ಆಪ್ತ ಸಹಾಯಕನೇ ಆಪ್ತರಕ್ಷಕ
ಸತೀಶ್, ಕಳೆದ ಹತ್ತು ವರ್ಷಗಳಿಂದ ಎಚ್‌ಡಿ ಕುಮಾರಸ್ವಾಮಿಯವರ ಆಪ್ತಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ಎಚ್‌ಡಿಕೆ ಬೇಕುಬೇಡಗಳನ್ನು ವಿಚಾರಿಸಿಕೊಳ್ಳುವುದೇ ಆತನ ಕಾಯಕ.
ಅಂದು ರಾತ್ರಿ ದಿಢೀರನೇ ಎಚ್‌ಡಿಕೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಾಗ ಆಳು ಕಾಳು ಯಾರೂ ಇರಲಿಲ್ಲ. ಕಾರಿನ ಡ್ರೈವರ್ ಕೂಡ ತನ್ನ ಕೆಲಸ ಮುಗಿಸಿ ಹೊರಟುಹೋಗಿದ್ದ. ಎಚ್‌ಡಿಕೆ ಜತೆಗೆ ಇದ್ದದ್ದು ಆಪ್ತ ಸಹಾಯಕ ಸತೀಶ್. ಇಂಥ ಆಪತ್ತಿನ ವೇಳೆ ಸಮಯಪ್ರಜ್ಞೆ ಬಹಳ ಮುಖ್ಯ. ಸ್ವಲ್ಪವೂ ವಿಚಲಿತರಾಗದೆ ಸಮಯಪ್ರಜ್ಞೆಯಿಂದ ಸರಿಯಾದ ಸಮಯಕ್ಕೆ ಎಲ್ಲ ವ್ಯವಸ್ಥೆ ಮಾಡಿದ್ದ ಸಹಾಯಕ ನಿಜಕ್ಕೂ ಆಪ್ತ ರಕ್ಷಕ.