Published : Jan 19, 2026, 03:45 PM ISTUpdated : Jan 19, 2026, 05:38 PM IST
ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಅವರದ್ದೆನ್ನಲಾದ 47 ಸೆಕೆಂಡ್‌ಗಳ ವಿಡಿಯೋ ಲೀಕ್ ಆಗಿದ್ದು, ಕಚೇರಿಯಲ್ಲೇ ಮೂವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಖಾಕಿ ಸಮವಸ್ತ್ರದಲ್ಲೇ ಮಹಿಳೆಯರಿಗೆ ಮುತ್ತಿಕ್ಕುವುದು, ಖಾಸಗಿ ಭಾಗಗಳನ್ನು ಮುಟ್ಟುವಂತಹ ವಿಕೃತ ದೃಶ್ಯಗಳು ವಿಡಿಯೋದಲ್ಲಿವೆ.
ಬೆಂಗಳೂರು (ಜ.19): ರಾಜ್ಯದ ಕಾನೂನು ಕಾಯಬೇಕಾದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಕಚೇರಿಯನ್ನೇ 'ಕಾಮದಾಟಕ್ಕೆ ರಂಗಮಂದಿರ' ಮಾಡಿಕೊಂಡಿರುವ ಆಘಾತಕಾರಿ ಸತ್ಯ ಈಗ ಜಗಜ್ಜಾಹೀರುಗೊಂಡಿದೆ.
ಡಿಜಿಪಿ ರಾಮಚಂದ್ರ ರಾವ್ ಅವರದ್ದನ್ನಲಾದ 47 ಸೆಕೆಂಡ್‌ಗಳ ಸ್ಫೋಟಕ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ಒಬ್ಬರಲ್ಲ, ಇಬ್ಬರಲ್ಲ, ಒಟ್ಟು ಮೂವರು ಮಹಿಳೆಯರೊಂದಿಗೆ ಅಧಿಕಾರಿ ಅಸಭ್ಯವಾಗಿ ವರ್ತಿಸಿರುವುದು ಕಂಡುಬಂದಿದೆ.
26
ವಿಡಿಯೋದಲ್ಲಿ ಏನಿದೆ? : ಅಸಹ್ಯದ ಪರಮಾವಧಿ
ಇದೀಗ ಬಿಡುಗಡೆಯಾಗಿರುವ ಈ 47 ಸೆಕೆಂಡ್‌ನ ವಿಡಿಯೋ ತುಣುಕಿನಲ್ಲಿ ಖಾಕಿ ಸಮವಸ್ತ್ರಧಾರಿ ರಾಮಚಂದ್ರ ರಾವ್ ಅವರ ವಿಕೃತಿಯ ಪರಾಕಾಷ್ಠೆ ಅಡಗಿದೆ.
ಮೂವರು ಮಹಿಳೆಯರು:
ಈ ವಿಡಿಯೋದಲ್ಲಿ ಒಬ್ಬರು ಸೀರೆ ಉಟ್ಟ ಮಹಿಳೆಯರು ಹಾಗೂ ಇಬ್ಬರು ಚೂಡಿದಾರ ಧರಿಸಿದ ಯುವತಿಯರು ಕಾಣಿಸಿಕೊಂಡಿದ್ದಾರೆ. ಇವರಲ್ಲಿ ಒಬ್ಬರು ಪ್ರಸಿದ್ಧ ಮಾಡೆಲ್ ಎಂದು ಗುರುತಿಸಲಾಗಿದೆ.
36
ಕಚೇರಿ ಕುರ್ಚಿಯಲ್ಲೇ ಕಾಮದಾಟ, ಲಿಪ್‌ಲಾಕ್
ಸಮವಸ್ತ್ರದಲ್ಲಿಯೇ ಅಧಿಕೃತ ಕುರ್ಚಿಯಲ್ಲಿ ಕುಳಿತಿರುವ ಈ ಅಧಿಕಾರಿ, ಮಹಿಳೆಯರನ್ನು ತನ್ನತ್ತ ಎಳೆದಾಡಿ ತಬ್ಬಿಕೊಳ್ಳುವುದು ವಿಡಿಯೋದಲ್ಲಿದೆ.
ಅತ್ಯಂತ ಆಘಾತಕಾರಿ ಎಂದರೆ, ಅಧಿಕಾರಿಯ ಎದುರು ನಿಂತಿದ್ದ ಮಹಿಳೆಯ ಎದೆಯ ಭಾಗಕ್ಕೆ ಮುತ್ತು ಕೊಡುವುದು, ಮತ್ತೊಬ್ಬರೊಂದಿಗೆ ಲಿಪ್‌ಲಾಕ್ (ಮುತ್ತು) ಮಾಡುವ ದೃಶ್ಯಗಳು ಸೆರೆಯಾಗಿವೆ.
ಮಹಿಳೆಯರ ಖಾಸಗಿ ಭಾಗಗಳನ್ನು ಮುಟ್ಟುವುದು ಹಾಗೂ ಸೀರೆಯ ಒಳಗೆ ಕೈ ಹಾಕಿ ವಿಕೃತಿ ಮೆರೆದಿರುವುದು ಕಂಡುಬಂದಿದ್ದು, ಇಡೀ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಿದೆ.
56
ಯಾರು ಆ ಮಹಿಳೆಯರು?
ವಿಡಿಯೋದಲ್ಲಿರುವ ಮಹಿಳೆಯರ ಮುಖಗಳನ್ನು ಬ್ಲರ್ ಮಾಡಲಾಗಿದ್ದರೂ, ಇದು ಒಬ್ಬರಲ್ಲದೆ ಹಲವರೊಂದಿಗೆ ನಡೆಸಿದ 'ಸರಣಿ ರಾಸಲೀಲೆ' ಎಂಬುದು ಸ್ಪಷ್ಟವಾಗುತ್ತಿದೆ. ಕಚೇರಿಯ ಕೆಲಸದ ನಿಮಿತ್ತ ಬಂದವರನ್ನು ಅಥವಾ ಉದ್ದೇಶಪೂರ್ವಕವಾಗಿ ಕರೆಸಿಕೊಂಡವರನ್ನು ಈ ರೀತಿ ಬಳಸಿಕೊಳ್ಳಲಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ.
66
ಷಡ್ಯಂತ್ರದ ವಾದಕ್ಕೆ ಇಲ್ಲಿದೆ ಉತ್ತರ
ರಾಮಚಂದ್ರ ರಾವ್ ಅವರು ಇದು 'ಎಡಿಟೆಡ್ ವಿಡಿಯೋ' ಎಂದು ಸಮರ್ಥಿಸಿಕೊಂಡಿದ್ದರೂ, ವಿಡಿಯೋದಲ್ಲಿರುವ ಅವರ ಹಾವಭಾವಗಳು, ಮುತ್ತು ಕೊಡುವ ದೃಶ್ಯಗಳು ಮತ್ತು ಅವರು ಕುಳಿತಿರುವ ಕಚೇರಿಯ ಹಿನ್ನೆಲೆ ಅಸಲಿಯತ್ತನ್ನು ಸಾರುತ್ತಿವೆ.
ಸಮವಸ್ತ್ರದ ಘನತೆಯನ್ನು ಮಣ್ಣುಪಾಲು ಮಾಡಿದ ಈ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಮಹಿಳಾ ಸಂಘಟನೆಗಳು ಮತ್ತು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ