ಕನ್ನಡದ ಹಲವು ಮಹತ್ವದ ಕವಿಗಳ ಕೊಡುಗೆ ಮೆಲುಕು ಹಾಕಿದ ಅವರು, 'ನೀವು ವೇದ, ಪುರಾಣ, ರಾಮಾಯಣ, ಮಹಾಭಾರತ ಓದದಿದ್ದರೂ ಪರವಾಗಿಲ್ಲ. ಆದರೆ ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನು ಮಾತ್ರ ತಪ್ಪದೆ ಓದಿ. ಅದರಲ್ಲಿ ಎಲ್ಲದರ ಸಾರವಿದೆ. ಬದುಕಿನ ಸೂಕ್ಷ್ಮಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಸುತ್ತಲೇ ಕಷ್ಟಗಳನ್ನು ಸಹಿಸುವ ಮನಸ್ಥಿತಿಗೆ ನಮ್ಮನ್ನು ಸಜ್ಜುಗೊಳಿಸುತ್ತದೆ' ಎಂದು ತಿಳಿಸಿದರು.
ನನ್ನ ಮನೆಗೆ ಬೆಂಕಿ ಬಿದ್ದ ನಂತರದ 16 ವರ್ಷ ನಾನು ಏನೂ ಬರೆಯಲಿಲ್ಲ. ಸತತವಾಗಿ ದೇಶ ಸುತ್ತಿದ್ದೇನೆ. ಬದುಕಿನ ಕಷ್ಟಗಳ ಅರಿವು ನನಗಿದೆ. ಎದುರಾಗುವ ಎಲ್ಲರೂ ನನಗೆ ಗುರುಸ್ವರೂಪರೇ. ಎಲ್ಲರಿಂದಲೂ ಏನಾದರೂ ಒಂದು ಕಲಿತಿದ್ದೇನೆ ಎಂದು ನೆನಪಿಸಿಕೊಂಡರು.
ಸಹಿತವಾದದ್ದು ಸಾಹಿತ್ಯ. ಎಲ್ಲವನ್ನೂ ಒಳಗೊಳ್ಳಲು, ಎಲ್ಲರನ್ನೂ ಬೆಸೆಯಲು ಸಾಹಿತ್ಯಕ್ಕೆ ಸಾಧ್ಯ ಎಂದರು.