ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಿಂದಿದ್ದಾರೆ ಇನ್ನೊಬ್ಬ ನಿಗೂಢ ವ್ಯಕ್ತಿ; ಅಜ್ಜಯ್ಯನ ಮಠಕ್ಕೆ ಹೋದಾಗಲೆಲ್ಲಾ ಇವರನ್ನ ಭೇಟಿ ಮಾಡ್ತಾರೆ!

Published : Jun 08, 2026, 01:37 PM IST

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಯಶಸ್ಸಿನ ಹಿಂದೆ ನೊಣವಿನಕೆರೆ ಅಜ್ಜಯ್ಯನ ಆಶೀರ್ವಾದದ ಜೊತೆಗೆ ನಿಗೂಢ ವ್ಯಕ್ತಿಯ ಪಾತ್ರವೂ ಇದೆ. ಈ ಶಾಸ್ತ್ರಿಗಳು ಡಿಕೆಶಿ ಸೇರಿದಂತೆ ಹಲವು ಗಣ್ಯರಿಗೆ ರಹಸ್ಯ ಪೂಜೆಯನ್ನೂ ಮಾಡಿಸಿದ್ದಾರೆ. ಯಾರು ಈ ನಿಗೂಢ ವ್ಯಕ್ತಿ ಇಲ್ಲಿದೆ ನೋಡಿ ವಿವರ.

PREV
19

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅತೀವ್ರವಾಗಿ ನಂಬಿರುವ ನೊಣವಿನಕೆರೆ ಅಜ್ಜಯ್ಯನನ್ನು ನಂಬಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ, ತಮಗೆ ಕಷ್ಟ ಅಥವಾ ಯಶಸ್ಸು ಸಿಕ್ಕಾಗ ಈ ಮಠಕ್ಕೆ ಹೋಗಿ ಅಜ್ಜಯ್ಯನ ದರ್ಶನ ಪಡೆದು ಬರುತ್ತಾರೆ. ಇದೀಗ ಮತ್ತೊಂದು ಹೊಸ ವಿಚಾರವೆಂದರೆ ಅಜ್ಜಯ್ಯನಮಠಕ್ಕೆ ಹೋದಾಗಲೆಲ್ಲಾ ಇನ್ನೊಬ್ಬ ನಿಗೂಢ ವ್ಯಕ್ತಿಯ ಬಳಿ ಶಾಸ್ತ್ರವನ್ನು ಕೇಳದೇ ಬರುವುದಿಲ್ಲ. ಯಾರು ಆ ವ್ಯಕ್ತಿ? ಅವರು ಹೇಳುತ್ತಿದ್ದಶಾಸ್ತ್ರ ಎಂಥದ್ದು? ಡಿಕೆಶಿ ಕಷ್ಟಗಳಿಗೆ ಪರಿಹಾರ ಪೂಜೆ ಮಾಡುತ್ತಿದ್ದಾದರೂ ಏನು? ಇಲ್ಲಿದೆ ನೋಡಿ ವಿವರ.

29

ಹೌದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಹಾಗೂ ಉದ್ಯಮ ಕಾರ್ಯಗಳಿಗೆ ಅಜ್ಜಯ್ಯನ ಆಶೀರ್ವಾದ ಎಷ್ಟು ಮುಖ್ಯವಾಗಿದೆಯೋ ಈ ಶಾಸ್ತ್ರಿಗಳ ಮಾತುಗಳೂ ಅಷ್ಟೇ ಮಹತ್ವವನ್ನು ಪಡೆದುಕೊಂಡಿವೆ. ಹೀಗಾಗಿಯೆ ಸಿಎಂ ಆಪ್ತರು, ಡಿ.ಕೆ.ಶಿವಕುಮಾರ್ ಅವರ ಹಿಂದೆ ಇನ್ನೊಬ್ಬ ನಿಗೂಢ ವ್ಯಕ್ತಿ ಇದ್ದಾರೆ ಎಂದು ಹೇಳುತ್ತಿದ್ದರು.

39

ನೊಣವಿನಕೆರೆ ಅಜ್ಜಯ್ಯನ ಪೀಠ ಕ್ಕೆ ಹೋದಾಗಲೆಲ್ಲಾ ಅಜ್ಜಯ್ಯನ ಆಶೀರ್ವಾದದ ಜೊತೆಗೆ ಈ ಶಾಸ್ತ್ರೀಯ ಶಾಸ್ತ್ರವೇ ಮುಖ್ಯವಾಗಿದೆ. ಮೊನ್ನೆ ಬುರುಡೇಘಟ್ಟದಲ್ಲಿ ಇದೇ ಶಾಸ್ತ್ರೀಯ ನೇತೃತ್ವದಲ್ಲಿ ರಹಸ್ಯವಾಗಿ ಮಂಡಳ ಪೂಜೆ ನಡೆದಿತ್ತು. ಸುಮಾರು ಒಂದು ಗಂಟೆಗಳ ಕಾಲ ಮಂಡಳ ಪೂಜೆ ನಡೆದಿದ್ದು, ಇದರಲ್ಲಿ ಕೇವಲ ಸಿಎಂ ಹಾಗೂ ಶಾಸ್ತ್ರಿಗಳಿಬ್ಬರೇ ಮಂಡಳ ಪೂಜೆಯಲ್ಲಿ ಭಾಗಿಯಾಗಿದ್ದರು.

49

ಮುಖ್ಯಮಂತ್ರಿಯ ಭದ್ರತೆ ಹಾಗೂ ರಾಜಕೀಯ ಕಾರ್ಯವೈಖರಿ ನೋಡಿಕೊಳ್ಳಬೇಕಾದ ಸರ್ಕಾರಿ ಅಧಿಕಾರಿಗಳಾದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಿಎಂ ಆಪ್ತ ಶಾಸಕರನ್ನೂ ಕೂಡಹೊರಗಿಟ್ಟು ಮಂಡಳ ಪೂಜೆಯನ್ನು ನೆರವೇರಿಸಲಾಗಿತ್ತು.

59

ಹೀಗೆ, ಡಿ.ಕೆ. ಶಿವಕುಮಾರ್ ಉನ್ನತಿಗಾಗಿ ಪೂಜೆ ನೆರವೇರಿಸಿದ ನಿಗೂಢ ವ್ಯಕ್ತಿ ನಾಗರಾಜ ಶಾಸ್ತ್ರಿ. ಬಹುತೇಕ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಳ್ಳದ ಬುರುಡೆಘಟ್ಟ ನಾಗರಾಜ ಶಾಸ್ತ್ರಿ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಶಾಸ್ತ್ರವನ್ನು ಹೇಳಿದ್ದರು.

69

ನೊಣವಿನಕೆರೆ ಮಠದ ಎಲ್ಲಾ ವಿಧಿ‌ವಿಧಾನಗಳು, ಧರ್ಮನಿಷ್ಠೆಗಳು ನಾಗರಾಜ ಶಾಸ್ತ್ರಿಯ ಮಾರ್ಗದರ್ಶನದಂತೆ ನಡೆಯುತ್ತವೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗು ಪ್ರಮಾಣದ ವಚನ ಸ್ವೀಕರಿಸುವ ಒಂದು ತಿಂಗಳ ಮುಂಚೆಯೇ ದಂಪತಿಸಮೇತವಾಗಿ ಇಲ್ಲಿಗೆ ಬಂದಿದ್ದರು.

79

ರಹಸ್ಯವಾಗಿ ಬಂದು ಬೆಳಗಿನ ಜಾವ ಮಲ್ಲಾಘಟ್ಟ ಕೆರೆಯಲ್ಲಿ ಮಿಂದು ಮಂಡಳ ಪೂಜೆ ಮಾಡಿ ಹೋಗಿದ್ದರು. ಮಂಡಳ ಪೂಜೆ ಬಳಿಕ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಆಗುವ ಯೋಗ ಬಂದಿತ್ತು. ಇನ್ನು ನಾಗರಾಜ ಶಾಸ್ತ್ರಿಗಳು ಕೇವಲ ಡಿ.ಕೆ. ಶಿವಕುಮಾರ್‌ಗೆ ಮಾತ್ರವಲ್ಲದೇ ದೇಶದ ಹಲವು ರಾಜಕೀಯ ಗಣ್ಯರಿಗೆ ಶಾಸ್ತ್ರದ ಸಲಹೆ ನೀಡಿದ್ದಾರೆ.

89

ರಾಜ್ಯದ ಮಾಜಿ ಮುಖ್ಯುಮಂತ್ರಿಗಳಾದ ಧರ್ಮ ಸಿಂಗ್, ಎಸ್.ಎಂ. ಕೃಷ್ಣ, ಎಚ್.ಡಿ. ಕುಮಾರಸ್ವಾಮಿ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ವಿಲಾಸ್ ರಾವ್ ದೇಶ್ ಮುಖ್ ಅವರಿಗೂ ಈ ನಾಗರಾಜ ಶಾಸ್ತ್ರಿಗಳೇ ಧರ್ಮ ಶಾಸ್ತ್ರ ಸಲಹೆಗಾರರು ಆಗಿದ್ದರು. ನೇಪಥ್ಯದಲ್ಲಿದ್ದುಕೊಂಡೇ ಶಾಸ್ತ್ರ ಸಲಹೆ ನೀಡುತ್ತಿರುವ ನಾಗರಾಜ ಶಾಸ್ತ್ರಿ ಅವರ ಬಳಿ ಸಾಲಿಗ್ರಾಮ ಇದೆ.

99

ಆ ಸಾಲಿಗ್ರಾಮದ ಪವಾಡಿಂದಲೇ ಸುಸೂತ್ರವಾಗಿ ಶಾಸ್ತ್ರ ಹೇಳುತ್ತಾರೆ. ಈ ಸಾಲಿಗ್ರಾಮ ನುಡಿದ ಭವಿಷ್ಯವಾಣಿ ಎಂದು ಸುಳ್ಳಾಗೋದಿಲ್ಲ ಎಂಬ ನಂಬಿಕೆ ಭಕ್ತರಲ್ಲಿ ಅಪಾರವಾಗಿದೆ. ಜೊತೆಗೆ, ಬಹುತೇಕ ಭವಿಷ್ಯವಾಣಿಗಳು ಕೂಡ ಇಲ್ಲಿ ನಿಜವಾಗಿವೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories