ಇತಿಹಾಸ ಪ್ರಸಿದ್ಧ ಹಟ್ಟಿ ಚಿನ್ನದ ಗಣಿ ಕಂಪನಿಯ ಮುಂಭಾಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ಹಟ್ಟಿ, ಸ್ಫೋಟಕಗಳು ತಂದಿದ್ದು ಎಲ್ಲಿಂದ? ಯಾರು? ಪತ್ತೆಗೆ ಮುಂದಾಗಿರುವ ರಾಯಚೂರು ಪೊಲೀಸರು, ಇಲ್ಲಿದೆ ಸಂಪೂರ್ಣ ವರದಿ
ಹಟ್ಟಿ ಗೋಲ್ಡ್ ಮೈನ್ ಎದುರು ಸ್ಫೋಟಕಗಳ ರಾಶಿ! ತಂದವರು ಯಾರು?
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಇತಿಹಾಸ ಪ್ರಸಿದ್ಧ ಹಟ್ಟಿ ಚಿನ್ನದ ಗಣಿ ಕಂಪನಿಯ ಮುಂಭಾಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ಹಟ್ಟಿ ಕಂಪನಿಯ ಭದ್ರತಾ ಸಿಬ್ಬಂದಿಯು ರಸ್ತೆಯಲ್ಲಿ ಬಿದ್ದಿದ್ದ ಸ್ಫೋಟಕಗಳನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
27
ತನಿಖೆಯಲ್ಲಿ ಬಯಲಾದ 16 ಸ್ಫೋಟಕ ಕಾಟ್ರಿಜ್‌ಗಳ ರಹಸ್ಯ
ಪೊಲೀಸರು ದಾಖಲಿಸಿಕೊಂಡಿರುವ ದೂರಿನ ಪ್ರಕಾರ, ಸ್ಥಳದಲ್ಲಿ ‘ಐಡಿಯಲ್ ಪವರ್’ ಕಂಪನಿಗೆ ಸೇರಿದ ಒಟ್ಟು 16 ಸ್ಫೋಟಕ ವಸ್ತುಗಳು (ಕಾಟ್ರಿಜ್‌ಗಳು) ಪತ್ತೆಯಾಗಿವೆ. ಸಾಮಾನ್ಯವಾಗಿ ಗಣಿಗಾರಿಕೆ ಅಥವಾ ಬಂಡೆಗಳನ್ನು ಸ್ಫೋಟಿಸಲು ಬಳಸುವ ಈ ವಸ್ತುಗಳು ಸಾರ್ವಜನಿಕ ರಸ್ತೆಯಲ್ಲಿ ಅನಾಥವಾಗಿ ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
37
ರಾಯಚೂರು ಎಸ್‌ಪಿ ಹೇಳಿದ್ದೇನು?
ಈ ಕುರಿತು ರಾಯಚೂರು ಎಸ್ ಪಿ ಅರುಣಾಂಗ್ಷು ಗಿರಿ ಅವರು ಸ್ಪಷ್ಟನೆ ನೀಡಿದ್ದು, ಸ್ಫೋಟಕ ವಸ್ತುಗಳ ಸಾಗಾಣಿಕೆ ನಿಯಮಗಳ ತೀವ್ರ ಉಲ್ಲಂಘನೆ ಇಲ್ಲಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ‘ನಂಬರ್ ಇಲ್ಲದ’ ನಿಗೂಢ ಬೈಕ್!
ಘಟನೆಯ ಕುರಿತು ಪೊಲೀಸರು ಹಟ್ಟಿ ಕಂಪನಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸ್ಫೋಟಕಗಳು ಅಲ್ಲಿಗೆ ಹೇಗೆ ಬಂದವು ಎಂಬ ಸುಳಿವು ಸಿಕ್ಕಿದೆ. ಬೆಳಗ್ಗೆ 8:30 ರಿಂದ 8:45ರ ಸುಮಾರಿನಲ್ಲಿ ಬೈಕ್‌ನಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬನ ಸೈಡ್ ಬ್ಯಾಗ್‌ನಿಂದ ಈ ವಸ್ತುಗಳು ಆಕಸ್ಮಿಕವಾಗಿ ರಸ್ತೆಗೆ ಬಿದ್ದಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ.
57
ಚುರುಕುಗೊಂಡ ತನಿಖೆ
ಆದರೆ, ಅಚ್ಚರಿಯ ವಿಷಯವೆಂದರೆ ಆ ಬೈಕ್‌ಗೆ ಯಾವುದೇ ನೋಂದಣಿ ಸಂಖ್ಯೆ (Number Plate) ಇರಲಿಲ್ಲ. ಇದು ಪೊಲೀಸರ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದ್ದು, ಅಪರಿಚಿತ ವ್ಯಕ್ತಿ ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಎಲ್ಲಿಗೆ ಸಾಗಿಸುತ್ತಿದ್ದ ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ.
67
ಆರೋಪಿ ಪತ್ತೆಗೆ ತಲಾಶ್
ಸದ್ಯ ರಾಯಚೂರು ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ನಿಯಮಬಾಹಿರವಾಗಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಆ ಅಪರಿಚಿತ ವ್ಯಕ್ತಿಯ ಪತ್ತೆಗಾಗಿ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ ದೃಶ್ಯಗಳನ್ನು ಕೂಡ ಜಾಲಾಡಲಾಗುತ್ತಿದೆ.
77
ಗಣಿಗಾರಿಕೆ ಪ್ರದೇಶದಲ್ಲಿ ಆತಂಕ
ಗಣಿಗಾರಿಕೆ ಪ್ರದೇಶವಾಗಿರುವುದರಿಂದ ಇವುಗಳ ದುರ್ಬಳಕೆ ಆಗುವ ಸಾಧ್ಯತೆಗಳ ಬಗ್ಗೆಯೂ ನಿಗಾ ಇರಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ