Bagalakote: ಒಂದೇ ಬಾರಿಗೆ ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸು: ರೈತರಿಗೆ ಭಾರೀ ಅಚ್ಚರಿ

First Published Jan 12, 2023, 5:22 PM IST

ಬಾಗಲಕೋಟೆ (ಜ.12): ದೇಶದಲ್ಲಿ ಹಲವು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಐದು ಕಾಲಿನ ಕರು, ಎರಡು ಮುಖ ಇರುವ ಕರುಗಳು ಜನಿಸಿರುವುದು ಹಾಗೂ ಒಂದೇ ಬಾರಿಗೆ ಎರಡು ಕರುಗಳಿಗೆ ಜನ್ಮ ನೀಡಿದ ಹಸುಗಳನ್ನು ನಾವು ನೋಡಿದ್ದೇವೆ. ಆದರೆ, ಈಗ ಬಾಗಲಕೋಟೆ ಜಿಲ್ಲೆಯ ಆಸಂಗಿ ಗ್ರಾಮದಲ್ಲಿ ಹಸುವೊಂದು ಒಂದೇ ಬಾರಿಗೆ 4 ಕರುಗಳಿಗೆ ಜನ್ಮ ನೀಡಿದೆ. ಈ ಘಟನೆ ಸ್ಥಳೀಯ ರೈತರಿಗೆ ಅಚ್ಚರಿಯನ್ನು ಉಂಟುಮಾಡಿದೆ. ಜೊತೆಗೆ, ನಾಲ್ಕು ಕರುಗಳು ಕೂಡ ಆರೋಗ್ಯವಾಗಿದ್ದು, ಹಸುವಿನ ಮಾಲೀಕನಿಗೆ ಸಂತಸವೂ ಉಂಟಾಗಿದೆ.
 

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಮಹಾವೀರ ಶಿರಹಟ್ಟಿ ಎಂಬ ರೈತರಿಗೆ ಸೇರಿದ ಹಸು ಇಂದು ನಾಲ್ಕು ಕರುಗಳಿಗೆ ಜನ್ಮ ನೀಡಿದೆ. ಇದರಲ್ಲಿ ಎರಡು ಹೆಣ್ಣು ಕರು, ಎರಡು ಹೋರಿ ಕರುಗಳಿಗೆ ಜನ್ಮ ನೀಡಿದೆ. 

Bagalakot Cow

ಹೈನುಗಾರಿಕೆ ಉದ್ಯಮ ಮಾಡುತ್ತಿದ್ದ ಮಹಾವೀರ ಅವರ ಕುಟುಂಬಕ್ಕೆ ಒಂದು ಹಸು ಒಂದೇ ಬಾರಿಗೆ ನಾಲ್ಕು ಕರುಗಳಿಗೆ ಜನ್ಮ ನೀಡಿದ ಹೆಚ್ಚಿನ ಸಂತಸವನ್ನು ಉಂಟುಮಾಡಿದೆ. ಇನ್ನು ಈ ಘಟನೆಯಿಂದ ನಮ್ಮ ಕುಟುಂಬಕ್ಕೆ ಅಚ್ಚರಿಯೂ ಉಂಟಾಗಿದೆ ಎಂದು ರೈತ ಕುಟುಂಬಸ್ಥರು ಹೇಳಿಕೊಂಡಿದ್ದಾರೆ. 

ನಾವು ಹಲವು ತಲೆಮಾರುಗಳಿಂದ ಒಕ್ಕಲುತನ ಮಾಡಿಕೊಂಡು ಬಂದಿದ್ದೇವೆ. ನಮ್ಮ ಕುಟುಂಬದಲ್ಲಿ ನಾಲ್ಕು 12 ಹಸುಗಳು, 5 ಎಮ್ಮೆಗಳು ಇದ್ದು ಎಲ್ಲವನ್ನೂ ಸಾಮಾನ್ಯವಾಗಿಯೇ ಮೇವು ಹಾಕಿ ಸಾಕಣೆ ಮಾಡುತ್ತಿದ್ದೇವೆ. ಆದರೆ, ಈಗ ನಮ್ಮ ಹಸುವೊಂದು ಚೊಚ್ಚಲ ಹೆರಿಗೆಯ ವೇಳೆ ನಾಲ್ಕು ಕರುಗಳಿಗೆ ಜನ್ಮ ನೀಡಿರುವುದು ಭಾರಿ ಸಂತಸವಾಗಿದೆ. 

Bagalakot Cow

ಈ ಹಸು ನಾಲ್ಕೂವರೆ ವರ್ಷದ ಈ ಹಸು ನಾಲ್ಕು ಕರುಗಳಿಗೆ ಜನ್ಮ ನೀಡಿರುವುದು ಭಾರಿ ವಿಶೇಷವಾಗಿದೆ. ಎಲ್ಲ ಕರುಗಳು ಆರೋಗ್ಯವಾಗಿದ್ದು, ಯಾವ ಕರುಗಳನ್ನೂ ಮಾರಾಟ ಮಾಡದೇ ಮನೆಯಲ್ಲಿ ಸಾಕಣೆ ಮಾಡುತ್ತೇವೆ ಎಂದು ರೈತ ಮಹಾವೀರ ಮಹಾವೀರ ಹೇಳಿದರು. 

click me!