WWE ಲೆಜೆಂಡ್ ಅಂಡರ್‌ಟೇಕರ್ ನೋಡಿ ಬೆಚ್ಚಿಬಿದ್ದ ಡೇಂಜರಸ್ ಶಾರ್ಕ್‌..! ವಿಡಿಯೋ ವೈರಲ್

First Published | Jul 13, 2023, 2:45 PM IST

ಬೆಂಗಳೂರು: ದಿ ಅಂಡರ್‌ಟೇಕರ್ ಹೆಸರು ಯಾರು ಕೇಳಿಲ್ಲ ಹೇಳಿ? WWE ವೃತ್ತಿಪರ ಕುಸ್ತಿಪಟುವಾಗಿರುವ ದಿ ಅಂಡರ್‌ಟೇಕರ್, ಇದೀಗ ಹೊಸ ವಿಚಾರವೊಂದಕ್ಕೆ ಸುದ್ದಿಯಾಗಿದ್ದಾರೆ. WWE ಕುಸ್ತಿ ರಿಂಗ್‌ನಲ್ಲಿ ಅಬ್ಬರಿಸುತ್ತಾ ಬಂದಿರುವ ದಿ ಅಂಡರ್‌ಟೇಕರ್, ಇದೀಗ ಶಾರ್ಕ್‌ ಕೂಡಾ ಬೆಚ್ಚಿಬೀಳುವಂತೆ ಮಾಡಿದ್ದಾರೆ.
 

ದಿ ಅಂಡರ್‌ಟೇಕರ್‌ ಪ್ರಖ್ಯಾತ ಅಮೆರಿಕ ಮೂಲದ ವೃತ್ತಿಪರ ಕುಸ್ತಿಪಟುವಾಗಿದ್ದು, ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ದಿ ಅಂಡರ್‌ಟೇಕರ್‌ಗೆ ಪುಟ್ಟ ಮಕ್ಕಳಿಂದ ಹಿಡಿದು ಹಣ್ಣುಹಣ್ಣು ಮುದುಕರವರೆಗೂ ಫ್ಯಾನ್ಸ್‌ಗಳಿದ್ದಾರೆ.

WWE/WWF ಸಾರ್ವಕಾಲಿಕ ದಿಗ್ಗಜ ಕುಸ್ತಿಪಟುಗಳ ಸಾಲಿನಲ್ಲಿ ದಿ ಅಂಡರ್‌ಟೇಕರ್ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಕೊನೆವರೆಗೂ ಛಲಬಿಡದೇ ಕಾದಾಡುವ ದಿ ಅಂಡರ್‌ಟೇಕರ್‌ಗೆ 'ದಿ ಡೆಡ್‌ಮ್ಯಾನ್' ಎನ್ನುವ ವಿಶೇಷ ಬಿರುದು ಕೂಡಾ ಇದೆ.

Tap to resize

WWE/WWF ರಿಂಗ್‌ನಲ್ಲಿ ಎದುರಾಳಿ ಕುಸ್ತಿಪಟು ಕೆಣಕಿದರೆ ಮುಖ ಮೂತಿ ನೋಡದೇ ಬಾರಿಸುವ ದಿ ಅಂಡರ್‌ಟೇಕರ್, ಇದೀಗ ನಿಜ ಜೀವನದಲ್ಲೂ ತಮ್ಮನ್ನು ಕೆಣಕಿದರೆ ಉಳಿಗಾಲ ಇಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿ ತೋರಿಸಿದ್ದಾರೆ.

WWE ವೃತ್ತಿಪರ ಕುಸ್ತಿ ಕಾದಾಟದಲ್ಲಿ ದಿ ಅಂಡರ್‌ಟೇಕರ್ ವಿಭಿನ್ನ ಎಂಟ್ರಿ ಹಾಗೂ ಭಯಾನಕ ಲುಕ್‌ನಿಂದಲೇ ಎದುರಾಳಿಯ ಎದೆಯಲ್ಲಿ ನಡುಕು ಹುಟ್ಟಿಸುತ್ತಾ ಬಂದಿರುವ ನೀಳಕಾಯದ ಕುಸ್ತಿಪಟು, ಇದೀಗ ಶಾರ್ಕ್‌ಗೂ ಶಾಕ್ ನೀಡಿದ್ದಾರೆ.

ಇನ್ನು ಇದೇ ವೇಳೆ ತನ್ನ ಪತ್ನಿಯನ್ನು ಅಂಡರ್‌ಟೇಕರ್ ಎಷ್ಟು ಕೇರ್‌ ಮಾಡುತ್ತಾರೆ ಎನ್ನುವುದನ್ನು ದಿ ಅಂಡರ್‌ಟೇಕರ್ ಪತ್ನಿ ಮಿಚೆಲ್ಲೆ ಮೆಕ್‌ಕೂಲ್‌ ಸ್ವತಃ ವಿಡಿಯೋ ಪೋಸ್ಟ್‌ ಮಾಡಿ ಅನಾವರಣ ಮಾಡಿದ್ದಾರೆ. ಅಂಡರ್‌ಟೇಕರ್ ತಮ್ಮ ಪತ್ನಿಯನ್ನು ಶಾರ್ಕ್‌ನಿಂದ ಬಚಾವ್ ಮಾಡಿದ್ದಾರೆ.
 

ದಿ ಅಂಡರ್‌ಟೇಕರ್, ಪತ್ನಿಯನ್ನು ಬೀಚ್‌ವೊಂದಕ್ಕೆ ಕೊಂಡೊಯ್ಯಿದಿದ್ದಾರೆ. ಆಕ ಶಾರ್ಕ್‌ವೊಂದು ಅಂಡರ್‌ಟೇಕರ್ ಪತ್ನಿಯ ಬಳಿ ಬರಲಾರಂಭಿಸಿದೆ. ಆಗ ದಿ ಅಂಡರ್‌ಟೇಕರ್, ಅಪಾಯಕಾರಿ ಶಾರ್ಕ್‌ ಅನ್ನು ದಿಟ್ಟಿಸಿ ನೋಡುವ ಮೂಲಕ ಅದು ಜಾಗ ಖಾಲಿ ಮಾಡುವಂತೆ ಮಾಡಿದ್ದಾರೆ.

ಪ್ರಖ್ಯಾತ ಕುಸ್ತಿಪಟು ದಿ ಅಂಡರ್‌ಟೇಕರ್‌ 2020ರಲ್ಲಿ ಸರ್ವೈವರ್ ಸೀರೀಸ್‌ ಬಳಿಕ ವೃತ್ತಿಪರ WWE ಸ್ಪರ್ಧೆಯಿಂದ ನಿವೃತ್ತಿ ಪಡೆದಿದ್ದಾರೆ.
 

ಕಳೆದ ವರ್ಷ ದಿ ಅಂಡರ್‌ಟೇಕರ್‌ಗೆ ದಿ ಹಾಲ್ ಆಫ್‌ ಫೇಮ್‌ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದಾದ ಬಳಿಕ ಅಂಡರ್‌ಟೇಕರ್ ಕೆಲವು ಬಾರಿ WWEನಲ್ಲಿ ಅಪರೂಪಕ್ಕೊಮ್ಮೆ ಎಂಬಂತೆ ಕಾಣಿಸಿಕೊಳ್ಳುತ್ತಿದ್ದಾರೆ.

Latest Videos

click me!