ಮೆರವಣಿಗೆ ಉದ್ದಕ್ಕೂ ಪೊಲೀಸ್ ಬಿಗಿ ಭದ್ರತೆ:
ಖಾಸಗಿ ಸಾರಿಗೆ ಒಕ್ಕೂಟ ಬಂದ್ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಪೊಲೀಸರು ಮುಂಚಿತವಾಗಿ ತಯಾರಿ. ಮೆರವಣಿಯುದ್ದಕ್ಕೂ ಪೊಲೀಸರ ಸರ್ಪಗಾವಲು. ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪ್ರತಿಭಟನೆ ಹಿನ್ನೆಲೆ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ನೇತೃತ್ವದಲ್ಲಿ ಭದ್ರತೆ. 684 ಪೊಲೀಸರ ನಿಯೋಜನೆ. 8 ಎಸಿಪಿ, 27 ಇನ್ಸ್ ಪೆಕ್ಟರ್ ಗಳು, 72 ಪಿಎಸ್ ಐ, 14 ಮಹಿಳಾ ಪಿಎಸ್ಐ ಸೇರಿದಂತೆ 684 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಒಟ್ಟಿಗೆ ರಾಲಿ ಮಾಡಲು ಅವಕಾಶ ಇಲ್ಲ. ಇಲ್ಲಿಂದ ಫ್ರೀಡಂ ಪಾರ್ಕ್ ವರೆಗೆ ಪೊಲೀಸ್ ವಾಹನದಲ್ಲಿ ಕಳಿಸಲು ವ್ಯವಸ್ಥೆ. ಇಲ್ಲ ನಾವು ರ್ಯಾಲಿ ಮಾಡಬೇಕು ಅಂತಂದ್ರೆ 20 ಜನರಂತೆ ಒಂದು ತಂಡ ಮಾಡಿ ಕಳಿಸಲು ತಯಾರಿ. ಯಾವುದೇ ಕಾರಣಕ್ಕೂ ದೊಡ್ಡ ಮಟ್ಟದ ರ್ಯಾಲಿ ಮಾಡಲು ಅವಕಾಶ ಮಾಡಿಕೊಡಲ್ಲ ಎನ್ನುತ್ತಿರುವ ಪೋಲೀಸರು
ಪ್ರತಿಭಟನೆಗೆ ಸಿದ್ಧವಾಗಿರುವ ಬೃಹತ್ ವೇದಿಕೆ:
ಎಲ್ಲೆಡೆಯಿಂದ ರಾಲಿ ಮೂಲಕ ಫ್ರೀಡಂ ಪಾರ್ಕ್‌ನತ್ತ ಹರಿದು ಬರುತ್ತಿರುವ ಸಂಘಟನೆಗಳು. ವಿವಿಧ ಖಾಸಗಿ ವಾಹನ ಚಾಲಕರು. ಪ್ರೀಡಂ ಪಾರ್ಕ್ ನಲ್ಲಿ ಜಮಾವಣೆ. ಸಾವಿರಾರು ಸಂಖ್ಯೆಯಲ್ಲಿ ಚಾಲಕರು ಸೇರುವ ಹಿನ್ನಲೆ ಪೊಲೀಸ್ ಬಿಗಿ ಬಂದೋಬಸ್ಸ್. ಪೋಲೀಸರ ಮಾತಿನಂತೆ 20 ಜನ ಹೋಗಲು ಸಿದ್ದತೆ. ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಹೊರಡುತ್ತಿರುವ ಚಾಲಕರು ಮಾಲೀಕರು. ಒಂದು ತಂಡ ಫ್ರೀಡಂಪಾರ್ಕ್ ತಲುಪಿದ ನಂತ್ರ ಇನ್ನೊಂದು ತಂಡವನ್ನು ಕಳಿಸುತ್ತಿರುವ ಪೊಲೀಸರು.