ಕರ್ನಾಟಕಕ್ಕೆ ಪ್ರತ್ಯೇಕ ವಿಮಾನಯಾನ, ರೈಲ್ವೆ ಸಂಸ್ಥೆ ರಚನೆಗೆ ಮನವಿ: ಕಲರ್‌ ಡಿಸೈನ್‌ ಮಾಡಿಕೊಟ್ಟ ಗುತ್ತೇದಾರ್!

First Published | Nov 20, 2023, 8:46 PM IST

ಬೆಂಗಳೂರು (ನ.20): ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರ್ಥಿಕ ಆದಾಯಕ್ಕೆ ಕೆಲವೊಂದು ಸಾರ್ವಜನಿಕ ಉದ್ಯಮಗಳನ್ನು ಹಾಗೂ ಮಂಡಳಿಗಳನ್ನು ನಡೆಸುತ್ತಿದೆ. ಆದರೆ, ಈಗ ಕೇಂದ್ರ ಸರ್ಕಾರದಲ್ಲಿ ಮಾತ್ರ ಇರುವ ರೈಲ್ವೆ ಇಲಾಖೆ ಮತ್ತು ವಿಮಾನಯಾನ ಸಂಸ್ಥೆಗಳನ್ನು ಕರ್ನಾಟಕ ರಾಜ್ಯದಲ್ಲಿಯೂ ಸ್ಥಾಪಿಸಬೇಕು ಎಂಬ ಮನವಿ ಕೇಳಿಬಂದಿದೆ. 

ಕರ್ನಾಟಕ ರಾಜ್ಯೋತ್ಸವವನ್ನು ನವೆಂಬರ್‌ನಲ್ಲಿ ಭರ್ಜರಿಯಾಗಿ ಆಚರಣೆ ಮಾಡುವ ಕನ್ನಡಿಗರು ಕನ್ನಡ ಭಾಷೆಗಾಗಿ ಕೆಲವೊಂದು ಬದಲಾವಣೆಯ ಅಗತ್ಯತೆಯ ಬಗ್ಗೆ ಧ್ವನಿ ಎತ್ತುತ್ತಾರೆ. 

ಆಳಂದ ಬಿಜೆಪಿ ಮುಖಂಡ ಹರ್ಷ ಎಸ್. ಗುತ್ತೇದಾರ್‌ ಕರ್ನಾಟಕದಲ್ಲಿ ಎಲ್ಲ ಮಾದರಿ ಸಾರಿಗೆ ಉದ್ಯಮ ಆರಂಭಿಸಲು, ಕರ್ನಾಟಕದ ನಾಡಧ್ವಜದ ಬಣ್ಣ ಹೊಂದಿದ ವಿಮಾನ, ರೈಲು ಹಾಗೂ ಬಸ್‌ಗಳನ್ನು ಡಿಸೈನ್‌ ಮಾಡಿಕೊಟ್ಟಿದ್ದಾರೆ.

Latest Videos


ನಮ್ಮ ರಾಜ್ಯದ ಸಾರ್ವಜನಿಕ/ಖಾಸಗಿ ಸಾರಿಗೆ ಸಂಸ್ಥೆಗಳು ಆದಷ್ಟು ಬೇಗ ಎಲ್ಲ ರೀತಿಯ ಸೇವೆಗಳನ್ನು ನೀಡಲು ಆರಂಭಿಸಲಿ! ಇದರಿಂದ ನಮ್ಮ ರಾಜ್ಯದ ಜನರ ಆದಾಯ ನಮಗೇ ಸಿಗಲಿದೆ ಎಂದಿದ್ದಾರೆ.

ಕರ್ನಾಟಕ ರಸ್ತೆ ಸಾರಿಗೆ ಹಾಗೂ ರೈಲ್ವೆ ಸಾರಿಗೆಯ ಜೊತೆಗೆ ನಮ್ಮದೇ ಆದ ವಿಮಾನಯಾನವೂ (Air Karnataka) ಇದ್ದರೆ ಕರ್ನಾಟಕದ ಒಳಗೆ ಓಡಾಟ ನಡೆಸಲು ಬಹಳ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ನಮ್ಮ ರಾಜ್ಯದಲ್ಲಿ ಈಗಾಗಲೇ ಸಾರ್ವಜನಿಕ ಸಂಚಾರಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ-KSRTC) ನಿಗಮವಿದೆ. ಅದೇ ರೀತಿ ಇತರೆ ಸಾರಿಗೆ ಉದ್ಯಮಗಳನ್ನು ಆರಂಭಿಸಬೇಕು.

ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯ ಅಧೀನಕ್ಕೆ ಒಳಪಡುವ ಮುನ್ನವೇ ರಾಜ್ಯದಲ್ಲಿ ಮೈಸೂರು ರೈಲ್ವೇಸ್ ಎಂದು ಹಿಂದೆ ಇತ್ತು. ಈಗ ಅದೇ ಹೆಸರಿನಲ್ಲಿ ಅಥವಾ ಕರ್ನಾಟಕ ರೈಲ್ವೇಸ್‌ (Karnataka Railways) ಹೆಸರಲ್ಲಿ ಪ್ರತ್ಯೇಕ ರೈಲ್ವೆ ಮಂಡಳಿ ಪುನಾರಂಭಿಸಬೇಕು. 

ಮುಂದುವರೆದು ಕರ್ನಾಟಕದ ನಾಡಧ್ವಜದ ಬಣ್ಣಗಳಾದ ಹಳದಿ ಮತ್ತು ಕೆಂಪು ಕಣ್ಣಿಗೆ ತಂಪು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕನ್ನಡ ನಾಡು, ನುಡಿಯ ಜೊತೆಗೆ ಅಭಿವೃದ್ಧಿ ಬಗ್ಗೆಯೂ ಚಿಂತನೆ ಮಾಡಿರುವುದು ಆಸಕ್ತಿದಾಯಕವಾಗಿದೆ.

ಆದರೆ, ಆಳಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಕರ್ನಾಟಕಕ್ಕೆ ಪ್ರತ್ಯೇಕ ರೈಲ್ವೆ ಮಂಡಳಿ ಹಾಗೂ ವಿಮಾನಯಾನ ಸಂಸ್ಥೆ ಆರಂಭಕ್ಕೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

click me!