ಕೇರಳ ದೇವಸ್ಥಾನಕ್ಕೆ ಭೇಟಿ: ಸಾಂಪ್ರದಾಯಿಕ ಲುಕ್ ನಲ್ಲಿ ಕಂಗೊಳಿಸಿದ ಸಿಂಧು

First Published Oct 9, 2019, 5:14 PM IST

ಇತ್ತೀಚೆಗಷ್ಟೇ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ತಾರಾ ಬ್ಯಾಡ್ಮಿಂಟನ್ ಪಟು ಪಿ.ವಿ. ಸಿಂಧು ಅವರನ್ನು ಕೇರಳ ಸರ್ಕಾರ ನಗದು ಬಹುಮಾನ ನೀಡುವ ಮೂಲಕ ಗೌರವಿಸಿದೆ. ದೇವಸ್ಥಾನಕ್ಕೆ ಭೇಟಿ ನೀಡುವಾಗ ಸಿಂಧು ಕೇರಳ ಸಾಂಪ್ರದಾಯಿಕ ಉಡುಗೆ ಸೆಟ್ ಮುಂಡು ತೊಟ್ಟು ಮಿಂಚಿದರು. ರಾಜ್ಯ ಸರ್ಕಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸಿಂಧು ಪಾಲ್ಗೊಂಡಿದ್ದರು. ಈ ವೇಳೆ ಕೇರಳ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ. ಸುನಿಲ್ 10 ಲಕ್ಷ ರುಪಾಯಿ ಮೊತ್ತದ ಚೆಕ್ ವಿತರಿಸಿದರು.

ಕೇರಳ ರಾಜ್ಯ ಸರ್ಕಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮಕ್ಕಾಗಿ ಸಿಂಧು ದೇವರ ನಾಡಿಗೆ ಆಗಮಿಸಿದ್ದರು.
undefined
ಕೇರಳ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ. ಸುನಿಲ್ 10 ಲಕ್ಷ ರುಪಾಯಿಗಳ ಚೆಕ್ಕನ್ನು ಸಿಂಧುವಿಗೆ ಹಸ್ತಾಂತರಿಸಿದರು.
undefined
ಸಿಂಧು ಕೇರಳದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ ಹಾಗೂ ಆಟ್ಟುಕಲ್ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ತಾಯಿ ಪಿ. ವಿಜಯ ಸಾಥ್ ನೀಡಿದರು.
undefined
ಸಿಂಧು ದೇವಸ್ಥಾನಕ್ಕೆ ಭೇಟಿ ನೀಡುವಾಗ ಕೇರಳ ಸಾಂಪ್ರದಾಯಿಕ ಉಡುಗೆ ಸೆಟ್ ಮುಂಡು ತೊಟ್ಟು ಕಂಗೊಳಿಸಿದರು.
undefined
ಇದೇ ವರ್ಷ ಆಗಸ್ಟ್ 25ರಂದು ಸ್ವಿಟ್ಜರ್ ಲ್ಯಾಂಡ್’ನ ಬಾಸೆಲ್’ನಲ್ಲಿ ನಡೆದ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್’ನಲ್ಲಿ ಜಪಾನಿನ ನೊಜೋಮಿ ಒಕುಹರಾರನ್ನು 21-7, 21-7 ನೇರ ಗೇಮ್’ನಲ್ಲಿ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಈ ಮೂಲಕ ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್ ಆದ ಮೊದಲ ಭಾರತೀಯ ಆಟಗಾರ್ತಿ ಎನ್ನುವ ಗೌರವಕ್ಕೂ ಭಾಜನರಾದರು.
undefined
ರಿಯೋ ಒಲಿಂಪಿಕ್ಸ್’ನಲ್ಲಿ ಬೆಳ್ಳಿ ಗೆದ್ದಿದ್ದ ಸಿಂಧು, ಟೋಕಿಯೋ ಒಲಿಂಪಿಕ್ಸ್’ನಲ್ಲಿ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
undefined
click me!