ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಲಾರಿಗಳ ನಡುವೆ ಢಿಕ್ಕಿಯಾಗಿ ಭಾರಿ ಧುರ್ಘಟನೆ ಸಂಭವಿಸಿದೆ. ಈ ಘಟನೆಯಿಂದ ಲಾರಿಗಳ ಮುಂಭಾಗ ಭರ್ಜರಿ ನಜ್ಜುಗುಜ್ಜಾಗಿದೆ.
ಭೀಕರ ಅಪಘಾತದ ನಡುವೆಯೂ ಎರಡೂ ಲಾರಿಗಳ ವಾಹನ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿಯ ಲಾರಿಯ ಇಬ್ಬರು ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಜಾಂಬೋಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.
ಎರಡು ಬೃಹತ್ ಲಾರಿಗಳು (Loaded Trucks) ವೇಗವಾಗಿ ಬಂದು ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿವೆ. ಇದರಿಂದ ಇಡೀ ರಸ್ತೆಯ ಭಾಗದಲ್ಲಿ ಲಾರಿಗಳು ಅಡ್ಡಲಾಗಿ ನಿಂತುಕೊಂಡಿದ್ದು, ಯಾವುದೇ ವಾಹನಗಳು ಸಂಚಾರ ಮಾಡಲು ಅವಕಾಶ ಇಲ್ಲದಂತಾಗಿದೆ.
ಘಟನಾ ಸ್ಥಳಕ್ಕೆ ಖಾನಾಪುರ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಉಭಯ ರಾಜ್ಯಗಳ ಮಧ್ಯೆ ಸಂಚಾರ ಸ್ಥಗಿತಗೊಂಡಿದೆ. ಪೊಲೀಸರು ಲಾರಿಗಳ ತೆರವು ಕಾರ್ಯಾಚರಣೆಗೆ ಹರಸಾಹಸ ಪಡುತ್ತಿದ್ದಾರೆ.
ಇನ್ನು ಲಾರಿ ಅಪಘಾತದ ನಂತರ ರಸ್ತೆಯಲ್ಲಿ ಮಂಜು ಕವಿದ ವಾತಾವರಣದಲ್ಲಿ ಸರಣಿ ಅಪಘಾತ ಆಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಲಾರಿಗಳನ್ನು ತೆರವು ಮಾಡಲು ಕ್ರೇನ್ ಮತ್ತು ಜೆಸಿಬಿಗಳ ಅಗತ್ಯವಿದ್ದು, ಅವುಗಳು ಬರಲು ಕೂಡ ಜಾಗ ಇಲ್ಲದಂತಾಗಿದೆ.
ಇನ್ನು ಬೆಳಗಾವಿಯ ಕಣಕುಂಬಿ ಬಳಿ ನಡೆದ ಅಪಘಾತದಿಂದ ರಸ್ಎ ಬ್ಲಾಕ್ ಆಗಿದ್ದು, ಸದ್ಯಕ್ಕೆ ಕರ್ನಾಟಕ-ಗೋವಾ ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿದೆ. ಇದರಿಂದ ಹಲವು ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್‌ಜಾಮ್ ನಿರ್ಮಾಣವಾಗಿದೆ.