ರಾಷ್ಟ್ರೀಯ ಪೊಲೀಸ್ ಸಂಸ್ಮರಣಾ ದಿನಾಚರಣೆ ಅಂಗವಾಗಿ ಬುಧವಾರ ಮೈಸೂರು ರಸ್ತೆಯ ನಗರ ಸಶಸ್ತ್ರ ಮೀಸಲು ಪಡೆಯ ಕೇಂದ್ರ ಸ್ಥಾನದ ಹುತಾತ್ಮರ ಉದ್ಯಾನದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕೊರೋನಾ ಸೋಂಕು ಕುರಿತು ಜನರು ಎಚ್ಚರಿಕೆ ವಹಿಸಬೇಕು. ಪ್ರಧಾನಿ ಮೋದಿ ಅವರು ಸೋಂಕಿನ ಜಾಗೃತಿ ಬಗ್ಗೆ ಮನವಿ ಮಾಡಿದ್ದಾರೆ. ಕೊರೋನಾ ನಿಯಂತ್ರಿಸುವಲ್ಲಿ ಪೊಲೀಸರ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ ಎಂದರು.
ಕೆಲ ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಅಪಾರ ಪ್ರಮಾಣ ನಷ್ಟವಾಗಿದೆ. ಈಗಾಗಲೇ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಜನ ಜೀವನಕ್ಕೆ ತೊಂದರೆಯಾಗದಂತೆ ಜಾಗ್ರತೆ ವಹಿಸಲಾಗಿದೆ. ಅಲ್ಲದೆ ನೆರೆಯಿಂದ ಉಂಟಾಗಿರುವ ನಷ್ಟದ ಕುರಿತು ಸಹ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ ಮುಖ್ಯಮಂತ್ರಿಗಳು ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಗರ ಆಯುಕ್ತ ಕಮಲ್ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಮನೋಹರ್ ಎಸ್.ಗಂಗಾಚಾರಿ-ಪಿಎಸ್‌ಐ(ಬೆಳಗಾವಿ), ಬಿ.ಸಿ.ಚೆನ್ನಕೇಶವ-ಎಆರ್‌ಎಸ್‌ಐ (ಕೊಡಗು), ಸಿ.ಮಲ್ಲೇಶಯ್ಯ-ಎಎಸ್‌ಐ(ರಾಮನಗರ), ಚಂದ್ರಹಾಸ-ಎಎಸ್‌ಐ(ಮಂಗಳೂರು), ಯಲ್ಲಪ್ಪ ರಾಮಪ್ಪ ತಳವಾರ್-ಎಎಸ್‌ಐ(ಬೆಳಗಾವಿ), ಎಂ.ಶ್ರೀನಿವಾಸ-ಎಎಸ್‌ಐ(ಮೈಸೂರು), ಕೆ.ಮಂಜುನಾಥ್-ಎಎಸ್‌ಐ(ಕೋಲಾರ), ಕೆ.ಆರ್.ಕುಮಾರ್-ಮುಖ್ಯಪೇದೆ(ಬೆಂಗಳೂರು), ವೈ,ಧನಂಜಯ-ಮುಖ್ಯಪೇದೆ(ಬೆಂಗಳೂರು), ಮರಿಸ್ವಾಮಿ-ಮುಖ್ಯಪೇದೆ(ರಾಯಚೂರು), ಬಿ.ಎನ್. ವೆಂಕಟೇಗೌಡ-ಮುಖ್ಯಪೇದೆ(ಹಾಸನ), ಕೇಶವ-ಮುಖ್ಯಪೇದೆ(ಮೈಸೂರು), ಚೆನ್ನಗಂಗಯ್ಯ-ಮುಖ್ಯಪೇದೆ(ಬೆಂಗಳೂರು), ರಾಯನಾಯ್‌್ಕ ದುಂಡಪ್ಪ ನಾಯ್‌್ಕ-ಪೇದೆ (ಬೆಳಗಾವಿ), ಟಿ.ಪಿ.ಮೋಹನ್-ಪೇದೆ(ಹಾಸನ), ಕರಿಯಪ್ಪ ಎಸ್.ಕರಿಗರ್-ಪೇದೆ (ಬಾಗಲಕೋಟೆ), ಎಸ್.ಎನ್.ಕೋಲಿ-ಪೇದೆ(ಬೆಳಗಾವಿ).