ಮೋಸ್ಟ್ ಬ್ಯೂಟಿಫುಲ್ ಕಪಲ್; ದಿನೇಶ್ ಕಾರ್ತಿಕ್-ದೀಪಿಕಾಗೆ ಅಗ್ರಸ್ಥಾನ!
First Published | Oct 9, 2019, 8:36 PM IST2019ರ ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ ಶೀಘ್ರದಲ್ಲೇ ಕಮ್‌ಬ್ಯಾಕ್ ಮಾಡೋ ಎಲ್ಲಾ ಲಕ್ಷಣಗಳಿವೆ. ದಿನೇಶ್ ಕಾರ್ತಿಕ್ ಹಾಗೂ ಪತ್ನಿ, ಸ್ವ್ಕಾಶ್ ಪಟು ದೀಪಿಕಾ ಪಲ್ಲಿಕಲ್ ಮೋಸ್ಟ್ ಬ್ಯೂಟಿಫುಲ್ ಕಪಲ್ ಎಂದೇ ಗುರುತಿಸಿಕೊಂಡಿದ್ದಾರೆ. ಆದರೆ ಇದೇ ದಿನೇಶ್ ಕಾರ್ತಿಕ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದಕ್ಕೆ ಕಾರಣ ಮೊದಲ ಪತ್ನಿ. 2007ರಲ್ಲಿ ಮೊದಲ ಮದುವೆಯಾಗಿದ್ದ ಕಾರ್ತಿಕ್ ನೆಟ್ಟಗೆ ಒಂದು ವರ್ಷ ಸಂಸಾರ ಮಾಡಿಲ್ಲ. ಮತ್ತೊರ್ವ ಸಹ ಕ್ರಿಕೆಟಿಗನ ಪ್ರೇಮ ಪಾಶಕ್ಕೆ ಬಿದ್ದ ಕಾರ್ತಿಕ್ ಪತ್ನಿ, ದಿನೇಶ್‌ನಿಂದ ದೂರವಾದಳು. ಈ ಕೊರಗಿನಲ್ಲಿರುವಾಗ ದಿನೇಶ್ ಕೈಹಿಡಿದ ಚೆಲುವೆ ದೀಪಿಕಾ ಪಲ್ಲಿಕಲ್. ಪಲ್ಲಿಕಲ್ ಆಗಮನದ ಬಳಿಕ ಕಾರ್ತಿಕ್ ಲಕ್ ಬದಲಾಯಿತು. ದಿನೇಶ್ ಹಾಗೂ ಪಲ್ಲಿಕಲ್ ಪ್ರೀತಿ, ಪ್ರೇಮ ಹಾಗೂ ಮದುವೆ ಬಂಧನ ಚಿತ್ರಗಳು ಇಲ್ಲಿವೆ.