ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತಿರಬಹುದು ಎಂಬ ತೀವ್ರ ಆರೋಪದ ಮೇಲೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಂದ ಪ್ರಮುಖ ಮಾಹಿತಿ ಕೇಳಿದೆ. ಎಸ್‌ಐಟಿಯು 1995 ರಿಂದ 2015 ರವರೆಗೆ, ಎರಡು ಹಂತಗಳಲ್ಲಿ ಅಂದರೆ 1995 ರಿಂದ 2005, 2005 ರಿಂದ 2015 ಎರಡು ದಶಕಗಳ ಅವಧಿಯ ನಾಪತ್ತೆ, ಕೊಲೆ, ಅತ್ಯಾ*ಚಾರ ಸಂಬಂಧಿಸಿದ ಪ್ರಕರಣಗಳ ವಿವರಗಳು ಬೇಕೆಂದು ಸೂಚಿಸಿದೆ. ಪ್ರತಿ ಪೊಲೀಸ್ ಠಾಣೆಗಳಿಗೆ ಪತ್ರ ಬರೆದ ಎಸ್‌ಐಟಿ, ಈ 20 ವರ್ಷದ ದಾಖಲೆಗಳನ್ನು ಎರಡು ವಿಭಿನ್ನ ಪಟ್ಟಿಗಳಲ್ಲಿ ನೀಡುವಂತೆ ಕೇಳಿದೆ. ಈ ಮೂಲಕ, ಕರ್ನಾಟಕದ ಎಲ್ಲ ಠಾಣೆಗಳಿಂದ ಮಾಹಿತಿ ಸಂಗ್ರಹಿಸಿ, ಧರ್ಮಸ್ಥಳದ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಮಾನ್ಯತೆ ಅಥವಾ ಹೋಲಿಕೆಗಳಿರುವುದೇ ಎಂಬುದನ್ನು ಪರಿಶೀಲಿಸುವ ಉದ್ದೇಶದೊಂದಿಗೆ ತನಿಖೆ ಮುಂದುವರಿಸಲಾಗುತ್ತಿದೆ.