ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಿಕೆಶಿ ಮಗಳು ಐಶ್ವರ್ಯ, ಅಮರ್ಥ್ಯ!

First Published | Feb 14, 2021, 12:33 PM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಗಳು ಐಶ್ವರ್ಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಮಗ ಅಮರ್ಥ್ಯ ಹೆಗ್ಡೆ ಪ್ರೇಮಿಗಳ ದಿನವಾದ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಲ್ಲಿದೆ ನೋಡಿ ಐಶ್ವರ್ಯ, ಅಮರ್ಥ್ಯ ಮದುವೆ ಫೋಟೋಸ್ 

ಅದ್ದೂರಿಯಾಗಿ ನಡೆದ ಮದುವೆಯಲ್ಲಿ ಶಾಸ್ತ್ರೋಕ್ತವಾಗಿ ಇಬ್ಬರೂ ಸಪ್ತಪದಿ ತುಳಿದಿದ್ದಾರೆ
undefined
ಎಸ್.ಎಂ. ಕೃಷ್ಣ ಅವರ ಮೊಮ್ಮಗನಾಗಿರುವ ಅಮರ್ಥ್ಯ ಹೆಗ್ಡೆ ಹಾಗೂ ಡಿಕೆ ಶಿವಕುಮಾರ್ ಮಗಳ ಮದುವೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಹೀಗೆ ರಾಜಕೀಯ ನಾಯಕರೂ ಪಾಲ್ಗೊಂಡಿದ್ದಾರೆ.
undefined
Tap to resize

ತಮ್ಮ ಮಗಳಿಗೆ ಅಮರ್ಥ್ಯ ತಾಳಿ ಕಟ್ಟುತ್ತಿದ್ದಂತೆ ಡಿಕೆ ಶಿವಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ
undefined
ಮದುವೆಯಲ್ಲಿ ಕೂಡ ಕಣ್ಣೀರು ಸುರಿಸುತ್ತಲೇ ಅವರು ವಧು-ವರರಿಗೆ ಅಕ್ಷತೆ ಹಾಕಿ, ಹಾರೈಸಿದ್ದಾರೆ. ಈ ವೇಳೆ ಭಾವುಕರಾದ ಐಶ್ವರ್ಯ ಕೂಡ ಕಣ್ತುಂಬಿಕೊಂಡಿದ್ದಾರೆ.
undefined
ಕೆಂಪು ಬಣ್ಣದ ರೇಷ್ಮೆ ಸೀರೆಯುಟ್ಟು, ವಜ್ರಾಭರಣಗಳನ್ನು ತೊಟ್ಟಿದ್ದ ಐಶ್ವರ್ಯ ಮದುಮಗಳಾಗಿ ಮಿಂಚುತ್ತಿದ್ದರು.
undefined
ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ಇಂದು ಅದ್ದೂರಿಯ ಮದುವೆ ನಡೆದಿದೆ.
undefined
ಎಸ್​ಎಂ ಕೃಷ್ಣ ಹಾಗೂ ಡಿಕೆ ಶಿವಕುಮಾರ್ ಕುಟುಂಬಸ್ಥರು ಮದುವೆಯಲ್ಲಿ ಪಾಲ್ಗೊಂಡಿದ್ದು, ಆಪ್ತ ಸಂಬಂಧಿಕರಿಗಷ್ಟೇ ಆಮಂತ್ರಣ ನೀಡಲಾಗಿದೆ.ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಭಾಗಿ.
undefined
ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಕೂಡಾ ಮದುವೆಯಲ್ಲಿ ಭಾಗಿ.
undefined
ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವ ದಂಪತಿಗೆ ಶುಭ ಹಾರೈಸಿದ ಜೆನಿಲಿಯಾ ಹಾಗೂ ರಿತೇಶ್ ದೇಶ್‌ಮುಖ್‌ ದಂಪತಿ.
undefined
ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವ ದಂಪತಿಗೆ ಶುಭ ಹಾರೈಸಿದ ಜೆನಿಲಿಯಾ ಹಾಗೂ ರಿತೇಶ್ ದೇಶ್‌ಮುಖ್‌ ದಂಪತಿ.
undefined

Latest Videos

click me!