ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು, ಬೆಂಗಳೂರಿನಿಂದ ಯಾವ ಜಿಲ್ಲೆಗೆ ಸೇವೆ?

Published : May 08, 2025, 05:38 PM IST

ಕರ್ನಾಟಕದ ಮೂಲೆ ಮೂಲೆಗೆ ಸಂಪರ್ಕ ಕಲ್ಪಿಸಲು ಇದೀಗ ಮತ್ತೊಂದು ವಂದೇ ಭಾರತ್ ರೈಲು ಸೇವೆ ಆರಂಭಿಸಲಾಗುತ್ತಿದೆ. ಇದು ಕರ್ನಾಟಕದ 11ನೇ ವಂದೇ ಭಾರತ್ ರೈಲಾಗಿದೆ. ಹೊಸ ವಂದೇ ಭಾರತ್ ರೈಲು ಬೆಂಗಳೂರು ಹಾಗೂ ಈ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ.

PREV
16
ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು, ಬೆಂಗಳೂರಿನಿಂದ ಯಾವ ಜಿಲ್ಲೆಗೆ ಸೇವೆ?

ಭಾರತದಲ್ಲಿ ರೈಲು ಸೇವೆಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಮೂಲೆ ಮೂಲೆಗೆ ರೈಲು ಸಂಪರ್ಕ ಕಲ್ಪಿಸಲಾಗುತ್ತದೆ. ಹೆಚ್ಚಿನ ಪ್ರಯಾಣಿಕರು, ಬೇಡಿಕೆ ತಕ್ಕಂತೆ ರೈಲು ಸೇವೆ ವಿಸ್ತರಿಸಲಾಗುತ್ತಿದೆ. ಇದರ ಜೊತೆಗೆ ಆರಾಮದಾಯಕ ಪ್ರಯಾಣಕ್ಕಾಗಿ ವಂದೇ ಭಾರತ್ ರೈಲು ಸೇವೆಯನ್ನು ನೀಡಲಾಗುತ್ತಿದೆ. ಇದೀಗ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು ಸೇವೆ ಲಭ್ಯವಾಗುತ್ತಿದೆ.

26

ಕೇಂದ್ರ ರೈಲ್ವೇ ಇಲಾಖೆ ಇದೀಗ ಕರ್ನಾಟಕಕ್ಕೆ 11ನೇ ವಂದೇ ಭಾರತ್ ರೈಲು ಸೇವೆ ನೀಡಿದೆ. ವಿಶೇಷ ಅಂದರೆ ಇದು ಯಾವುದೇ ವಂದೇ ಭಾರತ್ ರೈಲನ್ನು ವಿಸ್ತರಣೆ ಮಾಡಿದ ಯೋಜನೆಯಲ್ಲಿ. ಹೊಸ ವಂದೇ ಭಾರತ್ ರೈಲು ಸೇವೆ ಆಗಿದೆ. ಪ್ರಮುಖವಾಗಿ ಉತ್ತರ ಕರ್ನಾಟಕದ ಭಾಗದ ಜನರಿಗೆ ಈ ವಂದೇ ಭಾರತ್ ರೈಲು ನೆರವಾಗಲಿದೆ.  ಕಾರಣ ಈ ರೈಲು ಬೆಂಗಳೂರು-ಬೆಳಗಾವಿ ಸಂಪರ್ಕಿಸಲಿದೆ.

36

ಬೆಂಗಳೂರು-ಬೆಳಗಾವಿ ಹಾಗೂ ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲು ಸೇವೆಗೆ ಕೇಂದ್ರ ರೈಲ್ವೇ ಇಲಾಖೆ ಅಸ್ತು ಎಂದಿದೆ. ಈ ಹಿಂದೆ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿ ವರೆಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆಧರೆ ಇದು ವಿಸ್ತರಣೆ ಅಲ್ಲ, ಹೊಸ ರೈಲು ಸೇವೆಯಾಗಿದೆ. ಹೀಗಾಗಿ ಬೆಂಗಳೂರು-ಬೆಳಗಾವಿ ನಡುವೆ ಪ್ರಯಾಣ ಮಾಡುವವರಿಗೆ ಮತ್ತಷ್ಟು ಅನುಕೂಲವಾಗಲಿದೆ.

46
vande bharat 02.jpg

8 ಕೋಚ್‌ಗಳ ವಂದೇ ಭಾರತ್ ರೈಲು ಸೇವೆ ಬೆಂಗಳೂರು-ಬೆಳಗಾವಿ ನಡುವೆ ಸೇವೆ ನೀಡಲಿದೆ. ಪ್ರಯಾಣಿರ ಸಂಖ್ಯೆ, ಬೇಡಿಕೆ ಆಧರಿಸಿ ಕೋಚ್ ಸಂಖ್ಯೆ ಹೆಚ್ಚಿಸಲಾಗುತ್ತದೆ ಎಂದು ಸೌತ್ ವೆ್ಸ್ಟರ್ನ್ ರೈಲ್ವೇ ಪಿಆರ್‌ಒ ಮಂಜುನಾಥ್ ಕನಮಾಡಿ ಹೇಳಿದ್ದಾರೆ. ಗಂಟಗೆ 110 ಕಿ.ಮೀ ವೇಗದಲ್ಲಿ ಈ ವಂದೇ ಭಾರತ್ ರೈಲು ಸಂಚರಿಸಲಿದೆ. 610.6 ಕಿಲೋಮೀಟರ್ ದೂರವನ್ನು 7 ಗಂಟೆ 55 ನಿಮಿಷದಲ್ಲಿ ತಲುಪಲಿದೆ ಎಂದಿದ್ದಾರೆ.

56

ಸದ್ಯ ಬೆಂಗಳೂರು ಬೆಳಗಾವಿ ನಡುವಿನ ರೈಲು ಸರಿಸುಮಾರ 10 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ವಂದೇ ಭಾರತ್ ಸರಿಸುಮಾರು 8 ಗಂಟೆ ಸಮಯದಲ್ಲಿ ತಲುಪಲಿದೆ. ಬೆಳಗ್ಗೆ ಬೆಳಗಾವಿಯಿಂದ ಹೊರಟ ರೈಲು ಸಂಜೆ ಬೆಂಗಳೂರು ತಲುಪಲಿದೆ. ಇನ್ನು ಬೆಂಗಳೂರಿನಿಂದ ಮಧ್ಯಾಹ್ನದ ಬಳಿಕ ಹೊರಟು ರಾತ್ರಿ ವೇಳೆ ಬೆಳಗಾವಿ ತಲುಪಲಿದೆ ಎಂದು ಮಂಜನಾಥ್ ಕನಮಾಡಿ ಹೇಳಿದ್ದಾರೆ.

66

ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲು  ಲೊಂಡಾ, ಧಾರವಾಡ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ತುಮಕೂರು, ಹಾಗೂ ಯಶವಂತಪುರ ನಿಲ್ದಾಣಗಲ್ಲಿ ನಿಲುಗೆಡೆಯಾಗಲಿದೆ. ಚೇರ್ ಕಾರ್ ಟಿಕೆಟ್ ಬೆಲೆ 1,500 ಎಂದು ಅಂದಾಜಿಸಲಾಗಿದ್ದು, ಎಕ್ಸಿಕ್ಯೂಟೀವ್ ಕ್ಲಾಸ್ ಬೆಲೆ 2,500 ರೂಪಾಯಿ ಎಂದು ಅಂದಾಜಿಸಲಾಗಿದೆ. 

Read more Photos on
click me!

Recommended Stories