ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಇದೀಗ ಪೀಕ್ ಹವರ್‌ನಲ್ಲಿ ಯೆಲ್ಲೋ ಲೈನ್‌ನಲ್ಲಿ ಕಾಯುವಿಕೆ ಅವಧಿ ಕಡಿತಗೊಂಡಿದೆ.
ನಮ್ಮ ಮೆಟ್ರೋ ಬೆಂಗಳೂರಿನ ಪ್ರಮುಖ ಸಾರಿಗೆ ಸಂಪರ್ಕವಾಗಿದೆ. ಪ್ರತಿ ದಿನ ಮೆಟ್ರೋ ಆಶ್ರಯಿಸುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಪಿಂಕ್, ಗ್ರೀನ್ ಸೇರಿದಂತೆ ಬಹುತೇಕ ಮೆಟ್ರೋ ಲೈನ್‌ಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಅತೀ ಕಡಿಮೆ ಸಮಯದ ಅಂತರದಲ್ಲಿ ರೈಲು ಸೇವೆ ನೀಡುತ್ತಿದೆ. ಇದೀಗ ಯೆಲ್ಲೋ ಲೈನ್‌ನಲ್ಲಿ ಪೀಕ್ ಹವರ್‌ನಲ್ಲಿ ರೈಲಿಗಾಗಿ ಕಾಯುವ ಸಮಯ ಕಡಿತಗೊಂಡಿದೆ.
26
ಯೆಲ್ಲೋ ಲೈನ್ ಮೆಟ್ರೋ ಕಾಯುವಿಕೆ ಕಡಿತ
ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರು ಇನ್ನು ಪೀಕ್ ಅವರ್‌ನಲ್ಲಿ ರೈಲಿಗಾಗಿ ಹೆಚ್ಚು ಕಾಯಬೇಕಿಲ್ಲ. ಪ್ರತಿ 7 ನಿಮಿಷಕ್ಕೊಂದು ರೈಲು ಸೇವೆ ನೀಡಲಿದೆ. ಇದರಿಂದ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ. ಪ್ರಯಾಣಿಕರು ತಕ್ಕ ಸಮಯಕ್ಕೆ ಕಚೇರಿ ಸೇರಿದಂತೆ ತಮ್ಮ ತಮ್ಮ ಕೆಲಸಕ್ಕೆ ಸೇರಿಕೊಳ್ಳಲು ನೆರವಾಗಲಿದೆ.
36
ಯಾವ ಸಮಯದಲ್ಲಿ ಹೆಚ್ಚುವರಿ ರೈಲು
ರಾಷ್ಟ್ರೀಯ ವಿದ್ಯಾಲಯದಿಂದ ಬೊಮ್ಮಸಂದ್ರ ನಡುವಿನ ಯೆಲ್ಲೋ ಮೆಟ್ರೋ ರೈಲು ಇದೀಗ ಪೀಕ್ ಹವರ್ ಅಂದರೆ ಬೆಳಗ್ಗೆ 8 ರಿಂದ ಮಧ್ಯಾಹ್ನದ ವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಹೆಚ್ಚುವರಿ ರೈಲು ಸೇವೆ ನೀಡಲಿದೆ. ಸದ್ಯ ಈ ಸಮಯದಲ್ಲಿ ಪ್ರತಿ 9 ನಿಮಿಷಕ್ಕೊಂದು ರೈಲು ಸೇವೆ ನೀಡುತ್ತಿದೆ. ಇನ್ನು ಪ್ರತಿ 7 ನಿಮಿಷಕ್ಕೆ ರೈಲು ಸೇವೆ ಲಭ್ಯವಿದೆ.
ಇನ್ನು ಪೀಕ್ ಅವರ್ ಬಿಟ್ಟು ಇತರ ಸಮಯದಲ್ಲಿ ಸದ್ಯ 14 ನಿಮಿಷಕ್ಕೊಂದು ರೈಲು ಸೇವೆ ಲಭ್ಯವಿದೆ. ಇನ್ನು ಮುಂದೆ ಇದು 10 ನಿಮಿಷಕ್ಕೆ ಇಳಿಕೆಯಾಗುತ್ತಿದೆ. ಹೀಗಾಗಿ ಬೆಂಗಳೂರಿನ ಪ್ರಮುಖ ಟೆಕ್ ಹಬ್ ಸಂಪರ್ಕಿಸುವ ಈ ರೈಲು ರೈಲಿನಲ್ಲಿ ಸಮಯ ಕಡಿತ ಸದುಪಯೋಗವಾಗಲಿದೆ.
56
ಶೀಘ್ರದಲ್ಲೇ 6 ಹೊಸ ರೈಲು ಸೇರ್ಪಡೆ
ಯೆಲ್ಲೋ ಲೈನ್ ಮೆಟ್ರೋ ಸೇವೆ ಬೆಂಗಳೂರಿನ ಪ್ರಮುಖ ಸಂಪರ್ಕ ಸೇತುವೆಯಾಗಿದೆ. ಎಲೆಕ್ಟ್ರಾನಿಸಿಟಿ ಸೇರಿದಂತೆ ಟೆಕ್ ಹಬ್ ಸಂಪರ್ಕಿಸುವ ಈ ಮಾರ್ಗದಲ್ಲಿ 2027ರಲ್ಲಿ ಹೊಸ 6 ರೈಲುಗಳು ಸೇರ್ಪಡೆಗೊಳ್ಳಲಿದೆ. ಈ ಮೂಲಕ ಪ್ರಯಾಣಿಕರ ಕಾಯುವಿಕೆ ಅವಧಿ ಮತ್ತಷ್ಟು ಕಡಿತಗೊಳ್ಳಲಿದೆ.
66
2025ರಲ್ಲಿ ಆರಂಭಗೊಂಡ ಯೆಲ್ಲೋ ಲೈನ್ ಮೆಟ್ರೋ
ಬೆಂಗಳೂರಿನ ಯೆಲ್ಲೋ ಲೈನ್ ಮೆಟ್ರೋ 2025ರಲ್ಲಿ ಆರಂಭಗೊಂಡಿತ್ತು. ವಿಳಂಬದ ಬಳಿಕ ಆರಂಭಗೊಂಡ ಈ ಯೆಲ್ಲೋ ಲೈನ್ ಮೆಟ್ರೋ ಅಷ್ಟೇ ವೇಗದಲ್ಲಿ ಗರಿಷ್ಠ ಪ್ರಯಾಣಿಕರನ್ನು ಆಕರ್ಷಿಸಿದೆ. ರಾಷ್ಟ್ರೀಯ ವಿದ್ಯಾಲಯದಿಂದ ಬೊಮ್ಮಸಂದ್ರ ನಡುವಿನ ಈ ಯೆಲ್ಲೋ ಲೈನ್ ಮಾರ್ಗದಲ್ಲಿ ಒಟ್ಟು 18 ಮೆಟ್ರೋ ನಿಲ್ದಾಣಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ