Photo Gallery: ಕರ್ನಾಟಕ-ಆಂಧ್ರ ಗಡಿಯಲ್ಲಿ ರೋಚಕ ಪ್ಯಾರಾ ಮಿಲಿಟರಿ ಸಮರಾಭ್ಯಾಸ!

Published : Mar 28, 2025, 07:43 PM ISTUpdated : Mar 28, 2025, 08:07 PM IST

ಬಳ್ಳಾರಿತಾಲೂಕಿನ  ಆಂಧ್ರದ ಗಡಿ ಭಾಗದಲ್ಲಿ ಇಂದು ಪ್ಯಾರ ಮಿಲ್ಟ್ರಿ  ಪಡೆ ಸಮರಾಭ್ಯಾಸವನ್ನು ನಡೆಸಿತು.ಕಮಾಂಡೆಟ್ ನಿಖಿಲ್ ಅವರ ನೇತೃತ್ವದಲ್ಲಿ ಈ ತರಬೇತಿ ನಡೆಯುತ್ತಿದೆ. ಹಾರುವ ವಿಮಾನದಿಂದ ಜಿಗಿಯುತ್ತಿರುವ ಯೋಧರ ಸಾಹಸ ರೋಮಾಂಚನಗೊಳಿಸಿದೆ.

PREV
15
Photo Gallery: ಕರ್ನಾಟಕ-ಆಂಧ್ರ ಗಡಿಯಲ್ಲಿ ರೋಚಕ ಪ್ಯಾರಾ ಮಿಲಿಟರಿ ಸಮರಾಭ್ಯಾಸ!

ಬಳ್ಳಾರಿತಾಲೂಕಿನ  ಆಂಧ್ರದ ಗಡಿ ಭಾಗದಲ್ಲಿ ಇಂದು ಪ್ಯಾರ ಮಿಲ್ಟ್ರಿ  ಪಡೆ ಸಮರಾಭ್ಯಾಸವನ್ನು ನಡೆಸಿತು.ಕಮಾಂಡೆಟ್ ನಿಖಿಲ್ ಅವರ ನೇತೃತ್ವದಲ್ಲಿ ಈ ತರಬೇತಿ ನಡೆಯುತ್ತಿದೆ.

25

ಬಳ್ಳಾರಿ ತಾಲೂಕಿನ ಜೋಳದರಾಶಿ, ಕೆ.ವೀರಾಪುರ, ಚೇಳಗುರ್ಕಿ ಮತ್ತು ಆಂದ್ರದ ಡೊಣೆಕಲ್ ಮಧ್ಯದ ಬಯಲು ಪ್ರದೇಶದಲ್ಲಿ ನಡೆಯುತ್ತಿರುವ ಸಮರಾಭ್ಯಸ ಮೈನವಿರೇಳಿಸುವಂತಿದೆ.

35

ಬೆಂಗಳೂರಿನಿಂದ  ಸೈನಿಕ‌ ತರಬೇತಿ ಪಡೆಯುತ್ತಿರುವ ಯೋಧರನ್ನು ಹೊತ್ತು ತರುವ ವಿಮಾನ  35 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿರುತ್ತಿವೆ. ಹಾರುವ ವಿಮಾನಗಳಿಂದ  ಪ್ಯಾರಶೂಟ್ ಕಟ್ಟಿಕೊಂಡು ಯೋಧರು ಹೊರಗೆ‌ ಜಿಗಿಯುತ್ತಾರೆ... 

45

ಪ್ಯಾರಶೂಟ್ ಓಪನ್ ಮಾಡಿಕೊಂಡು 12 ರಿಂದ 13 ನಿಮಿಷದೊಳಗೆ  ಕೆಳಗೆ ಬರುತ್ತಾರೆ. ಒಂದು ಬಾರಿಗೆ 20 ರಿಂದ  25 ಜನ ಒಂದು ವಿಮಾನದಿಂದ ಕೆಳಗೆ ಒಬ್ಬೊಬ್ಬರಾಗಿ ಹಾರುವ ದೃಶ್ಯ ರೋಮಾಂಚನಗೊಳಿಸಿದೆ

55

250 ಕ್ಕೂ ಹೆಚ್ಚು ಜನರಿಗೆ ಇಂದು ತರಬೇತಿ‌ ನೀಡುವ ಗುರಿ ಇದ್ದು ಬೆಳಿಗ್ಗೆ 11 ಗಂಟೆ ವೇಳೆಗೆ ನಾಲ್ಕು ಬಾರಿ ನಡೆದಿದೆ.  ಹೆಚ್ಚಿನ ಮರ ಗಿಡಗಿಳ್ಳಿಲ್ಲದೆ ಸಂಪೂರ್ಣ ಬಯಲು ಪ್ರದೇಶ ಆಗಿರುವುದರಿಂದ ಈ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
 

Read more Photos on
click me!

Recommended Stories