ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ನಿಗಮದ ವಿವಿಧ ವಿಭಾಗಗಳ ಮುಖಸ್ಥರು ಹಾಗೂ 17 ವಿಭಾಗೀಯ ನಿಯಂತ್ರಣಾಧಿಕಾರಿಗಳ ಜೊತೆ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸಾರಿಗೆ ನಿಗಮಗಳ ಕಷ್ಟಕಾಲದಲ್ಲಿ ಕೈ ಹಿಡಿದು ಕಾಪಾಡಿದ್ದಾರೆ. ಸಿಬ್ಬಂದಿ ವೇತನಕ್ಕಾಗಿ ಸಾವಿರಾರು ಕೋಟಿ ರು. ನೀಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ನಮ್ಮ ದುಡಿಮೆಯಲ್ಲೇ ನಿಗಮ ನಡೆಸಿಕೊಂಡು ಹೋಗಬೇಕಿದೆ ಎಂದು ತಿಳಿಸಿದ್ದಾರೆ.
undefined
ಲಾಕ್ ಡೌನ್ ಪೂರ್ವದಲ್ಲಿ ನಿಗಮ ಪ್ರತಿ ದಿನ 8,200 ಬಸ್ ಕಾರ್ಯಾಚರಣೆ ಮಾಡುತ್ತಿದ್ದು, 30 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಲಾಕ್‌ಡೌನ್ ಸಡಿಲಿಕೆ ಬಳಿಕ 5,100 ಬಸ್ ಕಾರ್ಯಾಚರಿಸುತ್ತಿದ್ದರೂ ಕೇವಲ 10 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಕೆಲವೊಂದು ಕಠಿಣ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ನೇಮಕಾತಿಗಳನ್ನು ತಾತ್ಕಾಲಿಕವಾಗಿ ತಡೆಯುವುದು, ಒಪ್ಪಂದದ ಮೇರೆಗೆ ಅಧಿಕ ಬಸ್‌ಗಳನ್ನು ನೀಡುವುದು ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗುವುದು ಎಂದರು.
undefined
ನಿಗಮದ ಆಂತರಿಕ ನಿಯತ ಕಾಲಿಕೆ ‘ಸಾರಿಗೆ ಸಂಪದ’ವನ್ನು ಅಧ್ಯಕ್ಷರು ಬಿಡುಗಡೆಗೊಳಿಸಿದ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ
undefined
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ, ಭದ್ರತೆ ಮಸತ್ತು ಜಾಗೃತ ವಿಭಾಗದ ನಿರ್ದೇಶಕ ಡಾ.ರಾಮ್ ನಿವಾಸ್ ಸೆಪೆಟ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
undefined