ರಾಜ್ಯದ ಜನತೆಗೆ ಸಿಹಿಸುದ್ದಿ: ಗಣರಾಜ್ಯೋತ್ಸವದಲ್ಲಿ ಪ್ರದರ್ಶನಕ್ಕೆ ಸಿದ್ಧಗೊಂಡ ಕನ್ನಡಿಗರ ಟ್ಯಾಬ್ಲೋ

Published : Jan 22, 2023, 10:37 PM ISTUpdated : Jan 22, 2023, 10:38 PM IST

ದೆಹಲಿ (ಜ.22): ಗಣರಾಜ್ಯೋತ್ಸವದ ವೇಳೆ ದೆಹಲಿಯ ಕರ್ತವ್ಯ ಪಥ್ ನಲ್ಲಿ ಪ್ರದರ್ಶನಗೊಳ್ಳಿದೆ ಕರ್ನಾಟಕ ಟ್ಯಾಬ್ಲೋ. ತ್ಯಾಗ, ನಿಸ್ವಾರ್ಥ ಸೇವೆಯ ಪ್ರತಿರೂಪ ನಾರಿ ಶಕ್ತಿ ಈ ಬಾರಿಯ ಟ್ಯಾಬ್ಲೋ ಸಿದ್ಧಗೊಂಡಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ದಚಿತರ ಪ್ರದರ್ಶನಕ್ಕೆ ಅನುಮತಿ ನೀಡುವ ಕುರಿತಾಗಿ ವಿವಾದ ಆರಂಭವಾಗಿತ್ತು. ನಂತರ ರಾಜ್ಯದ ಕೇಂದ್ರ ಸಚುವರು, ಸಂಸದರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರಂತರ ಒತ್ತಡದ ಫಲದಿಂದ ಸ್ತಬ್ದಚಿತ್ರ ಪ್ರದರ್ಶನಕ್ಕೆ ಒಪ್ಪಿಗೆ ದೊರೆತಿತ್ತು. ಈಗ ಸ್ತಬ್ದಚಿತ್ರವೂ ಸಿದ್ಧಗೊಂಡಿದ್ದು, ಅದರ ಅಪರೂಪದ ದೃಶ್ಯಗಳನ್ನು ನಾವು ಇಲ್ಲಿ ಕಣ್ತುಂಬಿಕೊಳ್ಳಬಹುದು. ಗಣರಾಜ್ಯೋತ್ಸವದ ವೇಳೆ ದೆಹಲಿಯ ಕರ್ತವ್ಯ ಪಥ್ ನಲ್ಲಿ ಪ್ರದರ್ಶನಗೊಳ್ಳಿದೆ ಕರ್ನಾಟಕ ಟ್ಯಾಬ್ಲೋ. ತ್ಯಾಗ, ನಿಸ್ವಾರ್ಥ ಸೇವೆಯ ಪ್ರತಿರೂಪ ನಾರಿ ಶಕ್ತಿ ಈ ಬಾರಿಯ ಟ್ಯಾಬ್ಲೋ ಸಿದ್ಧಗೊಂಡಿದೆ. ಪದ್ಮ ಪ್ರಶಸ್ತಿ ಪುರಸ್ಕೃತ ವೃಕ್ಷ ಮಾತೆಯರಾದ ಸಾಲುಮರದ ತಿಮ್ಮಕ್ಕ. ತುಳಸೀಗೌಡ ಹಾಲಕ್ಕಿ ಹಾಗೂ ಸೂಲಗಿತ್ತಿ ನರಸಮ್ಮ ಅವರ ಸ್ತಬ್ಧಚಿತ್ರ ಪ್ರದರ್ಶನ ಆಗುತ್ತಿದೆ. ಈ ಹಿರಿಯ ಮಹಿಳೆಯರು ನಮ್ಮ ನಾಡಿನ ಹೆಮ್ಮೆಯ ಪ್ರತೀಕವೂ ಆಗಿದ್ದು, ಅವರು ನಾಡಿಗಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಗೌರವಿಸುವ ಅಭೂತಪೂರ್ವ ಕ್ಷಣವಾಗಲಿದೆ.  Republic Day parade Tableau: ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೊನೆಗೂ ಅನುಮತಿ ಕೊನೆ ಕ್ಷಣದಲ್ಲಿ ಕರ್ನಾಟಕಕ್ಕೆ ದೊರೆತ ಅವಕಾಶ : ರಾಜ್ಯದ ಸ್ತಬ್ದ ಚಿತ್ರ ಪ್ರದರ್ಶನ ಮಾಡುವುದಕ್ಕೆ ಕೇಂದ್ರದ ಸಮಿತಿಯು ಒಪ್ಪಿಗೆ ನೀಡಿರಲಿಲ್ಲ. ಆದರೆ, ಸಮಿತಿ ನಿರೀಕ್ಷೆ ಮಾಡಿದ್ದ ಎಲ್ಲ ಮಾನದಂಡಗಳನ್ನು ಪೂರೈಸಿದ ಕರ್ನಾಟಕ ರಾಜ್ಯದ ಸ್ತಬ್ದಚಿತ್ರಕ್ಕೆ ಕೊನೇ ಕ್ಷಣದಲ್ಲಿ ಟ್ಯಾಬ್ಲೋ ಪ್ರದರ್ಶನಕ್ಕೆ ಅನುಮತಿ ದೊರೆತಿತ್ತು. ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಕನ್ನಡಿಗರ ಆಕ್ರೋಶ ಕ್ಕೆ ಮಣಿದು ಟ್ಯಾಬ್ಲೋ ಗೆ ಅವಕಾಶ ನೀಡಿತ್ತು. ಏಳು ದಿನದಲ್ಲಿ ಟ್ಯಾಬ್ಲೋ ಸಿದ್ಧ: ಕರ್ನಾಟಕದ ಪ್ರಸಿದ್ಧ ಈ ಟ್ಯಾಬ್ಲೋವನ್ನು ಕನ್ನಡದ ಪ್ರಸಿದ್ಧ ಕಲಾವಿದರು ಕೇವಲ ಏಳೇ ದಿನಗಳಲ್ಲಿ ಸಿದ್ದಪಡಿಸಿದ್ದಾರೆ. ಕಲಾವಿದ ಶಶಿಧರ್ ಅಡಪ ಅವರ ನೇತೃತ್ವದ ತಂಡದಲ್ಲಿ ವಿನ್ಯಾಸ ಮಾಡಲಾಗಿದೆ. ವಾರ್ತಾ ಇಲಾಖೆಯ ಆಯುಕ್ತ ಡಾ.ಹರ್ಷ ನೇತೃತ್ವದಲ್ಲಿ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ಒಟ್ಟಾರೆ ರಾಜ್ಯದ ಟ್ಯಾಬ್ಲೋ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪ್ರದರ್ಶನ ಮಾಡುತ್ತಿರುವುದಕ್ಕೆ ಭಾರಿ ಸಂತಸ ವ್ಯಕ್ತವಾಗಿದೆ.

PREV
14
ರಾಜ್ಯದ ಜನತೆಗೆ ಸಿಹಿಸುದ್ದಿ: ಗಣರಾಜ್ಯೋತ್ಸವದಲ್ಲಿ ಪ್ರದರ್ಶನಕ್ಕೆ ಸಿದ್ಧಗೊಂಡ ಕನ್ನಡಿಗರ ಟ್ಯಾಬ್ಲೋ

ತ್ಯಾಗ, ನಿಸ್ವಾರ್ಥ ಸೇವೆಯ ಪ್ರತಿರೂಪ ನಾರಿ ಶಕ್ತಿ ಈ ಬಾರಿಯ ಟ್ಯಾಬ್ಲೋ ಸಿದ್ಧಗೊಂಡಿದೆ. ಪದ್ಮ ಪ್ರಶಸ್ತಿ ಪುರಸ್ಕೃತ ವೃಕ್ಷ ಮಾತೆಯರಾದ ಸಾಲುಮರದ ತಿಮ್ಮಕ್ಕ. ತುಳಸೀಗೌಡ ಹಾಲಕ್ಕಿ ಹಾಗೂ ಸೂಲಗಿತ್ತಿ ನರಸಮ್ಮ ಅವರ ಸ್ತಬ್ಧಚಿತ್ರ ಪ್ರದರ್ಶನ ಆಗುತ್ತಿದೆ. 

24

ಕರ್ನಾಟಕದ ಪ್ರಸಿದ್ಧ ಈ ಟ್ಯಾಬ್ಲೋವನ್ನು ಕನ್ನಡದ ಪ್ರಸಿದ್ಧ ಕಲಾವಿದರು ಕೇವಲ ಏಳೇ ದಿನಗಳಲ್ಲಿ ಸಿದ್ದಪಡಿಸಿದ್ದಾರೆ. ಕಲಾವಿದ ಶಶಿಧರ್ ಅಡಪ ಅವರ ನೇತೃತ್ವದ ತಂಡದಲ್ಲಿ ವಿನ್ಯಾಸ ಮಾಡಲಾಗಿದೆ. 

34

ವಾರ್ತಾ ಇಲಾಖೆಯ ಆಯುಕ್ತ ಡಾ.ಹರ್ಷ ನೇತೃತ್ವದಲ್ಲಿ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ಒಟ್ಟಾರೆ ರಾಜ್ಯದ ಟ್ಯಾಬ್ಲೋ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪ್ರದರ್ಶನ ಮಾಡುತ್ತಿರುವುದಕ್ಕೆ ಭಾರಿ ಸಂತಸ ವ್ಯಕ್ತವಾಗಿದೆ.

44

ರಾಜ್ಯದ ಸ್ತಬ್ದ ಚಿತ್ರ ಪ್ರದರ್ಶನ ಮಾಡುವುದಕ್ಕೆ ಕೇಂದ್ರದ ಸಮಿತಿಯು ಒಪ್ಪಿಗೆ ನೀಡಿರಲಿಲ್ಲ. ಆದರೆ, ಸಮಿತಿ ನಿರೀಕ್ಷೆ ಮಾಡಿದ್ದ ಎಲ್ಲ ಮಾನದಂಡಗಳನ್ನು ಪೂರೈಸಿದ ಕರ್ನಾಟಕ ರಾಜ್ಯದ ಸ್ತಬ್ದಚಿತ್ರಕ್ಕೆ ಕೊನೇ ಕ್ಷಣದಲ್ಲಿ ಟ್ಯಾಬ್ಲೋ ಪ್ರದರ್ಶನಕ್ಕೆ ಅನುಮತಿ ದೊರೆತಿತ್ತು.

Read more Photos on
click me!

Recommended Stories