Vaibhav: ಎದುರಾಗಿಲಿದೆ 4 ದಿನಗಳ ಅಗ್ನಿಪರೀಕ್ಷೆ; ಮತ್ತೆ ಕ್ರೀಸ್‌ಗಿಳಿಯಲ್ಲಿದ್ದಾರೆ ವೈಭವ್; ಈ ಬಾರಿ ಇದೆಯಂತೆ ಬೇರೆಯದ್ದೇ ಸ್ಟ್ಯಾಟರ್ಜಿ!

Published : Jul 20, 2026, 09:21 PM IST

ಇತ್ತೀಚಿನ ಸರಣಿ ಸೋಲುಗಳ ನಂತರ, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಯುವ ಭಾರತ ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ವಿಶೇಷ ಬ್ಯಾಟಿಂಗ್ ಸ್ಟ್ಯಾಟರ್ಜಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

PREV
16
ಸಾಲು- ಸಾಲು ಸೋಲು!

ಇತ್ತೀಚಿನ ಪ್ರವಾಸಗಳಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಅನುಭವಿಸಿದ ಸಾಲು ಸಾಲು ಹಿನ್ನಡೆಗಳು ಅಭಿಮಾನಿಗಳಲ್ಲಿ ಭಾರೀ ನಿರಾಶೆ ಮೂಡಿಸಿವೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 2-0 ಅಂತರದಿಂದ ಸೋತಿದ್ದ ಟೀಮ್ ಇಂಡಿಯಾ, ಆ ಬಳಿಕ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನೂ 4-0 ಅಂತರದಿಂದ ಕೈಚೆಲ್ಲಿತು. ಇಷ್ಟಕ್ಕೇ ನಿಲ್ಲದೇ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ 2-1 ಅಂತರದ ಸೋಲು ಕಾಣಬೇಕಾಯಿತು.

26
ಎಲ್ಲರ ಬಾಯಿ ಮುಚ್ಚಿಸಿದ ರೋಹಿತ್!

ಆರಂಭಿಕ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದ ನಾಯಕ ರೋಹಿತ್ ಶರ್ಮಾ ಅವರು ಮೂರನೇ ಏಕದಿನ ಪಂದ್ಯದ ನಂತರ ನಿವೃತ್ತಿ ಹೊಂದಲಿದ್ದಾರೆ ಎಂಬ ವದಂತಿಗಳು ಬಲವಾಗಿ ಹಬ್ಬಿದ್ದವು. ಆದರೆ, ಅಂತಿಮ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ರೋಹಿತ್, ತಮ್ಮ ಮೇಲಿದ್ದ ವಿಮರ್ಶಕರ ಬಾಯಿ ಮುಚ್ಚಿಸಿದರು. ಇಂಗ್ಲೆಂಡ್ ಪ್ರವಾಸದ ನಂತರ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮುಂಬರುವ 2 ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿರಲಿದ್ದಾರೆ.

36
ಜಿಂಬಾಬ್ವೆ ಪ್ರವಾಸದಲ್ಲಿ ವೈಭವ್ ಸೂರ್ಯವಂಶಿ 'ವಿಶೇಷ ಸ್ಟ್ರ್ಯಾಟಜಿ'!

ಇಂಗ್ಲೆಂಡ್ ಪ್ರವಾಸ ಮುಗಿಸಿದ ಬೆನ್ನಲ್ಲೇ ಈಗ ಟೀಮ್ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದು, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಜುಲೈ 23 (ಗುರುವಾರ) ರಂದು ಮೊದಲ ಟಿ20 ಪಂದ್ಯ ನಡೆಯಲಿದ್ದು, ಜುಲೈ 25 (ಶನಿವಾರ) ಎರಡನೇ ಪಂದ್ಯ ಮತ್ತು ಜುಲೈ 26 (ಭಾನುವಾರ) ಮೂರನೇ ಪಂದ್ಯ ಹರಾರೆಯಲ್ಲಿ ನಡೆಯಲಿದೆ.

46
ಉದಯೋನ್ಮುಕ ಪ್ರತಿಭೆ ವೈಭವ್!

ಈ ಜಿಂಬಾಬ್ವೆ ಸರಣಿಯಲ್ಲಿ ಎಲ್ಲರ ಕಣ್ಣು ಯುವ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಮೇಲಿದೆ. ಪ್ರಮುಖ ಹಿರಿಯ ಆಟಗಾರರ ಗೈರುಹಾಜರಿಯಲ್ಲಿ ವೈಭವ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕೌಶಲ್ಯ ಸಾಬೀತುಪಡಿಸಲು ಮತ್ತೊಂದು ಸುವರ್ಣ ಅವಕಾಶ ಸಿಕ್ಕಿದೆ. ಇತ್ತೀಚಿನ ಪಂದ್ಯಗಳಲ್ಲಿ ಎದುರಾದ ತಪ್ಪುಗಳಿಂದ ಪಾಠ ಕಲಿತ್ತಿರುವ ವೈಭವ್, ಈ ಬಾರಿ ಮೈದಾನಕ್ಕಿಳಿಯಲು ವಿಶೇಷ ಸ್ಟ್ರ್ಯಾಟಜಿ ಯೊಂದಿಗೆ ಸಜ್ಜಾಗಿದ್ದಾರೆ. ಆರಂಭಿಕ ಓವರ್‌ಗಳಲ್ಲಿ ಅನಗತ್ಯ ವಿಕೆಟ್ ಒಪ್ಪಿಸದೇ, ಪಿಚ್ ಗುಣಲಕ್ಷಣಗಳನ್ನು ಅರ್ಥೈಸಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿ ಆಡುವ ತಂತ್ರವನ್ನು ಅವರು ರೂಪಿಸಿಕೊಂಡಿದ್ದಾರೆ. ಜಿಂಬಾಬ್ವೆಯ ವೇಗದ ಬೌಲಿಂಗ್‌ಗೆ ಪ್ರತಿಯಾಗಿ ಪವರ್‌ಪ್ಲೇ ಅವಧಿಯಲ್ಲಿ ರನ್ ಕಲೆಹಾಕಲು ಅವರು ವಿಶೇಷ ಸಿದ್ಧತೆ ನಡೆಸಿದ್ದಾರೆ

56
ಭಾರತದ ಮುಂದಿನ ವೇಳಾಪಟ್ಟಿ & ರೋಹಿತ್-ವಿರಾಟ್ ಕಮ್‌ಬ್ಯಾಕ್:

ಜಿಂಬಾಬ್ವೆ ಸರಣಿಯ ಮುಕ್ತಾಯದ ನಂತರ, ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಆಗಸ್ಟ್ 15 ರಿಂದ ಮೊದಲ ಟೆಸ್ಟ್ ಹಾಗೂ ಆಗಸ್ಟ್ 23 ರಿಂದ ಎರಡನೇ ಟೆಸ್ಟ್ ಪಂದ್ಯಗಳು ಜರುಗಲಿವೆ. ಶ್ರೀಲಂಕಾ ಸರಣಿ ಮುಗಿದ ನಂತರ, ಸೆಪ್ಟೆಂಬರ್ 27 ರಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ (ಸೆಪ್ಟೆಂಬರ್ 27, ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 3). ಈ ಸರಣಿಯ ಮೂಲಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತೆ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲಿದ್ದಾರೆ. ಏಕದಿನ ಸರಣಿಯ ನಂತರ ವಿಂಡೀಸ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಯೂ ನಡೆಯಲಿದೆ.

66
ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ!

ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಇಶಾನ್ ಕಿಶನ್, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್ ಯಾದವ್, ಪ್ರಭ್‌ಸಿಮ್ರನ್ ಸಿಂಗ್. ಯುವ ಆಟಗಾರರನ್ನೊಳಗೊಂಡ ಶ್ರೇಯಸ್ ಅಯ್ಯರ್ ಪಡೆಯು ಜಿಂಬಾಬ್ವೆ ವಿರುದ್ಧ ಮತ್ತೆ ಗೆಲುವಿನ ಹಾದಿಗೆ ಮರಳಲಿದೆಯೇ ಮತ್ತು ಹೊಸ ಸ್ಟ್ರ್ಯಾಟಜಿಯೊಂದಿಗೆ ಮೈದಾನಕ್ಕಿಳಿಯುತ್ತಿರುವ ವೈಭವ್ ಸೂರ್ಯವಂಶಿ ಅಬ್ಬರಿಸಲಿದ್ದಾರೆಯೇ ಎಂಬುದನ್ನು ಕಾಯ್ದು ನೋಡಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories