ ತಮ್ಮ ನಿವಾಸದಲ್ಲಿಯೇ ಬಹಳ ಸರಳವಾಗಿ ಕುಟುಂಬದವರ ನಡುವೆಯೇ ಅವರು ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

311

ಧರ್ಮಸ್ಥಳ ದೇವಸ್ಥಾನದ ಸಿಬ್ಬಂದಿ, ಧರ್ಮಸ್ಥಳದ ನಿವಾಸಿಗಳು ಹಾಗೂ ಶ್ರೀಕ್ಷೇತ್ರದಿಂದ ನಡೆಸಲಾಗುವ ಸಂಘ ಸಂಸ್ಥೆಗಳ ಮುಖ್ಯಸ್ಥರು ಈ ವೇಳೆ ವೀರೇಂದ್ರ ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

411

ಧರ್ಮಸ್ಥಳದ ಹಿಂದಿನ ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಹಾಗೂ ರತ್ನಮ್ಮ ಹೆಗ್ಗಡೆಯವರು ಹಿರಿಯ ಪುತ್ರನಾಗಿ 1948ರಲ್ಲಿ ವೀರೇಂದ್ರ ಹೆಗ್ಗಡೆಯವರು ಜನಿಸಿದ್ದರು.

511

1964 ಅಕ್ಟೋಬರ್‌ 24 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ತಮ್ಮ ತಂದೆಯವರಾದ ರತ್ನವರ್ಮ ಹೆಗ್ಗಡೆ ಅವರಿಂದ ಅಧಿಕಾರ ವಹಿಸಿಕೊಂಡಿದ್ದರು.

611


2022ರ ಜುಲೈನಲ್ಲಿ ಸಂಸತ್ತಿನ ಮೇಲ್ಮನೆಯಾಗಿರುವ ರಾಜ್ಯಸಭೆಗೆ ಇವರು ನಾಮನಿರ್ದೇಶನಗೊಂಡಿದ್ದು, ಪ್ರಸ್ತುತ ನಾಮ ನಿರ್ದೇಶಿತ ರಾಜ್ಯಸಭಾ ಸದಸ್ಯರಾಗಿದ್ದಾರೆ.

711

ಧರ್ಮಾಧಿಕಾರಿಯಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಶಿಕ್ಷಣ, ಗ್ರಾಮೀಣಾಭಿವೃಧಿ ಕಾರ್ಯಗಳನ್ನು ನಡೆಸಿಕೊಂಡಿರುವ ಬಂದಿರುವ ಇವರ ಕಾರ್ಯಕ್ರಮಗಳ ಇಂದು 6 ನಗರ 600ಕ್ಕೂ ಅಧಿಕ ಹಳ್ಳಿಗಳಲ್ಲಿ ಪ್ರಖ್ಯಾತವಾಗಿದೆ.

811

2008ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಾಗ ಸ್ವತಃ ಘಾಸಿಗೊಂಡಿದ್ದರು.

911

ಈಗಾಗಲೇ ಈ ಪ್ರಕರಣದಲ್ಲಿ ತಮ್ಮ ಕುಟುಂಬದ ಯಾವುದೇ ಸದಸ್ಯನ ಪಾತ್ರವಿಲ್ಲ ಎಂದು ಅವರು ಹೇಳಿದ್ದರೂ, ತೋಜೋವಧೆಯ ಪ್ರಯತ್ನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

1011

ತಮ್ಮ ವಿರುದ್ಧ ಎಷ್ಟೇ ಆರೋಪಗಳು ಕೇಳಿಬಂದರೂ,ಅದೆಲ್ಲವನ್ನೂ ಎದುರಿಸಿ ಸೂರ್ಯನಂತೆ ಇಂದು ವೀರೇಂದ್ರ ಹೆಗ್ಗಡೆಯವರು ಬೆಳಗಿ ನಿಂತಿದ್ದಾರೆ.

1111

ಧಾರ್ಮಿಕ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪದ್ಮವಿಭೂಷಣ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಶುಭಾಶಯಗಳು.

Read more Photos on
click me!

Recommended Stories