ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗದಳದ ಆಶ್ರಯದಲ್ಲಿ ಚಿತ್ರದುರ್ಗ ನಗರದಲ್ಲಿ ನಡೆದ 18 ದಿನಗಳ ಕಾಲದ ಹಿಂದೂ ಮಹಾಗಣಪತಿ ಉತ್ಸವದಲ್ಲಿ ಸಂಗ್ರಹವಾದ ಕಾಣಿಕೆ ಪೆಟ್ಟಿಗೆಯ ಹಣವನ್ನು ಎಣಿಕೆ ಮಾಡಲಾಗಿದೆ.
24
ದೇಣಿಗೆ ಎಣಿಕೆ
ಹಿಂದೂ ಮಹಾಗಣಪತಿ ಸಮಿತಿಯಿಂದ ನಡೆದ ಈ ಎಣಿಕೆಯಲ್ಲಿ ಕಾಣಿಕೆ ಪೆಟ್ಟಿಗೆಯಲ್ಲಿ ಒಟ್ಟು 15 ಲಕ್ಷ ರೂಪಾಯಿ ಸಂಗ್ರಹವಾಗಿದ್ದು, ಇದರಲ್ಲಿ 12.50 ಲಕ್ಷ ರೂ. ನೋಟುಗಳ ರೂಪದಲ್ಲಿದ್ದರೆ, 2.50 ಲಕ್ಷ ರೂ. ಚಿಲ್ಲರೆ ಹಣ ಸಂಗ್ರಹವಾಗಿದೆ.
34
ಪೆಟ್ಟಿಗೆ ಹಣ ಹರಾಜು
ಪ್ರತಿ ವರ್ಷದಂತೆ ಈ ಬಾರಿಯೂ ಕಾಣಿಕೆ ಪೆಟ್ಟಿಗೆಯ ಹಣವನ್ನು ಸಾಂಪ್ರದಾಯಿಕ ಹರಾಜಿನ ಮೂಲಕ ಭಕ್ತರು ಕೂಗಿ ಪಡೆಯಲಿದ್ದಾರೆ. 18 ದಿನಗಳ ಕಾಲ ನಡೆದ ಮಹಾಗಣಪತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದವು.
ಸೆಪ್ಟೆಂಬರ್ 13ರಂದು ನಡೆದ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು.ಈ ಉತ್ಸವದ ಯಶಸ್ವಿಯಾದ ಆಯೋಜನೆಗೆ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳ ಸಹಕಾರವೇ ಕಾರಣ ಎಂದು ಆಯೋಜಕರು ತಿಳಿಸಿದ್ದಾರೆ.