ಬೆಳಗಿನ ಜಾವ ಸುರಿದ ಧಾರಾಕಾರ ಮಳೆಯಿಂದ ಬೆಂಗಳೂರಿನ ಜನಜೀವನ, ಕೆಆರ್ ಮಾರ್ಕೆಟ್ ವ್ಯಾಪಾರ ಅಸ್ತವ್ಯಸ್ತಗೊಂಡಿತು. ಇನ್ನು ಬೆಳಗಿನ ಜಾವದಲ್ಲಿ ಮಳೆಯಿಂದ ಮುಸುಕಿನ ವಾತಾವರಣದಲ್ಲಿ ಖಾಸಗಿ ಬಸ್‌ಗೆ ಬಿಎಂಟಿಸಿ ಇವಿ ಬಸ್ ಟಚ್ ಆದ ಘಟನೆಯೂ ನಡೆದಿದೆ.
ಬೆಂಗಳೂರಿನಲ್ಲಿ ಒಂದು ಕಡೆ ಬೆಳಗಿನ ಜಾವದಲ್ಲೆ ಮಳೆರಾಯನ ಅರ್ಭಟ. ಈ ನಡುವೆ ರಸ್ತೆಗಳಿದಿದ್ದ ಎರಡು ಬಸ್ ಗಳ ನಡುವೆ ಘರ್ಷಣೆ ಸಂಭವಿಸಿದ ಘಟನೆ ಕೆಆರ್ ಸರ್ಕಲ್ ಬಳಿ ನಡೆದಿದೆ.
23
ಬೆಳ್ಳಬೆಳಗ್ಗೆ ಮಳೆ, ಖಾಸಗಿ ಬಸ್‌ಗೆ ಡಿಕ್ಕಿಯಾದ ಇವಿಎಸ್ ಬಸ್
ಮಳೆಯ ನಡುವೆಯೂ ರಸ್ತೆಗಿಳಿದಿದ್ದ ಮಸುಕಿನ ವಾತಾವರಣದಿಂದಲೋ ಏನೋ ಕೆಆರ್ ಸರ್ಕಲ್ ಬಳಿ ಖಾಸಗಿ ಬಸ್‌ಗೆ ಬಿಎಂಟಿಸಿ ಇವಿ ಬಸ್ ಟಚ್ ಆದ ಘಟನೆ ನಡೆದಿದೆ. ಅದೃಷ್ಟವಶಾತ್ ಬೆಳಗಿನ ಜಾವ ಆಗಿದ್ದರಿಂದ ಅದರಲ್ಲೂ ಮಳೆಯಿಂದಾಗಿ ಪ್ರಯಾಣಿಕರ ಇರಲಿಲ್ಲ ಎನ್ನಲಾಗಿದೆ. . ಇವಿಎಸ್ ಬಸ್ ಹಿಂದೆ ಬರುತ್ತಿದ್ದ ಖಾಸಗಿ ಬಸ್. ಈ ವೇಳೆ ಖಾಸಗಿ ಬಸ್‌ನ ಮುಂಭಾಗಕ್ಕೆ ಟಚ್ ಆಗಿದೆ.
33
ಮಳೆಯಿಂದಾಗಿ ಕೆಆರ್ ಮಾರ್ಕೆಟ್ ಅಸ್ತವ್ಯವಸ್ತ ಪರದಾಡಿದ ವ್ಯಾಪಾರಿಗಳು
ಬೆಳಗಿನ ಜಾವ ಸುರಿದ ಧಾರಾಕಾರ ಮಳೆಯಿಂದ ಕೆಆರ್ ಮಾರ್ಕೆಟ್‌ನಲ್ಲಿ ವ್ಯಾಪಾರ ಅಸ್ತವ್ಯಸ್ತಗೊಂಡು ವ್ಯಾಪಾರಿಗಳು ಪರದಾಡುವಂತಾಯಿತು. ಮಳೆಯಿಂದ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವ್ಯಾಪಾರಿಗಳು ನಿಂತುಕೊಂಡೇ ವ್ಯವಹರಿಸಿದರೆ, ಹೂಗಳು ಮಳೆಗೆ ನೆನೆದು ತೊಪ್ಪೆಯಾದವು. ಬೆಳಗ್ಗೆಯೇ ಭಾರೀ ಮಳೆ ಸುರಿದಿದ್ದರಿಂದ ಕೊಳ್ಳುವವರಿಲ್ಲದೆ ಮಾರ್ಕೆಟ್ ಬಿಕೋ ಎನ್ನುತ್ತಿದೆ. ಸುರಿಯುವ ಮಳೆಯಲ್ಲೇ ವ್ಯಾಪಾರಿಗಳು ಹೂಗಳನ್ನು ಹಿಡಿದು ನಿಂತಿದ್ದು ಕಂಡು ಬಂತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ