Published : May 25, 2024, 12:10 PM ISTUpdated : May 25, 2024, 12:12 PM IST
ಮಾಜಿ ಪೊಲೀಸ್ ಅಧಿಕಾರಿ ಮತ್ತು ಈಗಿನ ಭಾರತೀಯ ಜನತಾ ಪಕ್ಷದ ತಮಿಳುನಾಡು ರಾಜ್ಯ ಘಟಕದ ರಾಜ್ಯಾಧ್ಯಕ್ಷರಾದ ಅಣ್ಣಾಮಲೈ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು.
ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಅಣ್ಣಾಮಲೈ ರಾಯರ ದರ್ಶನ, ಬೃಂದಾವನಕ್ಕೆ ತೆರಳಿ ದರ್ಶನ ಪಡೆದರು.
25
ಲೋಕಸಭಾ ಚುನಾವಣೆ ಪ್ರಚಾರ, ಸಭೆ, ಸಮಾರಂಭಗಳ ಜಂಜಾಟದಿಂದ ಕುಟುಂಬದವರೊಂದಿಗೆ ಬೆರೆಯಲು ಆಗಿರಲಿಲ್ಲ ಚುನಾವಣೆ ಮತದಾನ ಬಹುತೇಕ ಮುಗಿದಿದ್ದು ಇದೀಗ ಕುಟುಂಬದೊಂದಿಗೆ ರಾಯರ ದರ್ಶನ ಪಡೆದು.ನಿರಾಳರಾಗಿದ್ದಾರೆ.
35
ಗುರುರಾಯರ ದರ್ಶನ ಬಳಿಕ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿ ಅಶೀರ್ವಾದ ಪಡೆದರು. ಕೆಲಹೊತ್ತು ಮಾತುಕತೆ ನಡೆಸಿರು.
45
ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ತಮಿಳನಾಡಿನಲ್ಲಿಯೂ ಸಹ ಅಣ್ಣಾಮಲೈ ನೇತೃತ್ವದ ಬಿಜೆಪಿ ಪಕ್ಷ ವಿಜಯ ಸಾಧಿಸಲಿದೆ ಎಲ್ಲ ಅಡೆತಡೆಗಳ ನಿವಾರಣೆಗೆ ಕುಟುಂಬ ಸಮೇತರಾಗಿ ಗುರುರಾಯರ ದರ್ಶನ ಮಾಡಿರುವ ಅಣ್ಣಾಮಲೈ
55
ಶ್ರೀಗಳ ಭೇಟಿ ಬಳಿಕ ಅಣ್ಣಾಮಲೈ ಅವರಿಗೆ ಮಠದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ಗುರುರಾಯರ ದರ್ಶನ, ಶ್ರೀಗಳ ಆಶೀರ್ವಾದ ಪಡೆದ ಕುಟುಂಬಸ್ಥರು ಪುನೀತರಾದರು. ಈ ವೇಳೆ ಮಠಕ್ಕೆ ಆಗಮಿಸಿದ್ದ ಭಕ್ತರು ಅಣ್ಣಾಮಲೈ ಬಂದಿದ್ದನ್ನು ಕಂಡು ನೋಡಲು ದುಂಬಾಲು ಬಿದ್ದರು.