ರಸ್ತೆ ಬದಿಯಲ್ಲಿ ಕಾರಿನಲ್ಲೇ ದಿನ ಕಳೆಯುತ್ತಿದೆ ಉದ್ಯಮಿ ಕುಟುಂಬ!

First Published May 20, 2020, 5:59 PM IST

ದೇಶವ್ಯಾಪಿ ಲಾಕ್‌ಡೌನ್ ಹೇರಿ ಸದ್ಯ ಎರಡು ತಿಂಗಳಾಗಿವೆ, ಹೀಗಿದ್ದರೂ ಬದುಕೆಂಬ ಗಾಡಿ ಮತ್ತೆ ಹಳಿ ಸೇರಿಲ್ಲ. ಕಾರ್ಮಿಕರು ತಮ್ಮ ತವರು ನಾಡಿಗೆ ತೆರಳುವುದು ನಿಂತಿಲ್ಲ. ಜನರು ಮನೆಗೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಿರುವಾಗ ಕುಟುಂಬವೊಂದು ತಮ್ಮ ಕಾರಿನಲ್ಲಿ ಮುಂಬೈನಿಂದ ಬಿಹಾರದೆಡೆ ಪ್ರಯಾಣ ಆರಂಭಿಸಿದ್ದಾರೆ. ಹೀಗಿರುವಾಗ ಈ ಕುಟುಂಬ ಸೋಮವಾರ ಭೋಪಾಲ್‌ ತಲುಪಿದೆ.ಸದ್ಯ ಈ ಕುಟುಂಬ ಪುಟ್ಟ ಕಾರನ್ನೇ ಮನೆಯಾಗಿಸಿಕೊಂಡಿದ್ದಾರೆ. ಮನೆಯೊಂದರಲ್ಲಿ ಅಗತ್ಯವಾಗಿ ಇರಬೇಕಾದ ಎಲ್ಲಾ ವಸ್ತುಗಳು ಈ ಕಾರಿನಲ್ಲಿವೆ.
 

ಮುಂಬೈನ ಸಿಎಸ್‌ಟಿನಲ್ಲಿ ಬಟ್ಟೆ ವ್ಯಾಪಾರದ ಉದ್ಯಮ ನಡೆಸುವ ಶಾಂತನು ಕುಮಾರ್ ತನ್ನ ಇಡೀ ಕುಟುಂಬದೊಂದಿಗೆ ನಾಲ್ಕು ದಿನಗಳ ಹಿಂದೆ ಮುಂಬೈನಿಂದ ಬಿಹಾರಕ್ಕೆ ಪ್ರಯಾಣ ಆರಂಭಿಸಿದ್ದಾರೆ. ಅವರೊಂದಿಗೆ ಅವರ ಪತ್ನಿ ಹಾಗೂ ಪ್ರಿಯಾ ಹಾಗೂ ರಿಯಾ ಹೆಸರಿನ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಅವರು ಸೋಮವಾರ ಭೋಪಾಲ್‌ನ ರಸ್ತೆ ಬದಿಯಲ್ಲಿ ರಾತ್ರಿ ಕಳೆದಿದ್ದಾರೆ. ಇನ್ನು ರಾತ್ರಿ ತಾವು ಪ್ರಯಾಣ ಮಾಡುವುದಿಲ್ಲ ಎಂಬುವುದು ಶಾಂತನು ಮಾತಾಗಿದೆ. ರಾತ್ರಿಯಾಗುತ್ತಿದ್ದಂತೆಯೇ ಕಾರು ರಸ್ತೆ ಬದಿ ನಿಲ್ಲಿಸಿ ಇಡೀ ರಾತ್ರಿ ಅಲ್ಲೇ ಕಳೆಯುತ್ತಾರೆ.
undefined
ಲಾಕ್‌ಡೌನ್‌ನಿಂದಾಗಿ ವ್ಯಾಪಾರ ನಿಂತಿತ್ತು. ಮುಂಬೈನಲ್ಲಿ ಕೊರೋನಾ ಅಟ್ಟಹಾಸ ಕೊಂಚ ಹೆಚ್ಚಿದೆ. ಹೀಗಾಗಿ ತಿನ್ನಲು, ಕುಡಿಯಲು ಬೇಕಾದ ಆಹಾರ ತರುವುದು ಕಷ್ಟವಾಗುತ್ತದೆ. ಹೀಗಾಗಿ ನಾವು ನಮ್ಮ ಹಳ್ಳಿಗೆ ತೆರಳಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
undefined
ಈ ಕುಟುಂಬ ಕಾರನ್ನೇ ಪುಟ್ಟ ಮನೆಯನ್ನಾಗಿ ಪರಿವವರ್ತಿಸಿದೆ. ಹೊದ್ದುಕೊಳ್ಳಲು ಬೆಡ್‌ ಶೀಟ್, ಹಸಿವಾದಾಗ ತಿನ್ನಲು ಬೇಕಾದ ಆಹಾರ ಕೂಡಾ ಇದೆ. ಬೆಳಗ್ಗೆ ಯಾವುದಾದರೂ ಹೊಲದಲ್ಲಿ ಹಾಕಲಾದ ಪೈಪ್‌ನಲ್ಲಿ ಬರುವ ನೀರಿನಲ್ಲಿ ಸ್ನಾನ ಮಾಡುತ್ತಾರೆ, ಬಳಿಕ ಗಾಡಿಯೊಳಗಿರುವ ಸ್ಟೌವ್ ತೆಗೆದು ತಿಂಡಿ ತಯಾರಿಸಿ ತಿಂದು ಪ್ರಯಾಣ ಆರಂಭಿಸುತ್ತಾರೆ.
undefined
ಆದರೆ ಹೆಚ್ಚು ಬಾರಿ ಆಹಾರ ತಯಾರಿಸಬೇಕಾದ ಅನಿವಾರ್ಯತೆ ಇರುವುದಿಲ್ಲ, ರಸ್ತೆಯಲ್ಲಿ ತಿಂಡಿ ಪ್ಯಾಕೇಟ್‌ ಹಂಚುವವರಿಂದಲೇ ಸ್ವೀಕರಿಸುತ್ತಾರೆ.
undefined
ಇನ್ನು ನಾವು ಮಧ್ಯಪ್ರದೇಶ ಗಡಿ ಪ್ರವೇಶಿಸುತ್ತಿದ್ದಂತೆಯೇ ಅನೇಕ ಕಡೆ ಜನರು ಪ್ರಯಾಣಿಕರ ಸಹಾಯಕ್ಕೆ ಮುಂದಾಗಿರುವುದನ್ನು ನೋಡಿದೆ. ಜನರು ಇಷ್ಟು ಒಳ್ಳೆಯವರು ಎಂದು ನಂಬಲು ಸಾಧ್ಯವೇ ಆಗಲಿಲ್ಲ. ಇಂತಹ ಸಂಕಷ್ಟದ ಸಮಯದಲ್ಲೂ ಜನರು ರಸ್ತೆ ಬದಿಯಲ್ಲಿ ಊಟ, ತಿಂಡಿ ಹಿಡಿದು ರಸ್ತೆ ಬದಿಯಲ್ಲಿ ನಿಂತಿದ್ದಾರೆ. ತಮ್ಮಿಂದ ಹೇಗೆ ಸಾಧ್ಯವೋ ಹಾಗೆ ಸಹಾಯ ಮಾಡುತ್ತಿದ್ದಾರೆ ಎಂದಿದ್ದಾರೆ ಶಾಂತನು
undefined
click me!