ಭದ್ರಾ ಅರಣ್ಯದಲ್ಲಿ 'ಬೆಂಗಾಲ್ ಟೈಗರ್' ರಾಜ ಗಾಂಭೀರ್ಯದ ನಡಿಗೆ: ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾದ ಶಾರ್ದೂಲ

Published : Apr 16, 2026, 06:20 PM IST

Bhadra Wildlife Sanctuary tiger sighting: ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ದೈತ್ಯಾಕಾರದ ಹುಲಿಯ ದರ್ಶನವಾಗಿದೆ. ಕೆಮ್ಮಣ್ಣುಗುಂಡಿಯ ಹೆಬ್ಬೆ ಫಾಲ್ಸ್ ರಸ್ತೆಯಲ್ಲಿ ನಿರ್ಭೀತಿಯಿಂದ ಓಡಾಡುತ್ತಿದ್ದ ಹುಲಿ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

PREV
13
ಭದ್ರಾ ಅಭಯಾರಣ್ಯದಲ್ಲಿ ಮತ್ತೆ ಕಾಣಿಸಿಕೊಂಡ ದೈತ್ಯಾಕಾರದ ಹುಲಿ

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ವನ್ಯಜೀವಿ ಚಟುವಟಿಕೆ ಹೆಚ್ಚಳವಾಗಿದ್ದು, ತರೀಕೆರೆ ತಾಲೂಕಿನ ಭದ್ರಾ ಅರಣ್ಯದಲ್ಲಿ ಮತ್ತೆ ಹುಲಿ ಚಲನವಲನ ಕಾಣಿಸಿಕೊಂಡಿದೆ

ಇದನ್ನೂ ಓದಿ: ಕೇವಲ ಒಂದು ದಿನ ಖಡ್ಗಮೃಗ ಮರಿಯ ಎಂದಾದರೂ ನೋಡಿದ್ದೀರಾ? IFS ಅಧಿಕಾರಿ ಹಂಚಿಕೊಂಡ ಅಪರೂಪದ ವೀಡಿಯೋ

23
ಅದೃಷ್ಟವಂತ ಪ್ರವಾಸಿಗರ ಕಣ್ಣ ಮುಂದೆ ಮೈಕೊಡವಿ ನಿಂತ ಶಾರ್ದೂಲ

ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಹುಲಿಯ ದರ್ಶನವಾಗಿದೆ. ಕೆಮ್ಮಣ್ಣುಗುಂಡಿಯ ಹೆಬ್ಬೆ ಫಾಲ್ಸ್ ರಸ್ತೆಯಲ್ಲಿ ಹುಲಿ ಸಂಚಾರ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪ್ರವಾಸಿಗರ ಕ್ಯಾಮೆರಾದಲ್ಲಿ ದೈತ್ಯಾಕಾರದ ಹುಲಿಯ ಓಡಾಟ ಸೆರೆಯಾಗಿದ್ದು, ಹುಲಿಯನ್ನು ನೋಡಿ ಸಫಾರಿಗೆ ತೆರಳಿದವರು ಸಂತಸಪಟ್ಟಿದ್ದಾರೆ.

33
ಸಫಾರಿ ಪ್ರಿಯರಿಗೆ ಫುಲ್ ಖುಷ್

ರಸ್ತೆ ಬದಿಯಲ್ಲಿ ನಿರ್ಭೀತಿಯಿಂದ ಹುಲಿಯೊಂದು ಓಡಾಡುತ್ತಿರುವುದನ್ನು ನೋಡಿದ ಪ್ರವಾಸಿಗರು ಹುಲಿಯನ್ನು ನೋಡಿ ಖುಷಿಪಡುತ್ತಿದ್ದಾರೆ. ಹುಲಿಯ ಓಡಾಟದಿಂದ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳುವ ಪ್ರವಾಸಿಗರಲ್ಲಿ ಸಂತಸ ಮನೆ ಮಾಡಿದೆ.

ಇದನ್ನೂ ಓದಿ: ಅಂಕೋಲಾ: ಹೆದ್ದಾರಿ 52ರಲ್ಲಿ ರಾಸಾಯನಿಕ ಟ್ಯಾಂಕರ್ ಸ್ಫೋಟ, ಚಾಲಕ ನಾಪತ್ತೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories