ಪ್ರಯಾಣಿಕರಿಗೆ ಗುಡ್‌ನ್ಯೂಸ್: ದೂರದ ಊರುಗಳಿಗೆ ಪ್ರಯಾಣಿಸಲು ಬಿಎಂಟಿಸಿ ವಿಸ್ತಾರ ಪಾಸ್; ಪಾಸಿನ ಬೆಲೆ ಎಷ್ಟು? ಇಲ್ಲಿದೆ ಡಿಟೇಲ್ಸ್

Kannadaprabha News   | Kannada Prabha
Published : Jun 23, 2026, 07:03 AM IST

BMTC Vistar Pass: ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಬಿಎಂಟಿಸಿ ವಿಶೇಷ ‘ವಿಸ್ತಾರ ಪಾಸ್’ ಪರಿಚಯಿಸಿದೆ. ಬೆಂಗಳೂರಿನಿಂದ ಎಷ್ಟು ದೂರ ವ್ಯಾಪ್ತಿಯವರೆಗೆ ಪ್ರಯಾಣಿಸಬಹುದು, ಟಿಕೆಟ್ ಬೆಲೆ ಎಷ್ಟು ಎಲ್ಲ ವಿವರಗಳಿಗೆ ಪೂರ್ತಿ ಓದಿ

PREV
13
ದೂರದ ಊರುಗಳಿಗೆ ಬಿಎಂಟಿಸಿ ವಿಸ್ತಾರ ಪಾಸ್

ಬಿಎಂಟಿಸಿ ಸಾಮಾನ್ಯ ಮಾಸಿಕ ಪಾಸಿನ ದರದಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ಆದರೆ, ಬಿಎಂಟಿಸಿಯ ದೂರದ ಮಾರ್ಗಗಳ ಪ್ರಯಾಣಿಕರ ಅನುಕೂಲಕ್ಕಾಗಿ ಸಾಮಾನ್ಯ ‘ವಿಸ್ತಾರ ಪಾಸು’ಗಳನ್ನು ಪರಿಚಯಿಸಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

23
ಬಿಎಂಟಿಸಿ ವಿಸ್ತಾರ ಪಾಸ್ ವ್ಯಾಪ್ತಿ ಎಷ್ಟು?

ಬಿಎಂಟಿಸಿ ಸಂಸ್ಥೆಯ ಕಾರ್ಯಾಚರಣೆ ವ್ಯಾಪ್ತಿಯನ್ನು 65ರಿಂದ 70 ಕಿಮೀವರೆಗೆ ವಿಸ್ತರಿಸಲಾಗಿದೆ. ಅದರಿಂದ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ, ಮಾಲೂರು ಸೇರಿದಂತೆ ಬೆಂಗಳೂರು ನಗರ ಸುತ್ತಮುತ್ತಲಿನ ಪ್ರಮುಖ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಬಿಎಂಟಿಸಿ ಬಸ್‌ ಸೇವೆ ನೀಡುತ್ತಿದೆ. ಹೊಸ ಕಾರ್ಯಾಚರಣೆ ವ್ಯಾಪ್ತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನಗರದ ಕೇಂದ್ರಭಾಗದಿಂದ 40 ಕಿಮೀ ವರೆಗಿನ ಪ್ರದೇಶವನ್ನು ಸೀಮಿತ ವ್ಯಾಪ್ತಿಯಲ್ಲಿ ಅದರಾಚೆಗಿನ ಪ್ರದೇಶವನ್ನು ‘ವಿಸ್ತಾರ ವ್ಯಾಪ್ತಿ’ ಎಂದು ವರ್ಗೀಕರಿಸಲಾಗಿದೆ.

33
ವಿಸ್ತಾರ ಪಾಸ್ ಬೆಲೆ ಎಷ್ಟು?

ವಿಸ್ತಾರ ವ್ಯಾಪ್ತಿಯ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಜೂ. 2ರಿಂದ ಸಾಮಾನ್ಯ ವಿಸ್ತಾರ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್‌ಗಳನ್ನು ಪರಿಚಯಿಸಲಾಗಿದೆ. ಪ್ರಸ್ತುತ 1819 ಮಾರ್ಗಗಳಲ್ಲಿ 6295 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಅವುಗಳಲ್ಲಿ 96 ಮಾರ್ಗಗಳ 216 ಅನುಸೂಚಿಗಳು ವಿಸ್ತಾರ ವ್ಯಾಪ್ತಿಯಲ್ಲಿ ಸೇವೆ ನೀಡುತ್ತಿವೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. 

ಈ ಸಾಮಾನ್ಯ ವಿಸ್ತಾರ ದೈನಿಕ ಪಾಸುಗಳ ಬೆಲೆ 120 ರು., ಸಾಮಾನ್ಯ ವಿಸ್ತಾರ ಮಾಸಿಕ ಪಾಸು ದರ 550 ರು., ಸಾಮಾನ್ಯ ಮಾಸಿಕ ಪಾಸು 1200 ಹಾಗೂ ಸಾಮಾನ್ಯ ವಿಸ್ತಾರ ಮಾಸಿಕ ಪಾಸು 1500 ರು. ನಿಗದಿ ಮಾಡಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories