ಡಾ.ಬ್ರೋ 2025ರಲ್ಲಿ ನಮ್ಮ ಕೈಗೆ ಸಿಗೊಲ್ವಾ; ಇದೇನಿದು ಹೊಸ ರೆಸಲೂಷನ್!

First Published | Dec 31, 2024, 6:44 PM IST

ಡಾ. ಬ್ರೋ 2025ರಲ್ಲಿ ಹೊಸ ಸಾಹಸಕ್ಕೆ ಸಜ್ಜಾಗಿದ್ದಾರೆ. ನೇಪಾಳದಿಂದ ಹೊಸ ವರ್ಷದ ಶುಭಾಶಯಗಳನ್ನು ಹಂಚಿಕೊಂಡ ಅವರು, 2025ರಲ್ಲಿ 'ಬ್ಲಾಸ್ಟ್' ಆಗುವುದಾಗಿ ಹೇಳಿದ್ದಾರೆ. ಇದು ಪ್ರವಾಸ, ಮದುವೆ ಅಥವಾ ಹೊಸ ಉದ್ಯಮದ ಸುಳಿವಾ?

ಹೊಸ ವರ್ಷ 2025ರ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ನೇಪಾಳದ ಪ್ರವಾಸದಲ್ಲಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡಿರುವ ಡಾ.ಬ್ರೋ 'ನಾನು 2024 ರಲ್ಲಿ ನನ್ನ ಸೋಮಾರಿತನವನ್ನು ಕೊಂದಿದ್ದೇನೆ. ಮತ್ತು 2025 ನಾನು ಬ್ಲಾಸ್ಟ್ ಆಗುವುದಾಗಿ ಭರವಸೆ ನೀಡುತ್ತಿದ್ದೇನೆ' ಎಂದು ಟ್ಯಾಗ್‌ಲೈನ್ ಬರೆದುಕೊಂಡಿದ್ದಾರೆ. ಇದರ ಅರ್ಥ 2024ನೇ ಸಾಲಿನಲ್ಲಿ ದೇಶ, ವಿದೇಶಗಳಲ್ಲಿ ಸುತ್ತಾಡುತ್ತಾ ಯೂಟೂಬ್‌ ಮೂಲಕ ಸಂಪಾದನೆ ಮಾಡುವುದಲ್ಲದೇ ಒಂದು ಟೂರ್ ಅಂಡ್ ಟ್ರಾವೆಲ್ಸ್ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ದಾರೆ. ಇದರ ಮೂಲಕ ತನ್ನ ಎಲ್ಲ ಸೋಮಾರಿತನವನ್ನು ತೊಡೆದು ಹಾಕಿದ್ದಾಗಿ ತಿಳಿಸಿದ್ದಾರೆ.

ಆದರೆ, ಮುಂದಿನ 2025ರಲ್ಲಿ ನಾನು ಬ್ಲಾಸ್ಟ್ ಆಗುತ್ತೇನೆ ಎಂದು ಹೇಳುವ ಮೂಲಕ ವಿಭಿನ್ನ ಅರ್ಥವನ್ನು ನೀಡಿದ್ದಾರೆ. ಇಲ್ಲಿ ವರ್ಷದ ಬಹುತೇಕ ದಿನಗಳನ್ನು ತಮ್ಮ ವಿಶ್ವ ಪ್ರವಾಸದಲ್ಲಿಯೇ ಕಳೆಯಲು ನಿರ್ಧರಿಸಿದ್ದಾರಾ? ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ, ಅವರು ಮದುವೆ ಮಾಡಿಕೊಳ್ಳುತ್ತಾರಾ? ಎಂಬ ಪ್ರಶ್ನೆಗಳು ಕೂಡ ಬಂದಿವೆ. ಅಥವಾ ಹೊಸದೊಂದು ಉದ್ಯಮವನ್ನು ಆರಂಭಿಸುವ ದೊಡ್ಡ ಗುರಿಯನ್ನು ಇಟ್ಟುಕೊಂಡಿದ್ದಾರಾ? ಎಂಬ ಪ್ರಶ್ನೆಗಳು ಕೂಡ ಸಹಜವಾಗಿ ಮೂಡುತ್ತವೆ. ಆದರೆ, ಯಾವುದೇ ಕಾರ್ಯಕ್ಕೂ ಕೈ ಹಾಕಿದರೂ ಅವರಿಗೆ ಯಶಸ್ಸು ಸಿಗಲಿ ಎನ್ನುವುದು ನಮ್ಮ ಸುದ್ದಿ ವಾಹಿನಿ ಹಾಗೂ ಎಲ್ಲ ಕನ್ನಡಿಗರ ಹಾರೈಕೆ ಆಗಿದೆ.
 

Tap to resize

ಇದನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಡಾ.ಬ್ರೋ ಅಭಿಮಾನಿಗಳು ನೀವು ಹೀರೋ ಸಿನಿಮಾದಲ್ಲಿ ನಟಿಸುತ್ತೀರಾ ಎಂದು ಕೇಳಿದ್ದಾರೆ. ಇನ್ನೊಬ್ಬರು ಡಾ.ಬ್ರೋ ಚೆನ್ನಾಗಿರಬೇಕು. ನೀವು ಲಕ್ಷಾಂತರ ಜನರ ಹೃದಯಗಳಿಗೆ ಇಷ್ಟವಾಗುವ ವ್ಯಕ್ತಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಗಗನ್ ಶ್ರೀನಿವಾಸ್‌ಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿ ಶುಭ ಕೋರಿದ್ದಾರೆ.

ಡಾ.ಬ್ರೋ ಅವರು 2025ನೇ ಸಾಲಿನ ಹೊಸ ವರ್ಷದಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ಸ್ವಾಗತ ಮಾಡಲಿದ್ದಾರೆ. ಕಠ್ಮಂಡು ನಗರದಲ್ಲಿರುವ ಪ್ರಸಿದ್ಧ ಕಾಲಭೈರವೇಶ್ವರ ದೇಗುಲದ ಬಳಿ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ದೇವಾಲಯವನ್ನು ಹಿಂದೂ ರಾಜರ ಆಳ್ವಿಕೆಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಾಲಯವು ಸಂಪೂರ್ಣವಾಗಿ ಮರದ ಕೆತ್ತನೆಗಳಿಂದ ನಿರ್ಮಾಣ ಮಾಡಲಾಗಿದ್ದು, ಯುನೆಸ್ಕೋ ವಿಶ್ವ ಪರಂಪರೆ ಹೊಂದಿದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಇನ್ನು ಕಠ್ಮಂಡು ದರ್ಬಾರ್ ಚೌಕದಲ್ಲಿರುವ ಕಾಲ ಭೈರವ ಹಿಂದೂ ದೇವಾಲಯ ಭತ್ತದ ಗದ್ದೆಯಲ್ಲಿ ಉದ್ಭವಗೊಂಡಿದೆ.  ನಂತರ ಇದನ್ನು ರಾಜ ಪ್ರತಾಪ್ ಮಲ್ಲನು ದರ್ಬಾರ್ ಚೌಕದಲ್ಲಿ ಇರಿಸಿ ದೇವಾಲಯವನ್ನು ನಿರ್ಮಿಸಿದ್ದಾನೆ ಎಂದು ಹೇಳಲಾಗುತ್ತದೆ. ಕಾಲಭೈರವ ಬೃಹತ್ ಮೂರ್ತಿಯನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ ಎಂದು ನಂಬಲಾಗಿದೆ.

Latest Videos

click me!