ಕೆಸರು ಗದ್ದೆಯಲ್ಲಿ ಓಡಿದ ಕಂಬಳ ವೀರ ವಿಧಾನಸೌಧದಲ್ಲಿ ಮಿಂಚಿಂಗ್

First Published Feb 17, 2020, 6:25 PM IST

ಜಮೈಕಾದ  ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡಿ ಅಚ್ಚರಿ ಮೂಡಿಸಿರುವ ಮೂಡುಬಿದಿರೆ ಸಮೀಪದ ಮೀಜಾರಿನ ಕಂಬಳ ಓಟಗಾರ ಶ್ರೀನಿವಾಸ ಗೌಡ ದಿನ ಕಳೆದ ಬೆಳಕಾಗುವಷ್ಟರಲ್ಲಿ ಹೀರೋ ಆಗಿದ್ದಾರೆ. ಮಿಂಚಿನ ಓಟದಿಂದಲೇ ವಿಶ್ವದ ಗಮನವನ್ನು ತನ್ನತ್ತ ಸೆಳೆದಿರುವ ಕರುನಾಡಿನ ಬೋಲ್ಟ್,  ಸಾಧನೆಗೆ ಕೇಂದ್ರ, ರಾಜ್ಯ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂದು [ಸೋಮವಾರ] ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಶ್ರೀನಿವಾಸ ಗೌಡ ಅವರಿಗೆ ಸನ್ಮಾನ ಮಾಡಿದರು.

ಕಂಬಳದಲ್ಲಿ ದಾಖಲೆಯ ಓಟದ ಮೂಲಕವೇ ರಾಷ್ಟ್ರಮಟ್ಟದಲ್ಲಿ ಹೆಸರಾದ ಶ್ರೀನಿವಾಸ್ ಗೌಡ ಅವರನ್ನು ಖುದ್ದು ಸಿಎಂ ಬಿಎಸ್ ಯಡಿಯೂರಪ್ಪ ವಿಧಾನಸೌಧಕ್ಕೆ ಕರೆಯಿಸಿಕೊಂಡು ಬೆನ್ನುತಟ್ಟಿದರು.
undefined
ಕಂಬಳದ ಉಸೇನ್​ ಬೋಲ್ಟ್​ ಎಂದೇ ಖ್ಯಾತಿ ಪಡೆದಿರುವ ಶ್ರೀನಿವಾಸಗೌಡರನ್ನು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಸನ್ಮಾನಿಸಿದರು.
undefined
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮೈಸೂರು ಪೇಟ ತೊಡಿಸಿ ಪ್ರಶಸ್ತಿ ಪತ್ರ ಹಾಗೂ ಫಲಕ ನೀಡಿ ಕಂಬಳ ವೀರ ಶ್ರೀನಿವಾಸ್​ಗೌಡಗೆ ಸಿಎಂ ಸನ್ಮಾನ ಮಾಡಿದ್ರು. ಈ ವೇಳೆ ಸಚಿವರಾದ ಸಿ.ಟಿ ರವಿ, ಶಿವರಾಂ ಹೆಬ್ಬಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
undefined
ಕಂಬಳ ವೀರ ಶ್ರೀನಿವಾಸ್​ ಗೌಡಗೆ ಸನ್ಮಾನ ಮಾಡಿದ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ, ಕಾರ್ಮಿಕ ಇಲಾಖೆ ವತಿಯಿಂದ 3 ರೂ. ಲಕ್ಷದ ಚೆಕ್ ವಿತರಿಸಿದರು.
undefined
ಸನ್ಮಾನ ಮಾಡಿದ ಬಳಿಕ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಶ್ರೀನಿವಾಸ ಗೌಡ ಕಂಬಳ ಓಟದ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಸರ್ಕಾರದಿಂದ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ದಾಖಲೆ ಮೂಲಕ ತಮಗೆ ತಾವೇ ಸರಿಸಾಟಿ ಎಂಬುದನ್ನ ತೋರಿಸಿದ್ದಾರೆ. ತಮ್ಮ ಓಟದ ಮೂಲಕ ದೇಶದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಕೇಂದ್ರದ ಕ್ರೀಡಾ ಸಚಿವರು ಕೂಡ ಇವರ ಸಾಧನೆಯನ್ನ ಗುರುತಿಸಿದ್ದಾರೆ ಅಂತಾ ಸಿಎಂ ಹೇಳಿದ್ರು.
undefined
ಶ್ರೀನಿವಾಸ್ ಗೌಡ ಒಬ್ಬ ಕಟ್ಟಡ ನಿರ್ಮಾಣ ಕಾರ್ಮಿಕ. ಹೀಗಾಗಿ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಗಾಗಿ ಅವರ ಮನೆಗೆ ನಿನ್ನೆ ಕಾರ್ಮಿಕ ಇಲಾಖೆ ಅಧಿಕಾರಿಗಳು ತೆರಳಿ ದಾಖಲೆಗಳನ್ನು ಪಡೆದುಕೊಂಡರು. ಇಲಾಖೆಯಿಂದ ಸಿಗಬೇಕಾದ ಸವಲತ್ತಿನ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
undefined
ಫೆ.1ರಂದು ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ತುಳುನಾಡಿನ ಸಾಂಪ್ರದಾಯಿಕ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ ಅವರು 142.50 ಮೀಟರ್‌ ಕರೆ(ಕಂಬಳದ ಕೋಣಗಳ ಟ್ರ್ಯಾಕ್‌)ಯನ್ನು ಕೇವಲ 13.62 ಸೆಕೆಂಡಲ್ಲಿ ಕ್ರಮಿಸಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದ್ದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಮಾತ್ರವಲ್ಲದೆ ಇದೀಗ ಶ್ರೀನಿವಾಸ ಗೌಡ ಅವರನ್ನು ಉಸೇನ್‌ ಬೋಲ್ಟ್‌ ಜೊತೆ ಹೋಲಿಸಲಾಗುತ್ತಿದೆ.
undefined
ಶ್ರೀನಿವಾಸ ಗೌಡ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಂದಿಗೆ ತಾಳೆ ಹಾಕಿ ನೋಡಿದರೆ ಅದು 9.55 ಸೆಕೆಂಡ್‌ ಆಗುತ್ತದೆ. ಇಲ್ಲಾ ಬೋಲ್ಟ್‌ ವಿಶ್ವದಾಖಲೆ ಗಣನೆಗೆ ತೆಗೆದುಕೊಂಡಲ್ಲಿ ಅವರಿಗೆ 142.50 ಮೀ. ಕ್ರಮಿಸುವುದಕ್ಕೆ ಬೇಕಾಗಬಲ್ಲ ಸಮಯ 13.65 ಸೆಕೆಂಡ್‌. ಹೇಗೆ ತಾಳೆ ಹಾಕಿದರೂ ವಿಶ್ವನಾಥ್‌ ಗೌಡ ಅವರು ಉಸೇನ್‌ ಬೋಲ್ಟ್‌ಗಿಂತ 0.03 ಸೆಕೆಂಡ್‌ಗಳಷ್ಟುಮುಂದಿದ್ದಾರೆ.
undefined
ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಅವರೇ ಟ್ವೀಟ್ ಮಾಡಿ, 'ಶ್ರೀನಿವಾಸ್ ಗೌಡ ಅವರಿಗೆ ಸೂಕ್ತ ತರಬೇತಿ ನೀಡಿ, ಅವರನ್ನು ಓಟದ ಪರೀಕ್ಷೆಗೆ ಒಳಪಡಿಸಿ' ಎಂದು ಸೂಚನೆ ನೀಡಿದ್ದರು. ಕೇಂದ್ರ ಮಾಜಿ ಸಚಿವ ಶಶಿ ತರೂರ್ ಸಹ ಶ್ರೀನಿವಾಸ್ ಗೌಡ ಅವರ ಬಗ್ಗೆ ಟ್ವೀಟ್ ಮಾಡಿ ಅವರನ್ನು ಉಸೇನ್ ಬೋಲ್ಟ್‌ ಗೆ ಹೋಲಿಸಿದ್ದರು. ಆನಂದ್ ಮಹೀಂದ್ರಾ, ಶ್ರೀನಿವಾಸ್ ಗೌಡ ಅವರ ಪ್ರತಿಭೆಯನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದರು.
undefined
ಕಂಬಳದಲ್ಲಿ 145 ಮೀಟರ್ ದೂರವನ್ನು ಕೇವಲ 13.45 ಸೆಕೆಂಡ್‌ ನಲ್ಲಿ ಓಡಿ ಕರ್ನಾಟಕದ ಉಸೇನ್ ಬೋಲ್ಟ್ ಎನಿಸಿಕೊಂಡಿರುವ ಶ್ರೀನಿವಾಸ್ ಗೌಡ ಅವರು ರನ್ನಿಂಗ್ ಟ್ರ್ಯಾಕ್‌ನಲ್ಲಿ ಓಡಲು ನಿರಾಕರಿಸಿದ್ದಾರೆ.
undefined
ಶ್ರೀನಿವಾಸ್ ಗೌಡ ಅವರು ತಾವು ರನ್ನಿಂಗ್ ಟ್ರ್ಯಾಕ್‌ನಲ್ಲಿ ಓಡುವುದಿಲ್ಲ, ಬದಲಿಗೆ ಕಂಬಳದಲ್ಲಿಯೇ ಓಡುತ್ತೇನೆ' ಎಂದು ಹೇಳಿದ್ದಾರೆ. 'ನಾನು ರನ್ನಿಂಗ್ ಟ್ರ್ಯಾಕ್ ಓಟಗಾರನಲ್ಲ, ಅದಕ್ಕೆ ಬೇಕಾಗಿರುವ ಕೌಶಲ್ಯ ಬೇರೆ ಕಂಬಳಕ್ಕೆ ಬೇಕಾಗಿರುವ ಕೌಶಲ್ಯ ಬೇರೆ' ಎಂದು ಹೇಳಿದ್ದಾರೆ.
undefined
click me!