ದೇಶದ ಅತಿ ದೊಡ್ಡ ಬೆಂಗಳೂರಿನ ಕೋವಿಡ್‌ ಕೇರ್‌ ಸೆಂಟರ್‌ ಬಂದ್‌: ಅಧಿಕೃತ ಘೋಷಣೆ

First Published | Sep 15, 2020, 4:47 PM IST

ದೇಶದ ಅತಿ ದೊಡ್ಡ ಕೋವಿಡ್‌ ಕೇರ್‌ ಕೇಂದ್ರ ಎಂಬ ಹೆಗ್ಗಳಿಕೆ ಪಡೆದಿದ್ದ ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ) ದಲ್ಲಿ ತೆರೆಯಲಾಗಿದ್ದ ಕೇಂದ್ರವನ್ನು ಮುಚ್ಚಲಾಗಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಅಧಿಕೃತ ಹೇಳಿಕೆ ಕೊಟ್ಟಿದ್ದಾರೆ.  ಈ ಮೂಲಕ ಏಷ್ಯಾದಲ್ಲೇ ಅತಿ ದೊಡ್ಡದೆಂದು ಬಿಂಬಿಸಲಾಗಿದ್ದ ಕೋವಿಡ್ ಆರೈಕೆ ಕೇಂದ್ರ ಆರಂಭವಾದ  ತಿಂಗಳಲ್ಲೇ ಮುಚ್ಚಲ್ಪಟ್ಟಿದ್ದು, ಸಾರ್ವಜನಿಕರ ನೂರಾರು ಕೋಟಿ ರೂಪಾಯಿ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

BIEC ಕೋವಿಡ್ ಕೇರ್ ಸೆಂಟರ್ ಕ್ಲೋಸ್ ಮಾಡಲಾಗಿದೆ ಎಂದು ಸ್ವತಃ ಡಿಸಿಎಂ ಅಶ್ವತ್ಥ ನಾರಾಯನ ಇಂದು (ಮಂಳವಾರ) ಅಧಿಕೃತವಾಗಿ ತಿಳಿಸಿದ್ದಾರೆ.
undefined
ಕೋವಿಡ್ ರೋಗಿಗಳ ಆರೈಕೆ ಸಂಬಂಧ ಹೆಚ್ಚ ಹಾಸಿಗೆಗಳ ಅವಶ್ಯಕತೆ ಇತ್ತು. ಹಾಗಾಗಿ ಬಿಐಇಸಿ ಕೋವಿಡ್ ಸೆಂಟರ್ ಮಾಡಲಾಗಿತ್ತು.ಈಗ ಹೆಚ್ಚು ಜನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವಶ್ಯಕತೆ ಇಲ್ಲದ ಕಾರಣ ಬಿಐಇಸಿ ಕೋವಿಡ್ ಕೇರ್ ಸೆಂಟರ್ ಮುಚ್ಚಲಾಗಿದೆ ಎಂದು ಅಶ್ವತ್ಥ್ ನಾರಾಯಣ ಸ್ಪಷ್ಟಪಡಿಸಿದರು.
undefined

Latest Videos


ಹತ್ತಾರು ಕೋಟಿ ಖರ್ಚು ಮಾಡಿ ಮಾಡಿದ್ದು ಇದೀಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
undefined
ಬಿಐಇಸಿ ಕೋವಿಡ್‌ ಕೇಂದ್ರಕ್ಕಾಗಿ ಬಿಬಿಎಂಪಿಯು ಹತ್ತು ಸಾವಿರ ಹೊಸ ಹಾಸಿಗೆ, ಮಂಚಗಳನ್ನು ಖರೀದಿಸಿದೆ. ಇದಕ್ಕಾಗಿ 11 ಕೋಟಿ ರೂ. ವೆಚ್ಚ ಮಾಡಿತ್ತು
undefined
ಕೋವಿಡ್‌ ಕೇಂದ್ರಕ್ಕಾಗಿ ಬಿಬಿಎಂಪಿಯಿಂದ ಖರೀದಿಸಲಾಗಿದ್ದ ಸ್ಟೀಲ್‌ ಮಂಚ, ಹಾಸಿಗೆ ದಿಂಬು, ಡಸ್ಟ್‌ ಬಿನ್ಸ್‌, ಬಕೆಟ್‌, ಮಗ್‌ಗಳು, ವಾಟರ್‌ ಡಿಸ್ಪೆನ್ಸರ್ಸ್ ಮತ್ತು ಇನ್ನಿತರೆ ಪೀಠೋಪಕರಣಗಳನ್ನು ಸರಕಾರಿ ಸ್ವಾಮ್ಯದ ಹಾಸ್ಟೆಲ್‌, ಆಸ್ಪತ್ರೆಗಳಿಗೆ ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ.
undefined
ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ ಹಾಸ್ಟೆಲ್‌ಗೆ 1000, ಸಮಾಜ ಕಲ್ಯಾಣ ಇಲಾಖೆ ಮತ್ತು ಬುಡಕಟ್ಟು ಕಲ್ಯಾಣ ಹಾಸ್ಟೆಲ್‌ಗಳಿಗೆ 2500, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ 1000, ಜಿಕೆವಿಕೆಗೆ 1000 ಪೀಠೋಪಕರಣಗಳನ್ನು ಹಸ್ತಾಂತರಿಸಲು ಆದೇಶಿಸಲಾಗಿದೆ.
undefined
ಇನ್ನುಳಿದ ಪೀಠೋಪಕರಣಗಳನ್ನು ಕೋರಿಕೆ ಸಲ್ಲಿಸುವ ಹಾಸ್ಟೆಲ್‌ ಮತ್ತು ಆಸ್ಪತ್ರೆಗಳಿಗೆ ಒದಗಿಸಲಾಗುತ್ತದೆ.
undefined
click me!