ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ದಿ.ಚೆನ್ನಮ್ಮ ಹೆಸರಿಡುವಂತೆ ಜೆಡಿಎಸ್ ಶಾಸಕ ಶರವಣ ಮನವಿ

Published : Aug 13, 2026, 01:09 PM IST

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ದಿ.ಚೆನ್ನಮ್ಮರ ಹೆಸರನ್ನು ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಇಡಬೇಕೆಂದು ಜೆಡಿಎಸ್ ಶಾಸಕ ಶರವಣ ಅವರು ವಿಧಾನ ಪರಿಷತ್‌ನಲ್ಲಿ ಮನವಿ ಮಾಡಿದ್ದಾರೆ. ಸಂತಾಪ ಸೂಚನೆ ವೇಳೆ ಈ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.

PREV
15
ಮಧ್ಯಾಹ್ನದ ಬಿಸಿಯೂಟ ಯೋಜನೆ

ಬೆಂಗಳೂರು: ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ದಿ.ಚೆನ್ನಮ್ಮರ ಹೆಸರಿಡುವಂತೆ ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ಶಾಸಕ ಶರವಣ ಅವರು ವಿಧಾನ ಪರಿಷತ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸಂತಾಪ ಸೂಚನೆ ನಿರ್ಣಯದ ವೇಳೆ ಚೆನ್ನಮ್ಮ ದೇವೇಗೌಡರ ಬಗ್ಗೆ ಶಾಸಕ ಶರವಣ ಮಾತನಾಡಿರು.

25
ಸುರೇಶ್ ಬಾಬು ಧನ್ಯವಾದ

ಚೆನ್ನಮ್ಮ ಹೆಸರು ಅವಿಸ್ಮರಣೀಯವಾಗಿಸಲು ಬಿಸಿಯೂಟ ಯೋಜನೆಗೆ ಹೆಸರಿಡಲು ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಇನ್ನು ವಿಧಾನಸಭೆಯಲ್ಲಿ ಚೆನ್ನಮ್ಮನವರಿಗೆ ಗೌರವ ಸಲ್ಲಿಸಿದ್ದಕ್ಕೆ ಸರ್ಕಾರಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬುರಿಂದ ಧನ್ಯವಾದ ಸಲ್ಲಿಕೆ ಮಾಡಿದರು.

35
ಚೆನ್ನಮ್ಮನವರ ನಿಧನಕ್ಕೆ ಸಿಎಂ ಡಿಕೆ ಶಿವಕುಮಾರ್ ಸಂತಾಪ

ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ಸಿಎಂ ಡಿಕೆ ಶಿವಕುಮಾರ್ ಅವರು, ಚೆನ್ನಮ್ಮನವರ ನಿಧನಕ್ಕೆ ಸಂತಾಪ ಸೂಚಿಸಿದರು. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರು ಇವತ್ತು ನಮ್ಮ ಜೊತೆಯಲ್ಲಿ ಇಲ್ಲ. ಓರ್ವ ರಾಜಕಾರಣಿಯ ಮನೇಲಿ ಯಾವ ರೀತಿಯ ಇರಬೇಕು ಅನ್ನೋದಕ್ಕೆ ಚೆನ್ನಮ್ಮನವರು ಸಾಕ್ಷಿ. ಪ್ರತಿ ಸಂದರ್ಭದಲ್ಲೂ ದೇವೇಗೌಡರ ಕುಟುಂಬದ ಜೊತೆಯಲ್ಲಿದ್ದರು ಎಂದರು ಹೇಳಿದರು.

45
ತ್ಯಾಗದ ಹೆಣ್ಣು

ತ್ಯಾಗದ ಹೆಣ್ಣು ಎಂದು ಹೇಳಿಕೊಳ್ಳಲು ನಮಗೆಲ್ಲರಿಗೂ ಹೆಮ್ಮೆ. ಅವರಿಗೆ ಸರ್ಕಾರದ ಗೌರವ ಕೊಡಬೇಕು ಎಂದಾಗ ಚರ್ಚೆ ಬಂತು. ಪ್ರಧಾನ ಮಂತ್ರಿಯಾದವರ ಹೆಂಡತಿಗೆ ಕೊಡೋಕೆ ಆಗುದಿಲ್ಲ ಎಂದೆಲ್ಲ ಚರ್ಚೆ ಬಂತು. ಕೊನೆಗೆ ನಾನು ದಿಟ್ಟ ನಿರ್ಧಾರ ತೆಗೆದುಕೊಂಡು ಅಧಿಕಾರಿಗಳಿಗೆ ಹೇಳಿದೆ. ನಮಗೆ ಅಧಿಕಾರ ಇದ್ದಾಗ ಹೃದಯ ಶ್ರೀಮಂತಿಕೆ ತೋರಿಸಬೇಕು ಎಂದರು.

55
ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ

ಅಧಿಕಾರ ಇದ್ದಾಗ ದೊಡ್ಡ ಮಹಿಳೆ ರಾಜ್ಯಕ್ಕೆ ದೊಡ್ಡ ಮಕ್ಕಳನ್ನು ಕೊಟ್ಟಿದ್ದಾರೆ. ಅಂತಹವರಿಗೆ ನಾವು ಗೌರವ ಕೊಡಬೇಕೆಂದು ಅತಿ ಹೆಚ್ಚು ಗೌರವ ಕೊಟ್ಟಿದ್ದೇವೆ. ಆ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ. ಸಾವು ಯಾವಾಗ ಬರುತ್ತದೋ ಸಂತೋಷದಿಂದಲೇ ಸ್ವೀಕಾರ ಮಾಡಬೇಕು. ಅಗಲಿದ ಎಲ್ಲರ ಆತ್ಮಕ್ಕೂ ಶಾಂತಿ ಸಿಗಲಿ ಎಂದು ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories