ಹಾಸನ: ಕುಸಿದು ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ 25 ವರ್ಷದ ಶ್ವೇತಾ ಹಠಾತ್ ಸಾವು: ಆಘಾತದಲ್ಲಿ ಪೋಷಕರು

Published : Apr 27, 2026, 03:38 PM IST

ಹಾಸನದಲ್ಲಿ 25 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಶ್ವೇತಾ ಹಠಾತ್ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಕುಸಿದು ಬಿದ್ದ ಅವರು, ಮೆದುಳಿನ ತೀವ್ರ ರಕ್ತಸ್ರಾವದಿಂದಾಗಿ ಕೋಮಾಗೆ ಜಾರಿ ಮೃತಪಟ್ಟಿದ್ದಾರೆ. ಅಂಗಾಂಗ ದಾನಕ್ಕೆ ಪೋಷಕರು ಮುಂದಾದರೂ ಅದು ಸಾಧ್ಯವಾಗಲಿಲ್ಲ.

PREV
17
ಸಾಫ್ಟ್‌ವೇರ್ ಇಂಜಿನಿಯರ್ ಕುಸಿದು ಬಿದ್ದು ಸಾವು

ಹಾಸನ: ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಕುಸಿದು ಬಿದ್ದು ಹಠಾತ್ ಸಾವಿಗೀಡಾದಂತಹ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದೆ.

27
ಶ್ವೇತಾ ಮೃತಪಟ್ಟ ಯುವತಿ

25 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಶ್ವೇತಾ ಮೃತಪಟ್ಟ ಯುವತಿ. ಶ್ವೇತಾ ಮನೆಯಲ್ಲೇ ಕುಸಿದು ಬಿದ್ದು ಕೋಮಾಗೆ ಜಾರಿದ್ದರು.

37
ಮ್ಯಾಗ್ನಾ ಸಾಫ್ಟ್ ಕಂಪನಿಯ ಉದ್ಯೋಗಿಯಾಗಿದ್ದ ಶ್ವೇತಾ

ಶ್ವೇತಾ ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯ ಹಾಸನ ಶಾಖೆಯಲ್ಲಿ ಮೂರು ವರ್ಷದಿಂದ‌ ಕೆಲಸ ಮಾಡಿಕೊಂಡಿದ್ದರು. ಏಪ್ರಿಲ್ 25 ರ ಶುಕ್ರವಾರ ಸಂಜೆ ಮನೆಯಲ್ಲಿ ಅವರು ಕುಸಿದು ಬಿದ್ದಿದ್ದರು.

47
ಕುಸಿದು ಬಿದ್ದು ಕೋಮಾಗೆ ಜಾರಿದ ಶ್ವೇತಾ

ಕೂಡಲೇ ಮನೆಯವರು ಅವರನ್ನು ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಆದರೆ ಆಗಲೇ ಶ್ವೇತಾ ಕೋಮಾಗೆ ಜಾರಿದ್ದು, ಸಾವನ್ನಪ್ಪಿದ್ದಾರೆ.

57
ಮೆದುಳಿನಲ್ಲಿ ತೀವ್ರ ರಕ್ತಶ್ರಾವ

ಮೆದುಳಿನಲ್ಲಿ ತೀವ್ರ ರಕ್ತಶ್ರಾವದಿಂದಾಗಿ ಶ್ವೇತಾ ಹಠಾತ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಶ್ವೇತಾ ಮೆದುಳು ನಿಷ್ಕ್ರಿಯ ಗೊಂಡ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ಪೋಷಕರು ಮುಂದಾಗಿದ್ದರು.

67
ಬಂಡಿಲಕ್ಕನಕೊಪ್ಪಲು ಗ್ರಾಮದ ಯುವತಿ

ಆದರೆ ಅಂಗಾಂಗ ದಾನ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ಯುವತಿ ಅಂತ್ಯಕ್ರಿಯೆ ನಡೆದಿದೆ. ಶ್ವೇತಾ ಅವರು ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ಯುವತಿಯಾಗಿದ್ದಾರೆ.

77
ಆಘಾತದಲ್ಲಿ ಪೋಷಕರು

ಬಂಡಿಲಕ್ಕನಕೊಪ್ಪಲು ಗ್ರಾಮದ ಗಂಗಾಧರ್ ಹಾಗೂ ಸರೋಜ ದಂಪತಿ ಪುತ್ರಿಯಾಗಿದ್ದು, ಶ್ವೇತಾ ಅವರ ಹಠಾತ್ ಸಾವಿನಿಂದ ಕುಟುಂಬದವರು ತೀವ್ರ ಆಘಾತಕ್ಕೀಡಾಗಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories