ಮೊಮ್ಮಕ್ಕಳನ್ನ ನೋಡಿಕೊಳ್ಳಲು ಸೊಸೆಯ ಹೋರಾಟಕ್ಕೆ ಬೆಂಬಲವಾಗಿ ಬಂದ 80 ವರ್ಷದ ಅತ್ತೆ!

Ravi Janekal   | ANI
Published : Nov 22, 2026, 01:24 PM IST

ವಿವಿಧ ಬೇಡಿಕೆ ಈಡೇರಿಸುವಂತೆ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟಿದೆ ಎಂಬತ್ತು ವರ್ಷದ ಅಜ್ಜಿ ಸೊಸೆಯ ಹೋರಾಟಕ್ಕೆ ಬೆಂಬಲಿಸಿ ಬೆಂಗಳೂರಿಗೆ ಬಂದಿದ್ದಾರೆ. ಸೊಸೆ ಹೋರಾಟದಲ್ಲಿದ್ದಾಗ ಅಜ್ಜಿ ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಾರೆ.

PREV
14
6ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಹೋರಾಟ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟ ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು ನಲ್ವತ್ತು ಸಾವಿರಕ್ಕೂ ಅಧಿಕ ಕಾರ್ಯಕರ್ತೆಯರು ಬೇಡಿಕೆ ಈಡೇರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಹೋರಾಟ ನಡೆಸುತ್ತಿದ್ದಾರೆ.

24
ಮಕ್ಕಳೊಂದಿಗೆ ಹೋರಾಟಕ್ಕೆ ಬಂದಿರುವ ಆಶಾ ಕಾರ್ಯಕರ್ತೆಯರು

ಆಶಾ ಕಾರ್ಯಕರ್ತೆಯರು ಬಡ ಕುಟುಂಬದ ಮಹಿಳೆಯರೇ ಆಗಿದ್ದು ಬೆಂಗಳೂರಿಗೆ ಹೋರಾಟಕ್ಕೆ ಬರುವಾಗಲೇ ಮಕ್ಕಳು ಮರಿಗಳೊಂದಿಗೆ ಆಗಮಿಸಿದ್ದಾರೆ. ಆದರೆ ಹೋರಾಟ ಆರನೇ ದಿನವೂ ಮುಂದುವರಿದಿದ್ದು, ಆಶಾ ಕಾರ್ಯಕರ್ತೆಯರ ಮಕ್ಕಳ ಪೋಷಣೆ ಪಾಲನೆ ಶೋಚನೀಯವಾಗಿದೆ. ಒಂದು ಕಡೆ ತೀವ್ರ ಚಳಿ, ಬೀದಿಯಲ್ಲಿ ಸೊಳ್ಳೆ ತಿಗಣೆಗಳ ಕಾಟ, ಸ್ನಾನ, ಶೌಚಾಲಯಕ್ಕೂ ತೀವ್ರ ತೊಂದರೆ ನಡುವೆ ಹೋರಾಟ ಮುಂದುವರಿಸಿದ್ದಾರೆ.

34
ಸೊಸೆಯ ಹೋರಾಟಕ್ಕೆ ಬೆಂಬಲವಾಗಿ ಬಂದ 80 ವರ್ಷದ ಅಜ್ಜಿ!

ಆಶಾ ಕಾರ್ಯಕರ್ತೆಯರೊಂದಿಗೆ ಸರ್ಕಾರ ನಡೆಸಿದ ಸಭೆ ವಿಫಲಗೊಂಡ ಹಿನ್ನೆಲೆ ಹೋರಾಟ ಇನ್ನಷ್ಟು ದಿನಗಳ ಕಾಲ ಮುಂದುವರಿಯಲಿದೆ. ಮಕ್ಕಳೊಂದಿಗೆ ಹೋರಾಟಕ್ಕೆ ಬೆಂಗಳೂರಿಗೆ ಬಂದಿದ್ದ ಸೊಸೆಗೆ ಬೆಂಬಲವಾಗಿ ಎಂಬತ್ತು ವರ್ಷದ ಅತ್ತೆ ಕೂಡ ಊರಿಂದ ಅತ್ತೆ ಕೂಡ ಹೋರಾಟಕ್ಕೆ ಬಂದಿದ್ದಾರೆ. ಸೊಸೆ ಪ್ರತಿಭಟನೆಯಲ್ಲಿ ಭಾಗಿಯಾದರೆ ಅತ್ತೆ ಮೊಮ್ಮಕ್ಕಳನ್ನು ನೋಡಿಕೊಳ್ಳುವ ಮೂಲಕ ಸೊಸೆಯ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾಳೆ.

44
ಅಜ್ಜಿಯ ಆರೋಗ್ಯ ವಿಚಾರಿಸಿದ ಸುವರ್ಣ ನ್ಯೂಸ್ ಪ್ರತಿನಿಧಿ

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕರೆಕೊಟ್ಟಾಗ ರಾಜ್ಯದ ಮೂಲೆಮೂಲೆಗಳಿಂದ ಬೆಂಗಳೂರಿಗೆ ಬಂದಿದ್ದ ಕಾರ್ಯಕರ್ತೆಯರು. ಅದೇ ರೀತಿ ಯಾದಗಿರಿಯಿಂದಲೂ ಮಕ್ಕಳನ್ನ ಕಟ್ಟಿಕೊಂಡು ಹೋರಾಟಕ್ಕೆ ಬಂದಿದ್ದ ಆಶಾ ಕಾರ್ಯಕರ್ತೆ. ಬೆಂಗಳೂರು ಪ್ರತಿಭಟನೆ ಎಂದರೆ ಊಟ, ವಸತಿ ಹೇಗಿರುತ್ತೋ ಮೊಮ್ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೋ ಎಂಬ ಆತಂಕದಿಂದ ಸೊಸೆಯೊಂದಿಗೆ ಮೊಮ್ಮಕ್ಕಳನ್ನ ನೋಡಿಕೊಳ್ಳಲು 80 ವರ್ಷದ ಅಜ್ಜಿ ಕೂಡ ಹೋರಾಟಕ್ಕೆ ಬಂದಿದ್ದಾರೆ. ಇಳಿ ವಯಸ್ಸಿನ ಅಜ್ಜಿ ಕೂಡ ಹೋರಾಟದಲ್ಲಿ ಭಾಗಿಯಾಗಿರುವುದನ್ನ ಗಮನಿಸಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತಿನಿಧಿ ಅಜ್ಜಿಯ ಆರೋಗ್ಯ ವಿಚಾರಿಸುವುದರೊಂದಿಗೆ ಕೆಲವೊತ್ತು ಮಾತನಾಡಿದ್ದಾರೆ.

ಸೊಸೆ ಬೆಂಗಳೂರಿಗೆ ಹೋರಾಟಕ್ಕೆ ಹೋಗ್ತಿನಿ ಅಂದ್ಳು. ಆದರೆ ಅಲ್ಲಿ ಮೊಮ್ಮಕ್ಕಳನ್ನು ನೋಡಿಕೊಳ್ಳೋರು ಯಾರೂ ಇಲ್ಲ, ನನಗೆ ವಯಸ್ಸಾಗಿದೆ ಊರಲ್ಲಿದ್ರೆ ನನ್ನನ್ನೂ ನೋಡ್ಕೊಳ್ಳೂರು ಯಾರೂ ಇಲ್ಲ. ಹಾಗಾಗಿ ನಾನು ಸೊಸೆ ಜೊತೆಗೆ ಬೆಂಗಳೂರಿಗೆ ಬಂದೀನಿ. ಸೊಸೆ ಹೋರಾಟದಲ್ಲಿದ್ದಾಗ ನಾನು ಮೊಮ್ಮಕ್ಕಳನ್ನು ನೋಡಿಕೊಳ್ತೀನಿ. ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸರ್ಕಾರ ಸ್ಪಂದಿಸಬೇಕು ಅಂತಾ ಅಜ್ಜಿ ಮನವಿ ಮಾಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories