ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಿಲಿನ ಸಮೀಪ ಇರುವ ಚನ್ನಮ್ಮನವರ ಸಮಾಧಿ ಸ್ಥಳದಲ್ಲಿ ಗುರುವಾರ ಆಯೋಜಿಸಿದ್ದ ೧೧ನೇ ದಿನದ ಉತ್ತರ ಕ್ರಿಯಾದಿ ಕಾರ್ಯಕ್ಕೆ ಗಣ್ಯರು ಸೇರಿದಂತೆ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿ, ಚನ್ನಮ್ಮನವರ ಸಮಾಧಿಗೆ ನಮನ ಸಲ್ಲಿಸಿದರು.
25
ತಾಯಿಯ ಅಶೀರ್ವಾದ ಪಡೆಯುತ್ತಿರುವ ಕುಮಾರಸ್ವಾಮಿ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಅತ್ಮೀಯರ ಸಹಕಾರದಲ್ಲಿ ಕಳೆದ ಎಂಟು ದಿನಗಳಿಂದ ಉತ್ತರ ಕ್ರಿಯಾದಿ ಕಾರ್ಯದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು. ಚನ್ನಮ್ಮನವರ ೧೧ನೇ ದಿನದ ಕಾರ್ಯದಲ್ಲಿ ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದ್ದುದರಿಂದ ಏಕಕಾಲಕ್ಕೆ ಒಂದೂವರೆ ಸಾವಿರ ಜನ ಕುಳಿತು ಭೋಜನ ಸ್ವೀಕರಿಸುವ ವ್ಯವಸ್ಥೆಯ ೧೬ ಜರ್ಮನ್ ಟೆಂಟ್‌ಗಳು, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಜತೆಗೆ ಸುಗಮ ಸಂಚಾರಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿತ್ತು.
35
ಅಪಾರ ದೈವಭಕ್ತರಾಗಿದ್ದ ಚೆನ್ನಮ್ಮ
ಅಂತ್ಯಕ್ರಿಯೆ ನಡೆದ ದಿನದಿಂದ ಪ್ರತಿನಿತ್ಯ ಬೆಟ್ಟದ ತಪ್ಪಲಿಗೆ ಸಮಾಧಿ ಸ್ಥಳದಲ್ಲಿ ನಡೆಯಲಿರುವ ವಿಷ್ಣು ಸಹಸ್ರನಾಮ ಹಾಗೂ ಪಾರಾಯಣ ಪೂಜಾ ವಿಧಿವಿಧಾನವನ್ನು ನೆರವೇರಿಸುವ ಸಲುವಾಗಿ ಅರ್ಚಕರನ್ನು ನೇಮಿಸಿ, ಪೂಜಾ ಕೈಂಕರ್ಯದಲ್ಲಿ ಯಾವುದೇ ಲೋಪವಾಗದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂದಿನಿಂದ ಯಾವುದೇ ಅಡೆಚಣೆಗೆ ಆಸ್ಪದವಾಗದಂತೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ತಾಯಿಯ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಎಚ್‌ಎಂಟಿ ವಾಚ್‌ನಲ್ಲಿ ಚನ್ನಮ್ಮ ಅವರ ಫೋಟೋ ಹಾಕಿಸಿಕೊಂಡಿದ್ದಾರೆ. ಕುಮಾರಸ್ವಾಮಿಯವರು ಧರಿಸಿರುವ ವಾಚ್ ನೋಡುಗರ ಗಮನ ಸೆಳೆಯಿತು.
55
ಎಚ್‌ಎಂಟಿ ಬಗ್ಗೆ ಕುಮಾರಸ್ವಾಮಿ ಮಾತು
ಈ ಬಗ್ಗೆ ಮಾಧ್ಯಮಗಳಿಗೆ ವಾಚ್ ತೋರಿಸಿ ಪ್ರತಿಕ್ರಿಯಿಸಿದ ಅವರು, ನಾನು ವಾಚ್‌ನಲ್ಲಿ ನಮ್ಮ ತಾಯಿಯ ಫೋಟೊ ಹಾಕಿಸಿಕೊಂಡಿದ್ದು, ಸ್ಯಾಂಪಲ್ ಮಾಡಿಸಿದ್ದೇನೆ. ನಮ್ಮ ಕಾರ್ಯಕರ್ತರು ಎಚ್‌ಎಂಟಿ ವಾಚ್ ಬಗ್ಗೆ ಸರಿಯಾಗಿ ಬ್ಯುಸಿನೆಸ್ ಮಾಡಿದರೆ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯುವ ಸಾಧ್ಯತೆ ಇದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ