ಸಂತ್ರಸ್ತೆಯ ಪರವಾಗಿ ಹೋರಾಟ ನಡೆಸಿದ ಸಾಹಿತಿ ಮತ್ತು ಹೋರಾಟಗಾರ್ತಿ ರೂಪಾ ಹಾಸನ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ತೀರ್ಪು ಸತ್ಯದ ಗೆಲುವು. ಅನೇಕ ಹೆಣ್ಣುಮಕ್ಕಳು ಪ್ರಜ್ವಲ್‌ನಿಂದ ಶೋಷಣೆಗೆ ಒಳಗಾಗಿದ್ದರು. ಅವರು ಸಹಾಯವಿಲ್ಲದ ಸ್ಥಿತಿಯಲ್ಲಿ ಕಣ್ಣೀರಿಡುತ್ತಿದ್ದಾರೆ, ಶಾಪ ಹಾಕಿದ್ದಾರೆ. ಇಂದಿನ ತೀರ್ಪು ಅವರು ಅನುಭವಿಸಿದ ನೋವಿಗೆ ಸಮಾಧಾನ ತಂದಿದೆ ಎಂದು ರೂಪಾ ಹಾಸನ್ ಹೇಳಿದರು.
ಇಂತಹ ಪ್ರಕರಣಗಳಲ್ಲಿ ನ್ಯಾಯ ವಿಳಂಬವಾಗುವುದು ಸಾಮಾನ್ಯ. ಆದರೆ ಈ ಪ್ರಕರಣದಲ್ಲಿ ಕೇವಲ ಆರು ತಿಂಗಳಲ್ಲಿ ತೀರ್ಪು ಪ್ರಕಟವಾಗಿದೆ ಎಂಬುದು ಬಹಳ ಖುಷಿಯ ಸಂಗತಿ. ನ್ಯಾಯಾಲಯಕ್ಕೆ ಇದಕ್ಕಾಗಿ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಅವರು ಹೇಳಿದರು.
ನಾನು ಸದಾ ನಂಬುತ್ತಿದ್ದೆ. ಸತ್ಯಕ್ಕೆ ಯಾವತ್ತೂ ಸಹಾಯ ಸಿಗುತ್ತೆ. ಎಷ್ಟೇ ಪ್ರಭಾವಶಾಲಿ ವ್ಯಕ್ತಿಯಾಗಿರಲಿ, ನ್ಯಾಯ ಎಲ್ಲರಿಗೂ ಒಂದೇ. ಈ ತೀರ್ಪು ಅದರ ನಿಜವಾದ ಉದಾಹರಣೆ ಎಂದು ರೂಪಾ ಹಾಸನ್ ಅಭಿಪ್ರಾಯಪಟ್ಟರು. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಾಹಿತಿ ರೂಪಾ ಹಾಸನ್ ಹೋರಾಟ ನಡೆಸಿದ್ದರು.