ಉಪಚುನಾವಣೆ: ಮತದಾನ ಆರಂಭ, ಸಸಿ ನೀಡಿ ಮಹಿಳಾ ಮತದಾರರಿಗೆ ಸ್ವಾಗತ..!
First Published | Apr 17, 2021, 10:54 AM ISTಬೆಂಗಳೂರು(ಏ.17): ಬೆಳಗಾವಿ ಲೋಕಸಭಾ, ಬೀದರ್ ಜಿಲ್ಲೆಯ ಬಸವಕಲ್ಯಾಣ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು(ಶನಿವಾರ) ಮತದಾನ ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 7 ರವರೆಗೆ ನಡೆಯಲಿದೆ. ಮಹಾಮಾರಿ ಕೊರೋನಾನಂತಕದ ಮಧ್ಯೆಯೂ ಮತದಾರರು ಬಹಳ ಉತ್ಸಾಹದಿಂದ ಬಂದು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇವರ ಜೊತೆಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳೂ ಕೂಡ ತಮ್ಮ ಪರಿವಾರ ಸಮೇತ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.