ಕುಚುಪುಡಿಯ ದಂತಕಥೆಯಾದ ಸುನಂದಾ ದೇವಿ, ಯಕ್ಷಗಾನದ ದಂತಕಥೆಯಾದ ಬನ್ನಂಜೆ ಸುವರ್ಣ, 88 ವರ್ಷಗಳ ಮೃದಂಗ ವಿದ್ವಾನ್ ವಿದ್ವಾನ್ ಎ. ವಿ. ಆನಂದ್, ಖ್ಯಾತ ಕೊರಿಯೋಗ್ರಾಫರ್ ಆದ , ನಟರಾದ, ಜನಪದ ನೃತ್ಯದ ತಜ್ಞರಾದ, ಸಂಶೋಧಕರಾದ ಸ್ನೇಹ ಕಪ್ಪನ ಈ ಸಮಾವೇಶದಲ್ಲಿ ಭಾಗವಹಿಸಿದರು. ಬೆಂಗಳೂರಿನ ಆಯನ ನೃತ್ಯ ಕಂಪನಿಯವರು ಫ್ಯೂಶನ್ ನರ್ತನವನ್ನು ಪ್ರದರ್ಶಿಸಿದರೂ. ಎನ್ ಎಸ್ ಡಿ ಬೆಂಗಳೂರಿನ ವಿದ್ಯಾರ್ಥಿಗಳು ಅವರು ಬಸವಣ್ಣನವರ ಮೇಲೆ ವಿಶೇಷ ನಾಟಕವನ್ನು ನಡೆಸಿಕೊಟ್ಟರು.
ಆಧ್ಯಾತ್ಮಿಕತೆಯೊಡನೆ ಕಲೆ ಮತ್ತು ಪ್ರದರ್ಶನದ ಬೆಸುಗೆಯೇ ಭಾವ್-2025ಯ ಅನುಪಮತೆಯಾಗಿತ್ತು. ಎಲ್ಲಾ ಕಲಾವಿದರೂ ಸ್ವಲ್ಪ ಸಮಯವನ್ನು ಮೀಸಲಿಟ್ಟು, "ಸುದರ್ಶನ ಕ್ರಿಯೆಯನ್ನು " ಕಲಿತರು. ದಿ ವರ್ಲ್ಡ್ ಫೋರಂ ಫಾರ್ ಆರ್ಟ್ ಆಂಡ್ ಕಲ್ಚರ್ ನ ನಿರ್ದೇಶಕಿಯಾದ ಶ್ರೀ ವಿದ್ಯಾ ವರ್ಚಸ್ವಿಯವರು, " ಕಳೆದ ನಾಲ್ಕು ದಶಕಗಳಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು , ಗುರುದೇವರ ದೃಷ್ಟಿಕೋನದಂತೆ, ಕಲೆಯು ಎಲ್ಲಾ ಜಾತಾಗಳ, ಧರ್ಮಗಳ, ಪಂಥಗಳ , ವಯಸ್ಸಿನ, ವಿವಿಧ ಅಭಾಪ್ರಾಯಗಳನ್ನುಳ್ಳ, ವಿವಿಧ ಆಸಕ್ತಿಗಳನ್ನುಳ್ಳ ಜನರನ್ನು ಹೇಗೆ ಏಕವಾಗಿಸಿ ಸಂಭ್ರಮಿಸಬಹುದು ಎಂದು ತೋರಿಸಿದೆ" ಎಂದರು.