ಇಂದು 92ನೇ ಹುಟ್ಟುಹಬ್ಬ ಹಿನ್ನೆಲೆ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ಎಚ್‌ಡಿ ದೇವೇಗೌಡ ವಿಶೇಷ ಪೂಜೆ

Published : May 18, 2024, 10:00 AM IST

ಇಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌ಡಿ ದೇವೇಗೌಡ ಶನಿವಾರ ಮೇ.18ರಂದು 92ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ. ಇಂದು ಬೆಳಗ್ಗೆಯೇ ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಫೋಟೊಗಳು ಇಲ್ಲಿವೆ

PREV
15
ಇಂದು 92ನೇ ಹುಟ್ಟುಹಬ್ಬ ಹಿನ್ನೆಲೆ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ಎಚ್‌ಡಿ ದೇವೇಗೌಡ ವಿಶೇಷ ಪೂಜೆ

ಇಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌ಡಿ ದೇವೇಗೌಡ ಶನಿವಾರ ಮೇ.18ರಂದು 92ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆ ಇಂದು ಬೆಂಗಳೂರಿನ ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

25

ಇಂದು ಮುಂಜಾನೆ 5 ಗಂಟೆಗೆ ಕುಟುಂಬ ಸದಸ್ಯರ ಜೊತೆ ದೇವಸ್ಥಾನಕ್ಕೆ ತೆರಳಿದ ಗೌಡರು ಲಕ್ಷ್ಮೀ ವೆಂಕಟೇಶ್ವರನಿಗೆ ಆರತಿ ಬೆಳಗುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ದೇವರನ್ನು ಸ್ಮರಿಸಿದರು.
 

35

ನಿನ್ನೆಯಷ್ಟೇ ಮಾಧ್ಯಮಗಳಿಗೆ ತಿಳಿಸಿದ್ದ ದೇವೇಗೌಡರು, ಕೆಲವು ಕಾರಣಗಳಿಂದ ನಾನು ಈ ಬಾರಿ ಜನ್ಮದಿನ ಆಚರಿಸುಕೊಳ್ಳುವುದಿಲ್ಲ ಅಭಿಮಾನಿಗಳು ಮನೆ ಬಳಿ ಬರುವುದು ಬೇಡ ಇದ್ದಲ್ಲಿಂದಲೇ ಹಾರೈಸಿ ಎಂದು ಮನವಿ ಮಾಡಿದ್ದ ಗೌಡರು. ಇಂದು ಅದರಂತೆ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಹುಟ್ಟುಹಬ್ಬವನ್ನ ಸರಳವಾಗಿ ಆಚರಿಸಿಕೊಂಡಿದ್ದಾರೆ.

45

ಪೂಜೆ ಬಳಿಕ ಮಾತನಾಡಿದ ಹೆಚ್‌ಡಿ ದೇವೇಗೌಡರು, ಇವತ್ತಿಗೆ ನನ್ನ 91 ವರ್ಷ ಮುಗಿದಿದೆ. ಹೀಗಾಗಿ ನಾನು ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿದ್ದೇನೆ. ದೇವಸ್ಥಾನಕ್ಕೆ ಎಲ್ಲರಿಗೂ ಒಳಿತಾಗಲೆಂದು ಪ್ರಾರ್ಥಿಸಿದ್ದೇನೆ ಎಂದರು.
 

55

ನಾನು ನನ್ನ ಅಭಿಮಾನಿಗಳಿಗೆ ಈಗಾಗಲೇ ಈ ವರ್ಷದ ಹುಟ್ಟುಹಬ್ಬದ ಆಚರಣೆ ಮಾಡಬಾರದು ಅಂತ ವಿನಂತಿಸಿದ್ದೇನೆ. ಅಭಿಮಾನಿಗಳು ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾರೆ. ರಾಜ್ಯದ ಎಲ್ಲ ಅಭಿಮಾನಿಗಳಿಗೆ ಶುಭ  ಕೋರುತ್ತೇನೆ ಎಂದರು.

Read more Photos on
click me!

Recommended Stories